ಹೊಸನಗರ: ಹೊಸನಗರ ೧೦೦ ಹಾಸಿಗೆಗಳ ಆಸ್ವತ್ರೆ ಕಾಗೋಡು ತಿಮ್ಮಪ್ಪನವರ ಕನಸಿನ ಆಸ್ವತ್ರೆ ಇದಗಿದ್ದು ಸುಮಾರು ಅಂದಾಜು ನೂರು ಕೋಟಿಯಷ್ಟು ವೆಚ್ಚದಲ್ಲಿ ಹೊಸನಗರದ ಆಸ್ವತ್ರೆಯನ್ನು ಕಾಗೋಡು ತಿಮ್ಮಪ್ಪನವರು ಕಟ್ಟಿಸಿದರು ಹೊಸನಗರ ತಾಲ್ಲೂಕಿನ ಒಳ ಹಾಗೂ ಹೊರಗೆ ಹೋಗಿ ಸಾಕಷ್ಟು ಹಣ ವ್ಯಯ ಮಾಡುವುದು ಬೇಡ ಎಲ್ಲವೂ ಹೊಸನಗರ ಸರ್ಕಾರಿ ಆಸ್ವತ್ರೆಯಲ್ಲಿಯೇ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಈ ಸಾರ್ವಜನಿಕ ಆಸ್ವತ್ರೆಯನ್ನು ನಿರ್ಮಾಣ ಮಾಡಲಾಗಿತ್ತು ಅದರೆ ಕಾಗೋಡು ತಿಮ್ಮಪ್ಪನವರ ಕನಸಿಗೆ ತಣ್ಣಿರು ಎರಚಿ ಈ ಆಸ್ವತ್ರೆ ಸ್ಥಿತಿಗತಿಯನ್ನು ನೋಡಿದರೇ ಸ್ವತಹ ಕಾಗೋಡು ತಿಮ್ಮಪ್ಪನವರೇ ದುಖಿಸುವ ಹಾಗೇ ಆಗಿದೆ.


೨೫ಜನ ಒಳ ರೋಗಿಗಳಿದ್ದರೂ ಎರಡೇ ಲೀಟರ್ ಹಾಲು: ಹೊಸನಗರ ಸಾರ್ವಜನಿಕ ಸರ್ಕಾರಿ ಆಸ್ವತ್ರೆಯಲ್ಲಿ ಹಾಲು ಬೆಳಿಗ್ಗೆ ಒಳ ರೋಗಿಗಳಿಗೆ ಹಾಲು ನೀಡುವ ಪದ್ಧತಿ ಉಂಟು ಇದು ಎಲ್ಲ ಸರ್ಕಾರಿ ಆಸ್ವತ್ರೆಗಳಲ್ಲಿಯೂ ಹಾಲು ಕೊಡುತ್ತಾರೆ ಆದರೆ ಬೇರೆ ತಾಲ್ಲೂಕಿನ ಆಸ್ವತ್ರೆಗಳಲ್ಲಿ ಒಳ ರೋಗಿಗಳು ಎಷ್ಟು ಜನರಿದ್ದಾರೆ ಎಂದು ಬೆಳಿಗ್ಗೆ ಡೃರಿಗೆ ಹೋಗಿ ಹಾಲು ತಂದು ಬಿಸಿ ಮಾಡಿಕೊಡುತ್ತಾರೆ ಆದರೆ ಹೊಸನಗರದ ಸರ್ಕಾರಿ ಸಾರ್ವಜನಿಕ ಆಸ್ವತ್ರೆಯಲ್ಲಿ ಒಳ ರೋಗಿಗಳು ೨೫ಜನರಿದ್ದರೂ ಪ್ರತಿದಿನ ಎರಡೇ ಲೀಟರ್ ಹಾಲು ತಂದು ಬಿಸಿ ಮಾಡಿಕೊಡುವ ಪದ್ದತಿ ಚಾಲ್ತಿಯಲ್ಲಿದೆ ಉಳಿದ ಹಾಲಿನ ದುಡ್ಡು ಎಲ್ಲಗೇ ಹೋಗುತ್ತಿದೆ? ಎಂದು ಕೇಳುವವರೇ ಇಲ್ಲವಾಗಿದೆ


