ಶಿವಮೊಗ್ಗ,ಜು.೯:ಮಾಜಿ ಸಚಿವ ಬಿ.ಸಿ.ಪಾಟೀಲ್ ಅವರ ಅಳಿಯ ಹೊನ್ನಾಳಿಯ ಕಾಡಿನಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನೆನ್ನೆ ಮಧ್ಯಾಹ್ನ ನಡೆದಿದೆ.
ಹೊನ್ನಾಳಿಯಲ್ಲಿ ವಿಷ ಸೇವಿಸಿದ ಪಾಟೀಲ ಅವರ ಅಳಿಯ ಪ್ರತಾಪ್ (೪೩) ಅವರನ್ನು ವಿಷಯ ತಿಳಿಯುತ್ತಿದ್ದಂತೆ ಮೊದಲು ಹೊನ್ನಾಳಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ಶಿವಮೊಗ್ಗಕ್ಕೆ ಕರೆದೊಯ್ಯಲು ಸೂಚಿಸಿದ್ದಾರೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆತರುವಾಗಲೇ ಪ್ರತಾಪ್ ಮಾರ್ಗಮಧ್ಯೆ ಅಸು ನೀಗಿದ್ದಾರೆ. ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಮಾಡಿ ಅವರ ಹುಟ್ಟೂರಾದ ಕತ್ತಲಗೆರೆಯಲ್ಲಿ ಇಂದು ಅಂತ್ಯ ಸಂಸ್ಕಾರ ನಡೆಸಲಾಯಿತು.
ಪ್ರತಾಪ್ ಕುಮಾರ್ ಅವರು ಬಿಸಿ ಪಾಟೀಲರ ಮೊದಲನೇ ಅಳಿಯ ಎಂದು ತಿಳಿದು ಬಂದಿದೆ. ಬಿ.ಡಿ.ಪಾಟೀಲ್ ಅವರಿಗೆ ಇಬ್ವರು ಹೆಣ್ಣುಮಕ್ಕಳಿದ್ದು, ಪ್ರತಾಪ್ ಕುಮಾರ್ ಮೊದಲನೇ ಮಗಳ ಗಂಡ ಎನ್ನಲಾಗಿದೆ.
ಮೆಗ್ಗಾನ್ ಮರಣೋತ್ತರ ಪರೀಕ್ಷೆ ಕೇಂದ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೇಂದ್ರ, ಸಂಸದ ರಾಘವೇಂದ್ರ, ಮಾಜಿ ಸಚಿವ ರೇಣುಕಾಚಾರ್ಯ ಮಾಜಿ ಸಚಿವ ಬಿಸಿ ಪಾಟೀಲರನ್ನ ಭೇಟಿ ಮಾಡಿ ಸಾಂತ್ವಾನ ಹೇಳಿದರು.
ಈ ಸಂದರ್ಭದಲ್ಲಿ ಬಿ.ಸಿ ಪಾಟೀಲ್ ಮಾತನಾಡಿ, ಪ್ರತಾಪ್‌ಗೆ ಮಕ್ಕಳಾಗಿರಲಿಲ್ಲ. ಮಕ್ಕಳ ವಿಚಾರದಲ್ಲಿ ಕೊರಗಿತ್ತು. ಮದ್ಯ ವ್ಯಸನ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿತ್ತು. ಬೆಳಿಗ್ಗೆ ಒಟ್ಟಿಗೆ ತಿಂಡಿ ತಿಂದಿದ್ವಿ. ಊರಿಗೆ ಹೋಗುವುದಾಗಿ ಹೇಳಿ ಕತ್ತಲಗೆರೆಗೆ ಹೋಗಿದ್ದರು. ಹೊನ್ನಾಳಿಯಿಂದ ಪ್ರಭು ಎನ್ನುವರು ಕರೆ ಮಾಡಿ ವಿಷಯ ತಿಳಿಸಿದ್ದರು ದಾವಣಗೆರೆಗೆ ಕರೆದೊಯ್ಯಲು ಸೂಚಿಸಿದ್ದೆ. ಆದರೆ ವೈದ್ಯರು ಶಿವಮೊಗ್ಗಕ್ಕೆ ಹೋಗಲು ತಿಳಿಸಿದ್ದರು. ಮಾರ್ಗ ಮದ್ಯದಲ್ಲಿ ಸಾವಾಗಿದೆ ಎಂದರು.
ಪ್ರತಾಪ್ ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಪದವಿಧರರಾಗಿದ್ದರು. ೨೦೦೮ ರಲ್ಲಿ ಪಾಟೀಲರ ಮಗಳಾದ ಸೌಮ್ಯರನ್ನ ಮದುವೆಯಾಗಿದ್ದರು. ಪಾಟೀಲರು ಸಹೋದರ ಮಾವ ಆಗಿದ್ದರು. ಪಾಟೀಲರ ಎರಡನೇ ಮಗಳ ಮದುವೆಯಾದ ನಂತರ ಪ್ರತಾಪ್‌ಗೆ ಗಿಲ್ಟಿ ಕಾನ್ಷಿಯಸ್ ನೆಸ್ ಆರಂಭವಾಗಿದೆ. ತನ್ನನ್ನ ನಿರ್ಲಕ್ಷಿಸಲಾಗುತ್ತಿದೆ ಎಂಬ ಅನುಮಾನ ಹುಟ್ಟಿದ ಕಾರಣ ಆತ ಖಿನ್ನತೆಗೂ ಜಾರಿದ್ದ ಎನ್ನಲಾಗಿದೆ.