ಶಿವಮೊಗ್ಗ,ಮಾ.2: ಶಿವಮೊಗ್ಗ ಬರುವ ಲೋಕಸಭಾ ಚುನಾವಣೆಯಲ್ಲಿ ರಾಮ ಮತ್ತು ಧರ್ಮ ನಡೆಯುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿದ್ದರಾಮಯ್ಯ ಅವರ ಗ್ಯಾರಂಟಿ ಮುಂದೆ ಮೋದಿ ಅವರ ಗ್ಯಾರಂಟಿಯನ್ನು ಜನರು ಓಡಿಸಿ ಬಿಡುತ್ತಾರೆ ಕಳೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೋದಿಯವರು ಬಂದು ಜೈ ಭಜರಂಗಬಲಿ ಎಂದು ಘೋಷಣೆ ಕೂಗಿದರು ಆಂಜನೇಯ ಆಶೀರ್ವಾದ ಮಾಡಲಿಲ್ಲ ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಟಾಪನೆ ಬಳಿಕ ಊರು ಊರುಗಳಲ್ಲಿ ರಾಮನ ಫ್ಲೆಕ್ಸ್ ಹಾಕಿ ಹಾದಿ ಬೀದಿಯಲ್ಲಿ ಟ್ರ್ಯಾಕ್ಟರ್ ಜಟಕಾ ಗಾಡಿಗಳು ಅದರ ಮೇಲೆ ಓಡಾಡಿವೆ ಹಾಗಾಗಿ ಅದಕ್ಕೆಲ್ಲ ಜನ ಬೆಲೆ ಕೊಡುವುದಿಲ್ಲ ಎಂದರು.
ಧರ್ಮ ಏನಿದ್ದರೂ ಮನೆಯಲ್ಲಿ ಮಾತ್ರ ಸಾಮಾಜಿಕ ವ್ಯವಸ್ಥೆ ಸಂವಿಧಾನ ಈ ದೇಶದಲ್ಲಿ ಇದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿಯಿಂದಲೇ ಅಧಿಕಾರಕ್ಕೆ ಬಂದಿದ್ದೇವೆ ಐದಾರು ತಿಂಗಳಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಆಗಿದೆ ಹಾಗಾಗಿ ಜನ ಬೆಂಬಲಿಸುತ್ತಾರೆ ಎಂದರು.
ರಾಜ್ಯ ಬಿಜೆಪಿ ಅಧ್ಯಕ್ಷರು ಶೇಕಡ 20ರಷ್ಟು ಜನರಿಗೂ ಗ್ಯಾರಂಟಿ ಯೋಜನೆ ತಲುಪಿಲ್ಲ ಎಂದು ಹೇಳಿದ್ದಾರೆ ಅವರ ತೋಟದ ಮನೆ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಗ್ಯಾರಂಟಿ ಯೋಜನೆ ಲಾಭ ಪಡೆಯುತ್ತಿದ್ದಾರೆ ಈಗ ಭಾವನಾತ್ಮಕ ಎಲ್ಲಾ ಹೋಗಿದೆ ಅದು ಡೂಪ್ಲಿಕೇಟ್ ಎಂದು ಜನರಿಗೆ ಗೊತ್ತಾಗಿದೆ ವಿಧಾನಸಭಾ ಚುನಾವಣೆ ವೇಳೆ ಜನರಿಗೆ ಹೊಟ್ಟೆ ಹಸಿದಿತ್ತು ಹಾಗಾಗಿ ನಮ್ಮನ್ನು ಪುರಸ್ಕರಿಸಿದ್ದಾರೆ ಎಂದರು.
ಲೋಕಸಭಾ ಚುನಾವಣೆ ಅಭ್ಯರ್ಥಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದನ್ನು ಪಕ್ಷ ತೀರ್ಮಾನ ಮಾಡುತ್ತದೆ ಇಲ್ಲಿನ ಪ್ರತಿ ಕಾರ್ಯಕರ್ತರು ಅಭ್ಯರ್ಥಿಯಾಗಿ ಕೆಲಸ ಮಾಡುತ್ತಾರೆ, ಪಕ್ಷ ಸಂಘಟನೆ ಚೆನ್ನಾಗಿ ಆಗಿದೆ ಹಾಗಾಗಿ ಗೆಲುವು ಖಚಿತ 2019 ರಲ್ಲಿ ಬಂಗಾರಪ್ಪ ಅವರ ಸೋಲಿನಿಂದ ಆರಂಭವಾಗಿ ಕಳೆದ 14 ವರ್ಷಗಳಲ್ಲಿ ಕಾಂಗ್ರೆಸ್ ಇಲ್ಲಿ ಗೆದ್ದಿಲ್ಲ ಈ ಬಾರಿ ಗೆಲ್ಲುತ್ತೇವೆ ಎಂದರು.
ಕಳೆದ ಚುನಾವಣೆ ಬಳಿಕ ಗೀತಾ ಶಿವರಾಜಕುಮಾರ್ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎಂಬ ಪ್ರಶ್ನೆಗೆ ಗೀತಕ್ಕ ಅವರು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ ಬಳ್ಳಾರಿಯಲ್ಲಿ ಶಕ್ತಿ ಯೋಜನೆ ಚಾಲನೆ ನೀಡಲು ಶ್ರಮಿಸಿದ್ದಾರೆ ಅನೇಕ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.