https://youtu.be/JA9a3TUtz7A?si=UO3x06Gr88jy-f-q
*ಹಿಮಾಚಲ ಪ್ರದೇಶದ ಕುಲು ಕಣಿವೆಯ ಚಂದ್ರಕಾಣಿ ಪಾಸ್ ನ 12500 ಅಡಿ ಎತ್ತರ ಪ್ರದೇಶದಲ್ಲಿ ಸಂಸ್ಕೃತ ಧ್ವಜಾರೋಹಣ/ ರಾಷ್ಟ್ರದ ಸಾಹಸಿಗಳೊಂದಿಗೆ ಶಿವಮೊಗ್ಗ ಅನಾವಿ ನೇತೃತ್ವದ ತಂಡದ ಝೇಂಕಾರ ಮೇಲಿನಲಿಂಕ್ ಬಳಸಿ vidio ನೋಡಿ- ತುಂಗಾತರಂಗ, ಶಿವಮೊಗ್ಗ


ಶಿವಮೊಗ್ಗ, ಮೇ.26:
ದೇವತೆಗಳು ಹೇಗೆ ಹಿಮಾಲಯದಲ್ಲಿ ನೆಲಸಿರುವವರೊ ಹಾಗೇ ಭಾರತದ ಆತ್ಮದಲ್ಲಿ ಸಂಸ್ಕೃತ ನೆಲಸಿದೆ ಎಂದು ಮೈಸೂರಿನ ಕೃಷ್ಣಕುಮಾರ್ ತಿಳಿಸಿದರು

ಅವರು ಇಂದು
ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ದೆಹಲಿ, ಸಂಸ್ಕೃತ ಭಾರತಿ ಶಿವಮೊಗ್ಗ, ಯೂತ್‌ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕ, ಗೀರ್ವಾಣ ಭಾರತಿ ಶ್ರೀ ಆದಿಚುಂಚನಗಿರಿ ಘಟಕ, ಹಾಗೂ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಆಶ್ರಯದಲ್ಲಿ ಹಿಮಾಚಲ ಪ್ರದೇಶದ ಚಂದ್ರಕಾಣಿ ಪಾಸ್ ನಲ್ಲಿ ಸಂಸ್ಕೃತ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತ
ಸಂಸ್ಕೃತ ಭಾಷೆಯನ್ನು ನಾವು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವಂತಹ ಯೋಜನೆಗಳನ್ನು ರೂಪಿಸಬೇಕು.
ದೇವತಾತ್ಮ ಹಿಮಾಲಯವಾದರೆ ಭಾರತಾತ್ಮ ಸಂಸ್ಕೃತ ಎನ್ನುವ ಧ್ವಜದ ಘೋಷವಾಕ್ಯ ಅರ್ಥಪೂರ್ಣವಾಗಿದೆ
ಎಂದರು.


ಧ್ವಜದ ವಾಕ್ಯ ಸಾರ್ಥಕವಾಗಬೇಕಾದರೆ ಇಲ್ಲಿ ಆಗಮಿಸಿರುವ 14 ರಾಜ್ಯ ಪ್ರತಿನಿಧಿಗಳು ತಮ್ಮ ತಮ್ಮ ರಾಜ್ಯದಲ್ಲಿ ಸಂಸ್ಕೃತದ ಪ್ರಚಾರ ಕಾರ್ಯವನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ದೇಶಾದ್ಯಂತ ಸಂಸ್ಕೃತಕೊಸ್ಕರವಾಗಿಯೇ ಕಾರ್ಯ ನಿರ್ವಹಿಸುತ್ತಿರುವ ಸಂಸ್ಕೃತ ಭಾರತಿ ಸದಾ ನಮಗೆ ಸಹಕಾರ ನೀಡುತ್ತದೆ ಇದರ ಸಹಕಾರ ಪಡೆದುಕೊಳ್ಳಿ ಎಂದು
ಕರೆ ನೀಡಿದರು.
ಸಂಸ್ಕೃತ ಮೃತ ಭಾಷೆಯಲ್ಲ ಇದು ಅಮೃತ ಭಾಷೆ, ನಮ್ಮ ಋಷಿ ಮುನಿಗಳು ನಮಗಾಗಿ ನೀಡಿದ ಜ್ಞಾನದ ಕಣಜವೆಂದರು. ಇಂತಹ ಸಮೃದ್ಧವಾದ ಭಾಷೆಯನ್ನು ಜಾತಿ ಮತ ಬೇದವಿಲ್ಲದೆ ಎಲ್ಲರಿಗೂ ಕಲಿಸುವಂತಹ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕೆಂದು ಆಶಯ ವ್ಯಕ್ತ ಪಡಿಸಿದರು.

