ಶಿವಮೊಗ್ಗ,ಜು.೯: ಗಾಂಧಿ ಬಜಾರ್‌ನಲ್ಲಿ ರಸ್ತೆ ಮಧ್ಯೆ ಶೇಂಗ ಮತ್ತು ಜೋಳ ಮಾರಾಟ ಮಾಡುವ ತಳ್ಳುವ ಗಾಡಿ ಇಟ್ಟು ವ್ಯಾಪಾರ ನಡೆಸುತ್ತಿದ್ದವನಿಗೆ ಟ್ರಾಫಿಕ್ ಪೊಲೀಸರು ಹಲ್ಲೆ ಮಾಡಿದ ಆರೋಪ ಕೇಳಿಬಂದಿದ್ದು ನೆನ್ನೆ ಗಾಂಧಿಬಜಾರ್‌ನ ವರ್ತಕರು ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.


ಟ್ರಾಫಿಕ್ ಸಿಬ್ಬಂದಿಯೋರ್ವರು ರಸ್ತೆ ಮೇಲಿಂದ ವ್ಯಾಪಾರ ಮಾಡುವುದನ್ನ ನಿಲ್ಲಿಸಿ ಬೇರೆಡೆಗೆ ತೆಗೆದುಕೊಂಡು ಹೋಗಲು ಗಾಡಿಯವರಿಗೆ ಸೂಚಿಸಿದ್ದಾರೆ. ಆ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ. ಪೇದೆ ಶೇಂಗಾ ಅಳತೆ ಮಾಡಿ ಕೊಡುವ ಸೇರಿನಿಂದ ಗಾಡಿಯ ಮಾಲೀಕನಿಗೆ ಹೊಡೆದರು ಎನ್ನಲಾಗಿದೆ.


ಮಧ್ಯಾಹ್ನದಿಂದಲೂ ಸೂಚನೆ ನೀಡಿದರೂ ಅಂಗಡಿಯವನು ತೆಗೆಯದ ಕಾರಣ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಸೇರನ್ನ ಕಿತ್ತುಕೊಳ್ಳುವಾಗ ಅಚನಾಕ್ಕಾಗಿ ಆತನ ತಲೆಗೆ ಹೊಡೆತ ಬಿದ್ದಿದೆ. ಎಂದು ಪೊಲೀಸರು ಹೇಳುತ್ತಾರೆ. ಆದರೆ ಈ ಘಟನೆಯಿಂದ ಸ್ಥಳೀಯರು ಪೊಲೀಸರ ವಿರುದ್ಧ ರೊಚ್ಚಿಗೆದ್ದಿದ್ದಾರೆ. ವ್ಯಾಪಾರಿಯನ್ನ ಗಾಯಗೊಳಿಸಿದ ಪೊಲೀಸರ ವಿರುದ್ಧ ಕಾನೂನಿನಂತೆ ದೂರ ದಾಖಲಿಸುವಂತೆ ಪಟ್ಟು ಹಿಡಿದಿದ್ದಾರೆ.


ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್, ಡಿವೈಎಸ್ಪಿ ಬಾಬು ಆಂಜನಪ್ಪ, ದೊಡ್ಡಪೇಟೆ ಪಿಐ ರವಿ ಸಂಗನ ಗೌಡ ಮೊದಲಾದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಸಿಸಿ ಟಿವಿ ಫೂಟೇಜ್ ಇದ್ದು ಘಟನೆ ಪರಿಶೀಲಿಸಿ ಪೋಲಿಸರು ತಪ್ಪಿತಸ್ಥರಾದಲ್ಲಿ ಕ್ರಮ ಕೈಗೊಳ್ಳುವ ಭರವಸೆಯನ್ನು ಎಸ್ಪಿ ನೀಡಿದ್ದಾರೆ. ಬಳಿಕ ಸ್ಥಳೀಯ ವರ್ತಕರು ಪ್ರತಿಭಟನೆ ಹಿಂಪಡೆದಿದ್ದಾರೆ.


ಆದರೆ ಶೇಂಗಾ ಮಾರುವ ವ್ಯಕ್ತಿಗೆ ಮೆಗ್ಗಾನ್‌ನಲ್ಲಿ ಸ್ಟಿಚ್ ಹಾಕಲಾಗಿದೆ. ಆತ ಮಾಮೂಲಿ ಕೇಳುದ್ರೆ ಕೊಡ್ತಾ ಇದ್ದವಿ, ಆದರೆ ಆತ ಬಂದು ಏಕಾಏಕಿ ತಲೆಗೆ ಸೇರಿನಿಂದ ಹೊಡೆದಿರುವುದಾಗಿ ವ್ಯಾಪಾರಿ ಆರೋಪಿಸಿದ್ದು, ನಾನು ನನ್ನ ಹೆಂಡತಿ ಹಾಗೂ ಮಗಳೊಂದಿಗೆ ಹೊಟ್ಟೆಪಾಡಿಗಾಗಿ ತಳ್ಳುವ ಗಾಡಿಯಲ್ಲಿ ಹಲವಾರು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದು, ಎಲ್ಲಾ ಪೊಲೀಸರು ನನಗೆ ಪರಿಚಿತರೇ ಆದರೆ ಈತನೊಬ್ಬ ಈ ರೀತಿ

ವರ್ತಿಸಿದ್ದಾನೆ. ಆತನ ಮೇಲೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ. ಸ್ಥಳದಲ್ಲೇ ಸಿಸಿ ಕ್ಯಾಮರಾ ಪುಟೇಜ್ ಲಭ್ಯವಿದ್ದು, ವಾಸ್ತವಾಂಶ ನೋಡಿ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಲಿ ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!