ಶಿವಮೊಗ್ಗ: ಹೊಳೆಹೊನ್ನೂರಿನ ವಿವೇಕಾನಂದ ಲಯನ್ಸ್ ವಿದ್ಯಾವರ್ಧಕ ಟ್ರಸ್ಟ್ ವತಿಯಿಂದ ಪ್ರಸಕ್ತ ಸಾಲಿನಿಂದ ವಿವೇಕಾನಂದ ಲಯನ್ಸ್ ಪದವಿ ಪೂರ್ವ ಕಾಲೇಜನ್ನು ಆರಂಭಿಸಲಾಗುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ಜಿ.ಆರ್. ಸೀತಾರಾಮ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1986ರಿಂದ ಸ್ಥಾಪನೆಗೊಂಡ ವಿವೇಕಾನಂದ ವಿದ್ಯಾವರ್ಧಕ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡುತ್ತಾ ಸದುದ್ದೇಶದಿಂದ 1987ರಲ್ಲಿ ನರ್ಸರಿಯಿಂದ ಪ್ರಾಥಮಿಕ ಶಾಲೆ ಆರಂಭಿಸಿತು
. 1995 ರಿಂದ 2017ರ ಅವಧಿಯಲ್ಲಿ ಆಂಗ್ಲ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಪ್ರಾರಂಭಿಸಲಾಯಿತು. ಚನ್ನಗಿರಿ ರಸ್ತೆಯಲ್ಲಿ ಸಂಸ್ಥೆಯು ಎರಡು ಎಕರೆ ಜಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಂಡು ಶಾಲೆಗಳನ್ನು ನಡೆಸಲಾಗುತ್ತಿದೆ ಎಂದರು.
ಎಸ್ಎಸ್ಎಲ್ಸಿಯಲ್ಲಿ ಪ್ರತಿವರ್ಷ ಶೇ. 100 ರಷ್ಟು ಫಲಿತಾಂಶ ಬರುತ್ತಿದ್ದು, ಈ ಶಾಲೆಯಲ್ಲಿ ಓದಿದವರು ಉನ್ನತ ಹುದ್ದೆಗಳಲ್ಲಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಆರಂಭಿಸಿರುವ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಮತ್ತು ವಾಣಿಜ್ಯ
ವಿಭಾಗಗಳಿವೆ. ಕಡಿಮೆ ಶುಲ್ಕದಲ್ಲಿ ಪ್ರವೇಶ ನೀಡಲಾಗುವುದು. ಎಲ್ಲಾ ಸೌಲಭ್ಯಗಳಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ದ್ಯಾಮಪ್ಪ, ಸಹ ಕಾರ್ಯದರ್ಶಿ ಕೆ.ಆರ್. ಪ್ರವೀಣ್, ಆಡಳಿತಾಧಿಕಾರಿ ಇ. ರೇಣುಕಾ, ಪ್ರಾಂಶುಪಾಲ ಪ್ರೊ. ರಂಗನಾಥಯ್ಯ, ನಿರ್ದೇಶಕರಾದ ಹೆಚ್.ಸಿ. ರಾಜೇಶ್, ಮಹೇಶ್ವರಪ್ಪ, ಪಿ. ರುದ್ರೇಶನ್ ಹಾಗೂ ಸುರೇಶ್ ಉಪಸ್ಥಿತರಿದ್ದರು.