ಶಿವಮೊಗ್ಗ, ಮಾ. 2: ಲೋಕಕಲ್ಯಾಣಾರ್ಥವಾಗಿ ಮಾರ್ಚ್ 5 ರಿಂದ 2 ದಿನಗಳ ಕಾಲ ನಡೆಯುವ ಮಹಾಯಾಗ ನಿಜಕ್ಕೂ ಫಲಪ್ರದವಾಗುತ್ತದೆ. ವೈಜ್ಞಾನಿಕ ರೀತಿಯಲ್ಲಿ ಇದು “ಪಾಸಿಟಿವ್” ವ್ಯವಸ್ಥೆಯನ್ನು ನೀಡುತ್ತದೆ ಎಂದು ಸರ್ಜಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಧನಂಜಯ ಸರ್ಜಿ ತಿಳಿಸಿದರು.
ಅವರಿಂದು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಲೋಕಕಲ್ಯಾಣಾರ್ಥ ಹಾಗೂ ದೇಶದ ನೆಚ್ಚಿನ ಮಹಾನಾಯಕ ನರೇಂದ್ರ ಮೋದಿಜಿ ಅವರು ಇನ್ನೊಮ್ಮೆ ಪ್ರಧಾನಮಂತ್ರಿಯಾಗಲು ಹಾರೈಸಿ, ಪ್ರಾರ್ಥಿಸಿ ನಡೆಸುವ ಅತಿರುದ್ರ ಮಹಾಯಾಗದ ಕುರಿತು ತಾವು ವೈದ್ಯರಾಗಿ ಇದನ್ನು ಒಪ್ಪುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಅತ್ಯಂತ ವಿಶೇಷವಾಗಿ ವಿವರಣೆ ನೀಡಿದರು.
ಪ್ರಪಂಚ ನಿಂತಿರುವುದೇ ಹೀಗೆ. ವೈಬ್ರೇಶನ್ ನಮ್ಮ ನಡುವೆ ಎಲ್ಲ ಗ್ರಹಗತಿಗಳ ನಡುವೆ, ನಕ್ಷತ್ರಗಳ ನಡುವೆ ನಡೆಯುತ್ತದೆ ಎಂಬುದನ್ನು ನಾವು ಗಮನಿಸಬೇಕು. ಅಂತಹ ವೈಬ್ರೇಶನ್ ನಲ್ಲಿ ಬರುವ ನೆಗೆಟಿವ್ ಅಂಶಗಳನ್ನು ಅಳಿಸಲು ಹಾಗೂ ಸಕಾರಾತ್ಮಕ ಚಿಂತನೆಗಳು ಬೆಳೆಯಲು ಯಾಗ, ಪೂಜೆ, ಯೋಗ, ಧ್ಯಾನ ಸಹಕಾರಿಯಾಗುತ್ತದೆ ಎಂದು ಹೇಳಿದರು.
ನಾವು ಹಿಂದಿನಿಂದಲೂ ರಂಗೋಲಿ ಹಾಕುವ ವಾಡಿಕೆಯನ್ನು ಬೆಳೆಸಿಕೊಂಡು ಬಂದಿದ್ದೇವೆ. ಅದರ ನಡುವೆ ಹಿಂದೆ ಮನೆಯ ಮುಂದೆ ಸಗಣಿ ಬಳಸಿ ನೆಲ ಸಾರಿಸುತ್ತೇವೆ. ಗೂ ಮೂತ್ರವನ್ನು ಸಿಂಪಡಿಸುತ್ತೇವೆ.ಈ ಸಮಯದಲ್ಲಿ ಅಲ್ಲೊಂದು ಸಕಾರಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ ಎಂಬ ನಂಬಿಕೆ ವೈಜ್ಞಾನಿಕವಾಗಿಯೂ ಸರಿಯಲ್ಲವೇ ಎಂದು ಪ್ರಶ್ನಿಸಿದರು.
ನಾವು ಮಾಡುವ ಕೆಲಸದಲ್ಲಿ ಇರುವ ಸಕಾರಾತ್ಮಕ ಅಂಶಗಳು ನಮ್ಮನ್ನು ಎತ್ತಿ ತೋರಿಸಲು ನಮ್ಮ ನಡುವೆ ಬೆಳೆಸಲು, ನಮ್ಮ ನಡುವೆ ಇರುವ ನಕಾರಾತ್ಮಕ ಅಂಶಗಳನ್ನು ಅಳಿಸಲು ಇದು ಸಹಕಾರಿಯಾಗುತ್ತದೆ ಎಂದು ವಿವರಿಸಿದರು