ಶಿವಮೊಗ್ಗ:ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿರುವ ದುಷ್ಕರ್ಮಿಗಳನ್ನು ಇನ್ನೂ ಬಂಧಿಸಿಲ್ಲ ಎಂದು ಆರೋಪಿಸಿ ಕೋಟೆ ಪೊಲೀಸ್ ಠಾಣೆ ಮುಂದೆ ಹಿಂದು ಸಂಘಟನೆಗಳ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು.
ಹಿಂದೂ ಯುವಕರ ಮೇಲೆ ಹಲ್ಲೆ ಮತ್ತು ಕೊಲೆ ಯತ್ನ ನಡೆದು ಒಂದು ತಿಂಗಳು ಕಳೆದರೂ ಕೂಡ ಹಲ್ಲೆ ಮಾಡಿದ ಮುಸ್ಲಿಂ ಗೂಂಡಾಗಳನ್ನು ಇನ್ನೂ ಬಂಧಿಸಿಲ್ಲ. ಆದರೆ ಹಲ್ಲೆ ಮಾಡಿದವರನ್ನು ಬಿಟ್ಟು ಹಲ್ಲೆಗೊಳಗಾದ ಹಿಂದು ಯುವಕರನ್ನೆ ಪೊಲೀಸರು ಬಂಧಿಸಿದ್ದಾರೆ ಎಂದು ಸಂಘಟನೆ ಕಾರ್ಯಕರ್ತರು ಆರೋಪಿಸಿದರು.
ಬಂಧನ ಮಾಡಿರುವುದರ ಬಗ್ಗೆ ನಮ್ಮ ತಕರಾರು ಇಲ್ಲ. ಆದರೆ ಯಾರು ಹಲ್ಲೆ ಮಾಡಿದ್ದಾರೆ ಅವರನ್ನು ಬಿಟ್ಟು ಹಲ್ಲೆಗೊಳಗಾದ ಹಿಂದು ಯುವಕರನ್ನು ಬಂಧಿಸಿರುವುದು ಅಕ್ಷ್ಯಮ್ಯ ಅಪರಾಧವಾಗಿದೆ ಎಂದು ದೂರಿದರು.
ನಾಗೇಶ್ ಎಂಬ ಹಿಂದು ಯುವಕ ಏನೂ ತಪ್ಪು ಮಾಡಿರಲಿಲ್ಲ. ಆತ ಬಜರಂಗದಳದ ಕಾಂiiಕರ್ತ. ಅವರ ಮೇಲೆ ಹಲ್ಲೆ ನಡೆದರೆ ರಕ್ಷಣಾ ಇಲಾಖೆಗೆ ಏನು ಅನ್ನಿಸುವುದೇ ಇಲ್ಲ. ಆದರೆ ಹಿಂದು ಯುವಕರ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ. ಇದು ತಪ್ಪು ಎಂದು ಹಿಂದು ಸಂಘಟನೆಯ ಮುಖಂಡ ಎಸ್.ಎನ್.ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಹಿಂದು ಯುವಕರನ್ನು ಬೆಳಗಿನ ಜಾವವೇ ಕರೆದುಕೊಂಡು ಬಂದು ೩೦೭ ಕೇಸ್ ಹಾಕಿದ್ದಾರೆ. ಈ ೩೦೭ ಕೇಸ್ ಏಕೆ ಹಾಕಿದ್ದಾರೆಂದೇ ಅರ್ಥವಾಗುತ್ತಿಲ್ಲ. ಕೇಳಿದರೆ ನಮಗೆ ಮೇಲಿನಿಂದ ಒತ್ತಡ ಇದೆ ಎಂದು ಹೇಳುತ್ತಾರೆ. ಯಾರ ಒತ್ತಡ ಎಂದು ಅರ್ಥವಾಗುತ್ತಿಲ್ಲ. ಈ ಘಟನೆಯಲ್ಲಿ ಊರಿನಲ್ಲಿ ಇಲ್ಲದಿದ್ದವರ ಹೆಸರನ್ನು ಕೂಡ ಸೇರಿಸಲಾಗಿದೆ. ಇದರಿಂದ ಬೇಕೆಂದೇ ಕೇಸು ದಾಖಲಿಸಿಕೊಂಡಿದ್ದಾರೆ ಎಂಬುದು ಅರ್ಥವಾಗುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪೊಲೀಸ್ ಇಲಾಖೆ ಒಂದು ಕೋಮಿನ ಹಿಂದೆ ಕೆಲಸ ಮಾಡುತ್ತಿದೆ. ಮುಸಲ್ಮಾನ್ ಗೂಂಡಾಗಳನ್ನು ರಕ್ಷಣೆ ಮಾಡುತ್ತಿದೆ. ಹಿಂದುಯುವಕರ ಮೇಲೆ ಹಲ್ಲೆಯಾಗಿ ಒಂದು ತಿಂಗಳಾದರೂ ದುಷ್ಕರ್ಮಿಗಳನ್ನು ಬಂಧಿಸದ ಪೊಲೀಸ್ ಇಲಾಖೆ ಈಗ ಹಿಂದು ಯುವಕರನ್ನು ಬಂಧಿಸಿರುವುದು ಸರಿಯಲ್ಲ. ತಕ್ಷಣವೇ ಕೇಸು ವಾಪಾಸ್ ಪಡೆದು ಬಂಧಿತ ಹಿಂದು ಯುವಕರನ್ನು ಬಿಡುಗಡೆ ಮಾಡಬೇಕು. ಹಲ್ಲೆ ಮಾಡಿದ ಮುಸ್ಲಿಂ ಯುವಕರನ್ನು ಕೂಡಲೇ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ರಾಮು, ಇ.ವಿಶ್ವಾಸ್, ಬಳ್ಳೆಕೆರೆ ಸಂತೋಷ್, ಭವಾನಿ ಶಂಕರ್ ಸೇರಿದಂತೆ ಹಲವರಿದ್ದರು.