ಆನಂದಪುರ,ಜ.೨೦: ಶೈಕ್ಷಣಿಕ ಅಭಿವೃದ್ಧಿಗೆ ನಿಸ್ವಾರ್ಥ ಸೇವೆ ಬೇಕಾಗಿದೆ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಹೇಳಿದರು.


ಅವರು ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಬೆಂಗಳೂರು ರೆಕ್ಯೂ ಕಂಪನಿಯ ಸಿಇಒ ಪ್ರಕಾಶ್ ರುಕ್ಮಯ್ಯ ಇವರು ನೀಡಿದ ಒಂದು ಕೋಟಿ ದೇಣಿಗೆಯಲ್ಲಿ ನಿರ್ಮಿಸಿದ ಅತ್ಯಾಧುನಿಕ ಭೋಜನಾಲಯ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯಾವುದೇ ಊರು ಅಭಿವೃದ್ಧಿ ಕಾಣಬೇಕಾದರೆ ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು, ಅದರಲ್ಲೂ ಸರ್ಕಾರಿ ಶಾಲೆಗಳ ಸುಧಾರಣೆಗೆ ದಾನಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಮುಂಚೂಣಿಯಲ್ಲಿ ಬಂದರೆ ನಮ್ಮ ಎಲ್ಲಾ ಶಾಲೆಗಳು ಆಕರ್ಷಕವಾಗಲು ಸಾಧ್ಯ ಎಂದರು.


ಆನಂದಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಅಭಿವೃದ್ಧಿಗೆ ಮುಂದಾಗಿರುವ ಪ್ರಕಾಶ್ ರುಕ್ಮಯ್ಯ ಅವರ ಕಾರ್ಯ ಶ್ಲಾಘನೀಯ. ತಮ್ಮ ಬದುಕು ಎಲ್ಲಾರಿಗೂ ಮಾದರಿಯಾಗಿದೆ ನಿಮ್ಮ ಹಾಗೆ ಎಲ್ಲಾ ಶಾಲೆಗಳು ಹಳೆ ವಿದ್ಯಾರ್ಥಿ ಸಮೂಹ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಕಾಶ್ ರುಕ್ಮಯ್ಯ ಮಾತನಾಡಿ ನಮಗೆ ಜನ್ಮ ನೀಡಿದ ತಂದೆ ತಾಯಿ, ಅಕ್ಷರ ಕಲಿಸಿದ ಗುರುಗಳಿಗೆ ಹಾಗೂ ಮಣ್ಣಿಗೆ ಋಣಿಯಾಗಿರಬೇಕು, ನನ್ನ ಏಳಿಗೆಗೆ ಈ ಸರ್ಕಾರಿ ಶಾಲೆ ಏನೆಲ್ಲಾ ನೀಡಿದೆ ಎಂದು ಹೇಳಲು ಸಾಧ್ಯವಿಲ್ಲ, ಇಂತಹ ಶಾಲೆಯ ಋಣ ತೀರಿಸಲು ನಾನು ಮುಂದಾದೆ.ಹಾಗಾಗಿ ಈ ಶಾಲೆಗೆ ಅತಿ ಮುಖ್ಯವಾಗಿ ಬೇಕಾದ ಆಧುನಿಕ ಭೋಜನಾಲಯ, ಅಡುಗೆ ಕೋಣೆ, ಅಡುಗೆ ಯಂತ್ರೋಪಕರಣಗಳು ಹೀಗೆ ಶಾಲೆಯ ಅಭಿವೃದ್ಧಿಗೆ ೧ಕೋಟಿಗೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ನೀಡಲಾಗಿದೆ ಇದು ನನ್ನ ಅಲ್ಪ ಸೇವೆ ಅಷ್ಟೇ ಎಂದರು.


ಈ ಶಾಲೆಯನ್ನು ಕೆಲವೇ ವರ್ಷಗಳಲ್ಲಿ ಸ್ಮಾರ್ಟ್ ಶಾಲೆಯನ್ನಾಗಿ ಮಾಡುವ ಬಗ್ಗೆ ನನ್ನ ