ಶಿವಮೊಗ್ಗ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಫೆ.೨೭ ರಂದು ರಾಜ್ಯದ ಗ್ರಾಮ ಮತ್ತು ತಾಲೂಕು ಕೇಂದ್ರಗಳ ಬಂದ್ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘದ ವರಿಷ್ಠರಾದ ಕೆ.ಟಿ.ಗಂಗಾಧರ್ ನೇತೃತ್ವದಲ್ಲಿ
ಮಲವಗೊಪ್ಪದ ಕಾಡಾ ಕಚೇರಿ ಎದುರು ಪ್ರತಿಭಟನೆ ಮತ್ತು ಸಭೆ ಹಮ್ಮಿಕೊಳ್ಳಲಾಗಿದೆ. ನಾಡಿನ ಸುಸ್ಥಿರ ಭವಿಷ್ಯಕ್ಕಾಗಿ ರೈತಾಪಿ ಮತ್ತು ಗ್ರಾಮೀಣ ಜನರನ್ನು ಬೆಂಬಲಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ರೈತ ಬಂಧುಗಳು
ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ಶಿವಮೊಗ್ಗ ತಾಲೂಕಿನ ಕಾಡಾ ಕಚೇರಿ, ಚಿಕ್ಕೂಡ್ಲಿ,ಸೂಗುರು,ಕುಂಚೇನಹಳ್ಳಿ,
ಕಾಚಿನಕಟ್ಟೆ ಭದ್ರಾವತಿ ತಾಲೂಕು ಎಂ.ಸಿ.ಹಳ್ಳಿ, ಅರಹತೊಳಲು ಕೈಮರ, ಅರೆಬಿಳಚಿ ಕ್ಯಾಂಪ್ನಲ್ಲಿ ಬಂದ್ ಕಾರ್ಯಕ್ರಮ ವಿದೆ.