ಶಿವಮೊಗ್ಗ, ಜ.02:
ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜ್ ಸೇರಿದಂತೆ ಜಿಲ್ಲೆಯ ಮೂವರಿಗೆ ಮುಖ್ಯಮಂತ್ರಿಗಳ ಪದಕ ಲಭಿಸಿದೆ.
2019ರ ಸಾಲಿನ ಉತ್ತಮ ಸೇವೆಗಾಗಿ ಕರ್ನಾಟಕ ಸರ್ಕಾರ ಕೊಡಮಾಡುವ ಮುಖ್ಯಮಂತ್ರಿಗಳ ಪದಕಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಕೆ. ಎಂ. ಶಾಂತರಾಜ್ ಅವರು ಬಾಜನರಾಗಿದ್ದಾರೆ.
ಇದೇ ಸಾಲಿನಲ್ಲಿ ಶಿವಮೊಗ್ಗದ ಇಬ್ಬರು ಪೋಲೀಸ್ ಸಿಬ್ಬಂದಿಗಳಿಗೂ ಈ ಪುರಸ್ಕಾರ ದೊರೆತಿದೆ.
ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳ ಕಛೇರಿಯ ಕಂಪ್ಯೂಟರ್ ವಿಭಾಗದ ಟೆಕ್ನಿಕಲ್ ಸೆಲ್ ನ ಪೊಲೀಸ್ ಕಾನ್ಸ್ ಸ್ಟೇಬಲ್ ವಿಜಯ್ ಹಾಗೂ ಆಗುಂಬೆ ಪ್ರಿಂಗರ್ ಪ್ರಿಂಟ್ ನ ಎಎಸ್ ಐ ಅತೀಕ್ ರೆಹಮಾನ್ ಅವರಿಗೂ ಉತ್ತಮ ಸೇವೆಗಾಗಿ ಮುಖ್ಯಮಂತ್ರಿಗಳ ಪದಕ ದೊರೆತಿದೆ.
ಪ್ರಶಸ್ತಿ ಪುರಸ್ಕೃತ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಗಣ್ಯರು ಅಭಿನಂದಿಸಿದ್ದಾರೆ.