ಶಿವಮೊಗ್ಗ,ಜು.೧೦: ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿಯವರು ಅಗ್ನಿಪಥ್ ಯೋಜನೆಯ ಬಗ್ಗೆ ಹಗುರವಾಗಿ ಮಾತನಾಡಿದ್ದು, ಇದು ಸೈನಿಕರಿಗೆ ಮಾಡಿದ ಅವಮಾನವಾಗಿದೆ. ಅವರು ಯುವಜನತೆಯ ಕ್ಷಮೆ ಕೇಳಬೇಕು ಎಂದು ಜಿಲ್ಲಾ ಬಿಜೆಪಿ ಪೂರ್ವ ಸೈನಿಕರ ಪ್ರಕೋಷ್ಠದ ಸಂಚಾಲಕ ಉಮೇಶ್ ಬಾಪಟ್ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಗ್ನಿಪಥ್ ಯೋಜನೆಯು ಭಾರತದ ಸೈನ್ಯವನ್ನು ಬಲಪಡಿಸುವ ದೇಶವನ್ನು ಕಾಪಾಡುವ ದೇಶ ಸೇವೆಯೇ ಪರಮೋಚ್ಛ ಎಂದು ಬಿಂಬಿಸುವ ಯೋಜನೆಯಾಗಿದೆ. ಆದರೆ, ಕಾಂಗ್ರೆಸ್ಸಿಗರು ಅದರಲ್ಲೂ ರಾಹುಲ್‌ಗಾಂಧಿಯವರು ಈ ಯೋಜನೆಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.


ಪ್ರಧಾನಿ ಮೋದಿಯವರು ಭಾರತೀಯ ಸೈನ್ಯಕ್ಕೆ ಬಲತುಂಬುತ್ತಿದ್ದಾರೆ. ಸೈನಿಕರಿಗೆ ಎಲ್ಲಾ ಸೌಕರ್ಯಗಳನ್ನು ಒದಗಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿಯೇ ಯುವ ಸೈನಿಕರು ಹೆಚ್ಚಾಗಬೇಕು ಎಂಬ ಹಿನ್ನಲೆಯಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈಗಾಗಲೇ ಸುಮಾರು ೮೦ ಸಾವಿರ ಯುವಕರು ಈ ಯೋಜನೆಯಲ್ಲಿ ದೇಶ ಸೇವೆ ಮಾಡುತ್ತಿದ್ದಾರೆ. ಈ ವರ್ಷದ ಅಂತ್ಯದೊಳಗೆ ಸುಮಾರು ೧.೭೫ ಲಕ್ಷ ಸೈನಿಕರು ನೇಮಕವಾಗಬಹುದಾಗಿದೆ ಎಂದರು.


೧೮ ವರ್ಷ ಮೇಲ್ಪಟ್ಟವರು, ಈ ಯೋಜನೆಯಡಿ ಸೈನ್ಯಕ್ಕೆ ಸೇರಬಹುದು. ಇವರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿಗಾಗಿಯೇ ಒಬ್ಬೊಬರಿಗೆ ೧ ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಲಾಗುತ್ತಿದೆ. ಇದು ೪ ವರ್ಷದ ಅವಧಿಗೆ ಇರುತ್ತದೆ. ವಾಪಾಸ್ಸು ಬಂದ ಮೇಲೆ ಡಿಗ್ರಿ ಪ್ರಮಾಣ ಪತ್ರ ಜೊತೆಗೆ ೧೨ ಲಕ್ಷ ರೂ. ನಗದನ್ನು ನೀಡಲಾಗುತ್ತದೆ. ಇದರ ಜೊತೆಗೆ ಪ್ರತಿ ತಿಂಗಳು ೩೫ ಸಾವಿರದಿಂದ ೪೫ ಸಾವಿರದವರೆಗೆ ವೇತನ

ನೀಡಲಾಗುತ್ತದೆಯೇ ಇದೊಂದು ದೇಶದ ಸೇವೆಗೆ ಜೊತೆಗೆ ಯುವಕರಲ್ಲಿ ಆರ್ಥಿಕ ಬಲವನ್ನು ತುಂಬುವ ಮಹತ್ವದ ಯೋಜನೆಯಾಗಿದೆ ಎಂದರು.
ಸೈನಿಕ್ಕೆ ಸೇರುವ ವಯಸ್ಸನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಇದುವರೆಗೂ ೩೨ ವರ್ಷ ವಯಸ್ಸಿತ್ತು. ಆದರೆ ಈಗ ಇದನ್ನು ೨೮ ವರ್ಷಕ್ಕೆ ಇಳಿಸಲಾಗಿದೆ. ಒಂದು ಯುವ ಸೇನೆ ಪಡೆಯೇ ಇದರಿಂದ ತಯಾರಾಗುತ್ತದೆ ಎಂದರು.


ಇಂತಹ ಬಹುದೊಡ್ಡ ಮಹತ್ವದ ಯುವಕರಿಗೆ ಆಸರೆಯಾಗಿರುವ ದೇಶದ ಪ್ರೇಮ ಬೆಳೆಸುವ ಯೋಜನೆಯನ್ನು ಕಾಂಗ್ರೆಸ್ ಮುಖಂಡರು ಹಗುರವಾಗಿ ಮಾತನಾಡುತ್ತಿದ್ದು, ಸರಿಯಲ್ಲ. ಅವರು ಯುವಜನತೆಯ ಕ್ಷಮೆ ಕೇಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ದತ್ತಾತ್ರಿ, ಋಷಿಕೇಶ್ ಪೈ, ಶ್ರೀನಿವಾಸ್ ರೆಡ್ಡಿ, ಕೆ.ವಿ.ಅಣ್ಣಪ್ಪ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!