ತುಂಗಾತರಂಗ ಜನದ್ವನಿ ವರದಿ
ಶಿವಮೊಗ್ಗ, ಮಾ.24:
ಈಗ ಬಿಸಿಲು ಹೆಚ್ಚಾಗಿದೆ. ಉಷ್ಣಾಂಶದ ಪ್ರಮಾಣ ಮಿತಿಮೀರಿದೆ. ಬಿರು ಬಿಸಿಲ ಹೊತ್ತಿನಲ್ಲಿ ರಸ್ತೆಯಲ್ಲಿ ತಿರುಗಾಡುವುದೇ ಕಷ್ಟವಾಗಿದೆ. ಅದರಲ್ಲೂ ಚುನಾವಣೆಯ ಈ ಹೊತ್ತಿನಲ್ಲಿ ತಿರುಗಾಟ ಕಷ್. ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರಿಗೆ ಸಾರ್ವಜನಿಕರ ಪರವಾಗಿ ತುಂಗಾತಂಗ ದಿನಪತ್ರಿಕೆ ಚಿಕ್ಕದೊಂದು ಮನವಿಯನ್ನು ಮಾಡುತ್ತಿದೆ.


ಪ್ರತಿದಿನ ಮಧ್ಯಾಹ್ನ 12:30 ರಿಂದ 4ರವರೆಗೆ ವಾಹನಗಳ ಸಂಚಾರ ಅತ್ಯಂತ ವಿರಳವಾಗಿರುತ್ತದೆ. ಈ ಸಮಯದಲ್ಲಿ ಸಿಗ್ನಲ್ ಗಳನ್ನು ಮುಕ್ತವಾಗಿ ಬಿಡಲು ವಿನಂತಿಸಿದ್ದಾರೆ.
ಕಾರಣ ಇಷ್ಟೇ. ದ್ವಿಚಕ್ರ ವಾಹನಗಳಲ್ಲಿ ಓಡಾಡುವ ಜನ ಸಿಗ್ನಲ್ ಬೀಳುವವರೆಗೂ ಕಾದಿರುವ ರಸ್ತೆಯ ಮೇಲೆ ಹಾಗೂ ಮೇಲಿಂದ ಬೀಳುವ ಉರಿ ಬಿಸಿಲಿನ ನಡುವೆ ನಿಂತುಕೊಳ್ಳುವುದು ಕಷ್ಟವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ಯಾರನ್ನಾದರೂ ಪೊಲೀಸರನ್ನು ಅಲ್ಲಿ ನಿಲ್ಲಿಸಿ, ಸಿಗ್ನಲ್ ಮುಕ್ತಗೊಳಿಸಿದರೆ ತುಂಬಾ ಅನುಕೂಲವಾಗುತ್ತದೆ.


60 ವರ್ಷ ದಾಟಿದ ಬಹಳಷ್ಟು ಜನ ಇಂತಹದೊಂದು ಕೋರಿಕೆಯನ್ನು ಪತ್ರಿಕೆಯ ಮೂಲಕ ತಮ್ಮಲ್ಲಿ ಕೇಳಿದ್ದಾರೆ.
ಸಿಗ್ನಲ್ ಗಳ ಸದ್ಬಳಕೆ ಬಗ್ಗೆ ಹಾಗೂ ಸಿಗ್ನಲ್ ಜಂಪಿಂಗ್ ಗಳ ದೂರು ದಾಖಲಾಗುವ ಬಗ್ಗೆ ಸಾರ್ವಜನಿಕರಿಗೆ ಇತ್ತೀಚೆಗೆ ಪ್ರಜ್ಞಾವಂತಿಕೆ ಬಂದಿದೆ ಎನ್ನಬಹುದು. ಒಂದೆಡೆ ಇದು ಸುಗಮ ಸಂಚಾರಕ್ಕೆ ಸೂಕ್ತವಾಗಿದ್ದರೂ ಸಹ ಮಧ್ಯಾಹ್ನದ ಉರಿಬಿಸಿಲಿನಲ್ಲಿ ಇದನ್ನು ದಯಮಾಡಿ ಮುಕ್ತಗೊಳಿಸಿದರೆ ಅನುಕೂಲವಾಗುತ್ತದೆ. ಬೇಸಿಗೆ ಮುಗಿದ ನಂತರ ಬೇಕಿದ್ದರೆ ಆರಂಭಿಸಿ ಎಂಬುದು ಎಸ್ಪಿಯವರಿಗೆ ಪ್ರೀತಿಯ ಮನವಿ.

By admin

ನಿಮ್ಮದೊಂದು ಉತ್ತರ

You missed

error: Content is protected !!