ಕಪಟ ದೇಶ ಭಕ್ತರ ಸಮಾಜ ಘಾತುಕ ಮಾತುಗಳು ಮಿತಿಮೀರಿದ್ದು, ಇಂತಹ ಮಾತನಾಡುವವರ ವಿರುದ್ಧವು ಕಠಿಣ ಶಿಕ್ಷೆಯಂತಹ ಕಾನೂನನ್ನು ಜಾರಿಗೆ ತರಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಸಂಸದ ಡಿ.ಕೆ.ಸುರೇಶ್ ಬಾಯಿ ತಪ್ಪಿನಿಂದಾಗಿ ಹೇಳಿದ ಒಂದು ಪದಕ್ಕೆ ದೇಶ ಭಕ್ತಿಯ ರಾದ್ದಾಂತ ಮಾಡಲಾಗುತ್ತಿದೆ. ಯಾರಿಗೆ ಆಗಲಿ ಅಸಮಧಾನದಿಂದ ಕೆಲವು ಮಾತುಗಳು ಆವೇಶದ ಭರದಲ್ಲಿ ಬರುವುದು ಸಾಮಾನ್ಯ ಹಾಗಂತ ಸಂಸದ ಡಿ.ಕೆ. ಸುರೇಶ್‌ರವರು ಮಾತನಾಡಿದ್ದು,

ಸರಿ ಎಂದು ಹೇಳುವುದಿಲ್ಲ ಆದರೆ, ಅದನ್ನೇ ಇಟ್ಟುಕೊಂಡು ಕೆ.ಎಸ್.ಈಶ್ವರಪ್ಪರಂತಹ ಹಿರಿಯರು ಅನಾಗರೀಕ ಭಾಷೆಯನ್ನು ಬಳಸಿ ಸಮಾಜವನ್ನು ಉದ್ರೇಕಗೊಳಿಸು ವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.


ಒಂದು ಒಳ್ಳೆಯ ಊಟದಲ್ಲಿ ಒಂದು ಕಲ್ಲು ಸಿಕ್ಕಿದರೆ ಕಲ್ಲು ಬಿಸಾಕಬೇಕೆ ಹೊರತು ಊಟವನ್ನಲ್ಲ. ಅವರ ಹೇಳಿP ಯನ್ನು ಎಐಸಿಸಿ ನಾಯಕರು ಖಂಡಿಸಿ ದ್ದಾರೆ. ಇದರ ಬಗ್ಗೆ ವಿರೊಧ ಪಕ್ಷದ ವರು ಗಮನಿಸುತ್ತಿಲ್ಲ. ದೇಶದ ದ್ರೋಹದ ಮಾತನ್ನಾಡಿದರೆ ಗುಂಡಿಕ್ಕಿಕೊಲ್ಲುವ ಕಾನೂನು ಜಾರಿಗೆ ತರಬೇಕಿದೆ ಎಂದಿ ದ್ದಾರೆ ಬಿಜೆಪಿ ನಾಯಕರಿಗೆ ಯಾವ್ಯಾಗ ಅಭದ್ರತೆ ಕಾಡುತ್ತದೆಯೋ ಆಗ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಮನೆಯ ಮಗನೊಬ್ಬನನ್ನು ತಾತ್ಸರ ಮಾಡಿದರೆ ನನಗೆ ಪಾಲು ಕೊಡಿ ಎಂದು ಕೇಳುತ್ತಾನೆ, ಅಂತಹ ಮಗನಿಗೆ ಬುದ್ಧಿವಾದ ಹೇಳುವುದು ಬಿಟ್ಟು ಮನೆಯಿಂದ ದೂಡುತ್ತಾರೆಯೇ? ಡಿ.ಕೆ. ಸುರೇಶ್‌ರವರ ಹೇಳಿಕೆಯ ಹಿಂದಿನ ಭಾವವನ್ನು ಅರ್ಥಮಾಡಿಕೊಳ್ಳಬೇಕು. ಬಿಜೆಪಿಯ ಉಮೇಶ್ ಕತ್ತಿಯವರು ಈ ಹಿಂದೆ ಇದೇ ರೀತಿಯ ಮಾತನಾಡಿ ದ್ದರು ಅಲ್ಲವೇ, ಆಗ ಈಶ್ವರಪ್ಪನವರ ದೇಶಭಕ್ತಿ ಎಲ್ಲಿಗೆ ಹೋಗಿತ್ತು ಎಂದು ವ್ಯಂಗ್ಯವಾಡಿದರು.
ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಲೇ ಬಂದಿದೆ. ಕಳೆದ ೧೦ ವರ್ಷಗಳ

