ಶಿವಮೊಗ್ಗ, ಫೆ.೧೨:
ರಾಜ್ಯ ಶಾಸನ ಸಭೆಯ ಉಭಯ ಸದನಗಳನ್ನು ಉದ್ದೇಶಿಸಿ ಮಾನ್ಯ ರಾಜಪಾಲರು ಭಾಷಣ ಮಾಡಿ ದರು, ಈ ಭಾಷಣದಲ್ಲಿ ಸರ್ಕಾರದ ಗೊತ್ತು ಗುರಿಗಳಿಲ್ಲದೂ ಸ್ಪಷ್ಟವಾಗಿತ್ತು, ಭಾಷಣದ ತುಂಬೆಲ್ಲ ಸರ್ಕಾರದ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದೇ ದೊಡ್ಡ ಸಾಧನೆ ಎಂಬಂತೆ ಬಿಂಬಿತವಾಗಿದೆ, ಈ ಸರ್ಕಾರದ ಪ್ರಚಲಿತ ಜ್ವಾಲೆಂತ ಸಮಸ್ಯೆಗಳಾದ ಬರಗಾಲ ನಿರ್ವಹಣೆ ಬಗೆಗೆ ಯಾವ ಸ್ಪಷ್ಟ ಕಾರ್ಯಕ್ರಮಗಳು ಇಲ್ಲದಿರುವುದು, ಈ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಂ ತಾಗಿದೆ ಎಂದು ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕವಿಗಳ ಕಾವ್ಯಗಳ ಸಾಲನ್ನು ಭಾಷಣದ ಅಲಂಕಾ ರಿಕ ವಸ್ತುವನ್ನಾಗಿ ಬಳಸಿ ಓದಿದ ಭಾಷಣದಲ್ಲಿ ಜನಪರ ಕಾರ್ಯಗಳ ಸ್ಪಷ್ಟತೆ ಇಲ್ಲದಿರುವುದು ಕಾಣುತ್ತಿತ್ತು. ಕೇಂದ್ರ ಸರ್ಕಾರದ ಯೋಜನೆಗಳನ್ನು ತಾವು ಮಾಡಿರುವ ಯೋಜನೆಗಳಂತೆ ತೋರಿಸುವಲ್ಲಿ ರಾಜ್ಯ ಸರ್ಕಾರದ ಸಾಧನೆ ಹೆಚ್ಚಿದೆ.
ಒಂದೆಡೆ ರೈತರು ಮಳೆ ಇಲ್ಲದ ಜೀವನ ಸಾಗಿಸುವುದಿರಲಿ, ದನ ಕರುಗಳನ್ನು ಸಾಕುವುದು ಬಾರಿ ಕಷ್ಟದಾಯಕವಾಗಿದೆ, ಮೇವು ನೀರಿನ ಸಮಸ್ಯೆ ಇದೆ, ಜನತೆಗೆ ಅತ್ಯವಶ್ಯಕ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ, ಇದರ ಬಗ್ಗೆ ಸ್ಪಷ್ಟ ಉಲ್ಲೇಖಗಳು ಇಲ್ಲ. ಮಲೆನಾಡು ಭಾಗಗಳಲ್ಲಿ ಮಂಗನ ಕಾಯಿಲೆ ಹಾಗೂ ಇನ್ನಿತರ ರಾಜ್ಯದ ಭಾಗದಲ್ಲಿ ಕೆಲ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿದೆ ಇದರ ನಿರ್ವಹಣೆ ಕುರಿತು ಸ್ಪಷ್ಟತೆ ಇಲ್ಲ ಎಂದಿದ್ದಾರೆ.
ಗುಣಾತ್ಮಕ ಶಿಕ್ಷಣ ನೀಡುವಲ್ಲಿನ ಬೋಧಕರ ಕೊರತೆ ಇದೆ, ಇದರ ಕುರಿತು ಸ್ಪಷ್ಟತೆ ಹಾಗೂ ಸಮಸ್ಯೆಗೆ ಪರಿಹಾರ ಏನು? ಸರ್ಕಾರ ಕೇವಲ ಖಾಲಿ ಡಬ್ಬ ಬಾರಿಸುವ ಮೂಲಕ ಸದ್ದು ಮಾಡು ತ್ತಿದೆ, ರಾಜ್ಯದ ಬೊಕ್ಕಸದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ, ಹಣವೇ ಇಲ್ಲದಂತಾಗಿದೆ, ರಾಜ್ಯದಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಶಾಸಕರ ಪ್ರದೇಶ ಅಭಿವೃದ್ಧಿ ಅನುದಾನ ಸರಿಯಾಗಿ ಹಂಚಿಕೆಯಾಗುತ್ತಿಲ್ಲ ಕಳೆದು ಎಂಟು ತಿಂಗಳ ಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕಂಡಿಲ್ಲದ ಸರ್ಕಾರ, ನಮ್ಮ ಅವಧಿಯ ಸರ್ಕಾರದ ಕೆಲಸಗಳನ್ನು ತಮ್ಮದೆಂದು ಬಿಂಬಿಸುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಯುವಕರಿಗೆ ಉದ್ಯೋಗ ಒದಗಿಸುವ ಯಾವ ಸ್ಪಷ್ಟ ಮಾಹಿತಿಯೂ ರಾಜ್ಯಪಾಲರ ಭಾಷಣದಲ್ಲಿ ಇರಲಿಲ್ಲ. ಜನರಿಗೆ ಸುಂದರ ಬದುಕಿನ ಆಸೆಯನ್ನು ತೋರಿಸಿ, ಅಲ್ಪಸಮಯದಲ್ಲಿ ರಾಜ್ಯದ ಜನತೆಗೆ ಬ್ರಹ್ಮ ನಿರಾಸನ ಮೂಡಿಸಿದ. ಗೌರವಾನ್ವಿತ ರಾಜ್ಯಪಾಲರು ಮಾಡಿದ ಇಂದಿನ ಭಾಷಣ ಸಿದ್ಧಪಡಿಸಿದ ಪ್ರಬಂಧ ಮಂಡನೆ ಆಯಿತೇ ವಿನಹ, ಸರ್ಕಾರ ಜನರ ಪರವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಎದ್ದಿ ಕಾಣುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.