ಶಿವಮೊಗ್ಗ, ಮಾ.24:
ಶಿವಮೊಗ್ಗ ನಗರದಲ್ಲಿ ಅತ್ಯಂತ ಗ್ರಾಂಡ್ ಆಗಿ ನಡೆಯುವ ಹೋಳಿ ಹಬ್ಬ ಆಚರಣೆಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ದಿನಾಂಕವನ್ನು ನಿಗದಿಪಡಿಸಿದ್ದು ಮಾರ್ಚ್ 26ರ ಮಂಗಳವಾರದಂದು ನಿಗದಿತ ಅವಧಿಯಲ್ಲಿ ಹೋಳಿ ಹಬ್ಬವನ್ನು ಆಚರಿಸಲು ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ತುಂಗಾತರಂಗ ದಿನಪತ್ರಿಕೆ ಮಾಹಿತಿ ಹುಡುಕಲು ಹೋದಾಗ ಶಿವಮೊಗ್ಗ ನಗರದ ಪೊಲೀಸ್ ಇಲಾಖೆಯ ಇನ್ಸ್ ಪೆಕ್ಟರ್ ಗಳನ್ನು ಸಂಪರ್ಕಿಸಿದ್ದು, ಅವರಿಗೆ ಯಾವುದೇ ಮಾಹಿತಿ ಸಿಗದಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗ ಡಿವೈಎಸ್ಪಿ ಬಾಬು ಅಂಜನಪ್ಪ ಅವರನ್ನು ಮಾತನಾಡಿಸಿದಾಗ ಕಾರ್ಯಕ್ರಮವನ್ನು ಮಾಡಲು ನಿಗದಿತ ಸಮಯವನ್ನು ಗುರುತಿಸಲಾಗಿದೆ ಎಂದರು.
ಹಾಗೆಯೇ ಮಾರ್ಚ್ 26ರ ಮಂಗಳವಾರದಂದು ಬೆಳಗ್ಗೆ ಎಂಟರಿಂದ 12ರ ವರೆಗೆ ಕಾರ್ಯಕ್ರಮವನ್ನು ಹಾಗೂ ಹೋಳಿ ಹಬ್ಬದ ಆಚರಣೆಯನ್ನು ಮುಗಿಸಲು ಕೋರಿದೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಇಂತಹದೊಂದು ನಿರ್ಧಾರಕ್ಕೆ ಬರಲಾಗಿದೆ. ಈ ಪ್ರಸಕ್ತ ಅವಧಿಯಲ್ಲಿ ಚುನಾವಣೆ ನೀತಿ ಸಂಹಿತೆ ಹಾಗೂ ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಾಗು ಜಿಲ್ಲಾಡಳಿತ ಶಿಸ್ತು ಕ್ರಮ ಕೈಗೊಂಡಿದ್ದು, ಮಾರ್ಚ್ 26ರ ಹೋಳಿ ಹಬ್ಬ ಆಚರಣೆಯನ್ನು ಅತ್ಯಂತ ಶ್ರದ್ಧೆ, ಭಕ್ತಿ, ಸಡಗರ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ನಿಮ್ಮ ತುಂಗಾತರಂಗ ಮೂಲಗಳಿಗೆ ಖಚಿತ ಮಾಹಿತಿ ದೊರೆತಿದೆ.