ಲ್ಲಿ ರಾಜ್ಯಕ್ಕೆ ಸಿಗಬೇಕಾದ ಅನುದಾನವನ್ನು ನೀಡಿಲ್ಲ. ಅಲ್ಲದೇ ಮಹಾದಾಯಿ ಹೋರಾಟದ ಸಂದರ್ಭ ದಲ್ಲಿ, ಕಾವೇರಿ ಗಲಾಟೆ ಎದ್ದಾಗ, ಮೇಕೆ ದಾಟು ಹೋರಾಟದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡಿಕೊಂಡು ಬಂದಿದೆ. ರಾಜ್ಯದ ೨೫ ಸಂಸದರು ಮಾತನಾಡಿಯೇ ಇಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಬಂತು ಆಗ ಕೇಂದ್ರ ಏನೂ ಕೊಟ್ಟಿಲ್ಲ. ಯಡಿಯೂ ರಪ್ಪ ನವರು ಜನರ ರಕ್ಷಣೆಗಾಗಿ ಬೀದಿಬೀದಿಯಲ್ಲಿಹೋರಾಟ ಮಾಡಿ ದರು ಕೆಂದ್ರದಿಂz..ಮೊದಲನೇ ಪುಟದಿಂದ
ನೆರವು ಬರಲಿಲ್ಲ. ಭದ್ರಾವತಿ ವಿಐಎಸ್ ಎಲ್ ಗೆ ನೆರವು ಕೊಡುವುದಾಗಿ ಮಾತನಾಡಿ ದ್ದರು, ಆದರೆ ಕೊನೆಗೂ ಕೊಡಲಿಲ್ಲ ಎಂದರು.
ರಾಜ್ಯಕ್ಕೆ ಮಾತ್ರವಲ್ಲ ಜಿಲ್ಲೆಗೂ ಅನ್ಯಾಯ ಮಾಡಿದೆ. ಅಡಿಕೆ ಬೆಳೆಗಾರರ ಸಮಾವೇಶ ದಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಮಾಡು ವುದಾಗಿ ಹೇಳಿರುವ ಅಮಿತ್ ಶಾ ಇದುವ ರೆಗೂ ಅದನ್ನು ಮಾಡಿಲ್ಲ. ತುಮಕೂರು-ಶಿವಮೊಗ್ಗ ಹೆದ್ದಾರಿ ಆಗುತ್ತಿಲ್ಲ. ಶಿವಮೊಗ್ಗ ದಲ್ಲಿ ವೇಗವಾಗಿ ಆಗುತ್ತಿರುವ ರೈಲ್ವೆ ಮೇಲ್ಸೇ ತುವೆ ಕಾಮಗಾರಿಗಳು ಆಗುತ್ತಿವೆ. ಭದ್ರಾವತಿ ಂiಲ್ಲಿ ಆಗುತ್ತಿಲ್ಲ. ಏಕೆಂದರೆ ಇಲ್ಲಿ ಪ್ರಭಾವಿ ನಾಯಕರ ಆಸ್ತಿಪಾಸ್ತಿಗಳಿವೆ ಅದಕ್ಕೆ ಆಗುತ್ತಿದೆ ಎಂದು ಹಂಗಿಸಿದರು.


ದೇಶ ಭಕ್ತಿಯ ಹೋರಾಟದಿಂದ ಬಂದ ಕುಟುಂಬದವರಂತೆ ಮಾತನಾಡುತ್ತಿರುವ ನೀವು ಕೇಂದ್ರದಿಂದ ಬರಬೇಕಿರುವ ಅನು ದಾನ ಕೊಡಿಸುವ ಕೆಲಸ ಮಾಡಬೇಕಿದೆ. ನಕಲಿ ದೇಶ ಭಕ್ತಿಯ ನಾಟಕವಾಡುತ್ತಿದ್ದಾರೆ. ಬಿಜೆಪಿ ಸಂಸದರು ರಾಜ್ಯದ ಪರವಾಗಿ ನಿಲ್ಲ ಲಿಲ್ಲ. ಡಿ.ಕೆ.ಸುರೇಶ್ ರಾಜ್ಯದ ಪಾಲಿನ ಅನುದಾನವನ್ನು ಕೇಳುವ ಭರದಲ್ಲಿ ಒಂದು ತಪ್ಪು ಮಾತನಾಡಿದ್ದಕ್ಕೆ ಇವರೆಲ್ಲ ಈ ರೀತಿಯ ಸಮಾಜಘಾತುಕ ಮಾತನಾಡುತ್ತಿದ್ದಾರೆ ಎಂದರು.
ಇತಿಹಾಸವನ್ನು ಗಮನಿಸಲಿ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ದೂರು ಕೊಟ್ಟವರು ಯಾರು ? ರಾಜ್ಯಪಾಲರನ್ನು ಭೇಟಿ ಮಾಡಿದವರು ಯಾರು ? ನೋಟು ಎಣಿಸುವ ಯಂತ್ರವನ್ನು ಇಟ್ಟುಕೊಂಡವರು ಯಾರು ? ಪದೇ ಪದೇ ಡಿ.ಕೆ.ಶಿವಕುಮಾರ್ ರವರಿಗೆ ಜೈಲಿಗೆ ಹೋದವರು ಎಂದು ಹೇಳಲು ಕಾರಣವೇನು? ನಾನು ಜೈಲಿಗೆ ಹೋಗಿಲ್ಲ, ಬಿಜೆಪಿ ನಾಯಕರು ಜೈಲಿಗೆ ಹೋಗಿದ್ದಾರೆ ಎಂದು ಹೇಳುವ ಇರಾದೆ ಇದರ ಹಿಂದಿದೆ ಎಂದು ಕಟುಕಿದರು.


ಈಶ್ವರಪ್ಪನವರ ಮಾತುಗಳು ಅನಾಗರೀಕ ವಾಗಿರುತ್ತದೆ. ಅದನ್ನು ಅವರು ತಮ್ಮ ಸ್ವತ್ತನ್ನಾಗಿ ಮಾಡಿಕೊಂಡಿದ್ದಾರೆ. ಪ್ರಿಯಾಂಕ ಖರ್ಗೆಯವರನ್ನು ಕೆಟ್ಟ ಹುಳು ಎಂದು ಹೀಯಾಳಿಸುತ್ತಾರೆ. ಆದರೆ, ಭ್ರಷ್ಟಾಚಾರದಲ್ಲಿ ತೊಡಗಿದ್ದ ಇಂತಹವರ ಮಕ್ಕಳಿಗೆ ಏನೆಂದು ಕರೆಯಬೇಕು ? ಉದ್ರೇಕಗೊಳಿಸುವ ಮಾತನ್ನು ಇನ್ನಾದರು ಅವರು ಬಿಡಬೇಕು. ಇನ್ನು ಮುಂದೆ ರಾಮನಂತೆ ಬದುಕುತ್ತೇವೆ. ಭ್ರಷ್ಟಾಚಾರ ಮಾಡುವುದಿಲ್ಲವೆಂದು ಶಪಥ ಮಾಡಲಿ. ಮೋದಿ ಹೆಸರು ಹೇಳಿ ಮತ ಕೇಳುವ ಬಿಜೆಪಿಗರು ಅವರ ಕುಟುಂಬ ರಾಜಕಾರಣದ ವಿರೋಧದ ಮಾತುಗಳನ್ನು ಏಕೆ ಕೇಳುತ್ತಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ, ಪ್ರಮುಖರಾದ ಶಿಜು ಪಾಶ, ಪದ್ಮನಾಭ, ವಾಹಿದ್ ಅಡ್ಡು, ತಿಮ್ಲಾಪುರ ಲೋಕೇಶ್, ಲಕ್ಷ್ಮಣ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!