ಇತಿಹಾಸದಲ್ಲಿ ಭಾಷೆಯೊಂದರ ಪ್ರಚಾರಕ್ಕಾಗಿ ಇಂತಹ ಸಾಹಸ ಕಾರ್ಯ ಅಭಿನಂದನೀಯ ಇಂತಹ ಅವಕಾಶ ಕಲ್ಪಿಸಿದ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯವರಿಗೆ ಧನ್ಯವಾದ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯದ ಚಾರಣದ ಸಂಯೋಜನಾಧಿಕಾರಿ ಮನೋಜ್ ಮಿಶ್ರಹಾಗೂ ಚಾರಣದ ಮುಖ್ಯಸ್ಥರಾದ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ನಗರದ ಸಾಹಸಿ ಅ.ನಾ.ವಿಜಯೇಂದ್ರ ರಾವ್,ಚಾರಣಿಗರ ತಂಡದ ನಾಯಕರಾಗಿ ಮಾರ್ಗದರ್ಶಕರಾಗಿದ್ದರು.
ಚಾರಣದ ನಾಯಕರಾದ ಸುಂದರಲಾಲ್ ಪಾಂಡೆ, ನಾಗೇಂದ್ರ, ಆದಿತ್ಯಪ್ರಸಾದ್, ಉಮಾಮಹೇಶ್ವರ ಉಪಸ್ಥಿತರಿದ್ದರು.


ದೇಶದ 1೩ ರಾಜ್ಯಗಳಿಂದ ಕೇಂದ್ರೀಯ ವಿಶ್ವ ವಿದ್ಯಾನಿಲಯದ 25 ಜನ ವಿದ್ಯಾರ್ಥಿಗಳ ಜೊತೆಗೆ ಕರ್ನಾಟಕದ 26ಜನರ ತಂಡ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸೋಲಾಟಾಂಕಿ, ಮೌಂಟೇನಾಗ, ಉಬ್ಲತಾಜ್, ದೋರನಾಲ ಶಿಬಿರಗಳನ್ನು ದಾಟಿ 12500 ಅಡಿ ಎತ್ತರದ ಹಿಮಾಲಯದ ಚಂದ್ರಕಾಣಿ ಪಾಸ್ ನಲ್ಲಿ 25.05.2024 ರ ಬೆಳಿಗ್ಗೆ 11 ಗಂಟೆಗೆ ಸಂಸ್ಕೃತ ಧ್ವಜಾರೋಹಣ ನೆರವೇರಿಸಿ ನಯಾತಪ್ರು ಶಿಬಿರಕ್ಕೆ ಬಂದು ಅಲ್ಲಿಂದ ಬೇಸ್ ಕ್ಯಾಂಪ್ ಗೆ ಹಿಂದಿರುಗಿ ಬಂದಿರುತ್ತಾರೆ.


ಐದು ದಿನಗಳಲ್ಲಿ ಸುಮಾರು 60 ಕಿಲೋಮೀಟರ್ ಚಾರಣ ಮಾಡಿರುತ್ತಾರೆ. 14 ಜನ ಬಾಲಕಿಯರು ಮಹಿಳೆಯರು ಸೇರಿದಂತೆ ಒಟ್ಟು 51 ಜನ ಸಂಸ್ಕೃತ ವಿದ್ಯಾರ್ಥಿಗಳು, ಸಂಸ್ಕೃತ ಪ್ರೇಮಿಗಳು ಚಾರಣದಲ್ಲಿದ್ದರು.
ಇದು ಸಂಸ್ಕೃತ ಕ್ಷೇತ್ರದಲ್ಲಿ ಐದನೇಯ ಬಾರಿಯ ಚಾರಣವಾಗಿದ್ದು ಈ ಬಾರಿಯ ವಿಶೇಷವೆಂದರೆ ರಾಷ್ಟ್ರದ ನಾನಾ ರಾಜ್ಯದಿಂದ ಪ್ರತಿನಿಧಿಗಳು ಭಾಗವಹಿಸಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!