ಶಿವಮೊಗ್ಗ, ಮಾರ್ಚ್ 02
    ಸೊರಬ ಪುರಸಭೆಯ 2023-24 ನೇ ಸಾಲಿನ ಶೇ.24.10 ಪರಿಶಿಷ್ಟ ಜಾತಿ(ಎಸ್‍ಸಿಪಿ) ಅನುದಾನದಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ(ಟಿಎಸ್‍ಪಿ) ಅನುದಾನದಡಿ ಅಡುಗೆ ಅನಿಲ ಸಂಪರ್ಕ ನೀಡಲು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಹಾಗೂ ಶೇ.5 ರ

ವಿಕಲಚೇತನರ ಯೋಜನೆಯಡಿ ಅಂಗವಿಕಲರ ಉಪಯೋಗಕ್ಕೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


    ಪುರಸಭೆ ಕಚೇರಿಯಿಂದ ಅರ್ಜಿ ಪಡೆದು ಮಾ.07 ರೊಳಗೆ ನಿಗದಿತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಸೊರಬ ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!