ಪೂರ್ಣ ಪ್ರಮಾಣದ ದಾಖಲೆಯಿಲ್ಲ: ೧೦೦ ಹಾಸಿಗೆಗಳ ಸಾಮಥ್ಯದ ಹೊಸನಗರ ಸಾರ್ವಜನಿಕ ಆಸ್ವತ್ರೆ ಯಾವತ್ತು ಪೂರ್ಣಪ್ರಮಾಣವಾದ ದಾಖಲೆಗಳಿಲ್ಲ ಅದರಲ್ಲಿಯೂ ಇಲ್ಲಿಯವರೆವಿಗೂ ಕೊರತೆಗಳನ್ನೆ ಎದುರಿಸುತ್ತಾ ಬಂದಿದೆ.
೧೦೮ ಸಮಸ್ಯೆ; ಹೊಸನಗರ ತಾಲ್ಲೂಕಿನಲ್ಲಿ ೧೦೮ರ ಸಮಸ್ಯೆಗಳು ಹೆಚ್ಚಿನ ಪ್ರಮಾಣದಲ್ಲಿದ್ದು ವಾಹನದ ಟೈಯರ್‌ಗಳು ಸವೆದು ಹೋಗಿದ್ದು ಯಾವ ಸಂದರ್ಭದಲಿ ಸಿಡಿಯುತ್ತದೆ ಯಾರ ಜೀವ ಹೋಗುತ್ತದೆ ಎಂದು ಹೇಳುವುದೇ ಕಷ್ಟಕರವಾಗಿದೆ.
ಜನೌಷಧಿ ಕೇಂದ್ರಗಳಿಲ್ಲ: ನರೇಂದ್ರ ಮೋದಿಯವರ ಕನಸಿನ ಜನೌಷಧಿ ಕೇಂದ್ರ ಬಾಗಿಲು ಹಾಕಿ ಎರಡು ವರ್ಷಗಳೇ ಕಳೆದಿದೆ ಬಾಗಿಲು ತೆರೆಸುವ ಕಾರ್ಯಕ್ಕೆ ಯಾರು ಮುಂದು ಬಂದಿಲ್ಲ.


ನಾಲ್ಕು ಜನ ವೈದ್ಯರಿಂದ ಕೆಲಸ ನಿರ್ವಹಣೆ: ನೂರು ಹಾಸಿಗೆ ಸಾಮಥ್ಯ ವಿರುವ ಈ ಆಸ್ವತ್ರೆಯಲ್ಲಿ ನಾಲ್ಕು ಜನ ವೈದ್ಯರು ರಾತ್ರಿ-ಹಗಲು ಎನ್ನದೇ ಕೆಲಸ ನಿರ್ವಹಿಸುತ್ತಿದ್ದಾರೆ ಅವರಿಗೂ ಅನಿವಾರ್ಯವಾಗಿದೆ ಇರುವ ನಾಲ್ಕು ಜನ ವೈದ್ಯರು ಯಾವುದೇ ಬೇಸರ ಮಾಡಿಕೊಳ್ಳದೇ ಬಂದವರನ್ನು ತಮ್ಮ ಕುಟುಂಬದವರೇ ಎಂಬ ರೀತಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಹೊಸನಗರ ಆಸ್ವತ್ರೆಯಲ್ಲಿ ಸಂಬಳ, ಬೇರೆ ಆಸ್ವತ್ರೆಯಲ್ಲಿ ಕೆಲಸ: ಗುತ್ತಿಗೆ ಆದಾರದ ಮೇಲೆ ಪ್ರಸುತಿ ತಜ್ಞರಾದ ಡಾ|| ಶರ್ಮಿತ, ಹಾಗೂ ಕೀಲು ತಜ್ಞರಾದ ಡಾ|| ರಾಹುಲ್ ಹೊಸನಗರ ಆಸ್ವತ್ರೆಗೆ ನೇಮಕಗೊಂಡಿದ್ದು ಅವರು ಈಗ ಸಾಗರದ ಆಸ್ವತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಸಂಬಳ ಹೊಸನಗರ ಆಸ್ವತ್ರೆಯಲ್ಲಿ ಕೆಲಸ ಸಾಗರದಲ್ಲಿ ಎಂಥಹ ವಿಪರ್ಯಸ ನೋಡಿ, ನೇತ್ರ ತಜ್ಞರಾದ ಡಾ|| ಶಂಶಾದ್ ಬೆಗಂ ಶಿವಮೊಗ್ಗ ಮೆಗ್ಗಾನ್ ಆಸ್ವತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇವರಿಗೂ ಹೊಸನಗರ ಆಸ್ವತ್ರೆಯಲ್ಲಿ ಸಂಬಳ ನೀಡಲಾಗುತ್ತಿದೆ ಕರ್ತವ್ಯ ಮಾತ್ರ ಸಾಗರ ಶಿವಮೊಗ್ಗಕ್ಕೆ ಮೀಸಲು ಇದು ಸಂಬಳ ಮಾತ್ರ ಹೊಸನಗರದ್ದು ಇದು ಯಾವ ನ್ಯಾಯ ಎಂದು ಜನರು ಪ್ರಶ್ನಿಸುತ್ತಿದ್ದಾರೆ


ಆಸ್ವತ್ರೆಯ ರಕ್ಷ ಕವಚ ಎತ್ತಾ ಸಾಗಿದೆ: ಹೊಸನಗರದಲ್ಲಿ ನೂತನ ಶಾಸಕರಾದ ಬೆಳೂರು ಗೋಪಾಲಕೃಷ್ಣರವರು ಶಾಸಕರಾದ ಮೇಲೆ ಆಸ್ವತ್ರೆಯ ರಕ್ಷ ಕವಚ ಸಮಿತಿ ರಚಿಸಲಾಯಿತ್ತು ಆದರೇ ರಕ್ಷ ಕವಚ ಸಮಿತಿಯ ಸದಸ್ಯರಿಗೆ ಆಸ್ವತ್ರೆಯ ನಡೆಯುವ ಸಮಸ್ಯೆಗಳು ಯಾವುದು ಅವರಿಗೆ ಗೊತ್ತಿಲ್ಲದಂತೆ ಕಾಣುತ್ತಿದೆ ರಕ್ಷ ಕವಚ ಸಮಿತಿಯ ಸದಸ್ಯರೇ ಎಚ್ಚರಗೊಳ್ಳಿ ಎಂದು ಹೊಸನಗರದ ಜನರು ಎಚ್ಚರಿಸಬೇಕಾಗಿದೆ?
ಶಾಸಕರೇ ಆಸ್ವತ್ರೆಗೆ ಬೇಟಿ ನೀಡಿ: ಹೊಸನಗರ-ಸಾಗರ ಕ್ಷೇತ್ರದ ಶಾಸಕರಾದ ಬೆಳೂರು

ಗೋಪಾಲಕೃಷ್ಣರವರು ನೂvನ ಶಾಸಕರಾದ ಮೇಲೆ ಎರಡು ಮೂರು ಬಾರೀ ಬೇಟಿ ನೀಡಿ ಮೀಟಿಂಗ್ ನಡೆಸಿದ್ದೇ ನಡೆಸಿದ್ದು ಹೊಸನಗರ ತಾಲ್ಲೂಕಿನ ಯಾವ ರೋಗಿಗೂ ತೊಂದರೇ ಯಾಗದಂತೆ ನೋಡಿಕೊಳ್ಳುವ ಗುರಿ ನನ್ನದು ಎಂದು ಹೇಳಿದ್ದು ಈ ಆಸ್ವತ್ರೆಯ ವೈದ್ಯರು ಬೇರೆ ತಾಲ್ಲೂಕಿಗೆ ನಿಯೋಜನ ಗೊಂಡಿರುವುದು ಕೇವಲ ನಾಲ್ಕು ಜನ ವೈದ್ಯರು ಹಗಲು-ರಾತ್ರಿ ಸೇವೆ ಸಲ್ಲಿಸುತ್ತಿರುವುದು ಇಲ್ಲಿಯವರೆವಿಗೆ ನಿಮ್ಮ ಗಮನಕ್ಕೆ ಬರಲಿಲ್ಲವೇ? ಬಂದರೂ ಹೊಸನಗರ ತಾಲ್ಲೂಕಿನ ಜನರು ಮುಗ್ದರು ಎಂದು ತಿಳಿದುಕೊಂಡಿರಬೇಕು ಅಲ್ಲವೇ? ತಕ್ಷಣ ಶಾಸಕರು ಈ ಸರ್ಕಾರಿ ಆಸ್ವತ್ರೆಗೆ ಬೇಟಿ ನೀಡಿ ಒಳ ಹೊರ ರೋಗಿಗಳಿಗೆ ಸರಿಯಾದ ರೀತಿಯಲ್ಲಿ ಹಾಲು ವಿತರಿಸಬೇಕು ಹಾಗೂ ಬೇರೆ ತಾಲ್ಲೂಕಿಗೆ ನಿಯೋಜನೆ ಗೊಂಡ ಡಾಕ್ಟರ್‌ಗಳನ್ನು ಇಲ್ಲಿಗೆ ಕರೆಸಿಕೊಳ್ಳಿ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಹೆಚ್.ಎಸ್.ನಾಗರಾಜ್

By admin

ನಿಮ್ಮದೊಂದು ಉತ್ತರ

error: Content is protected !!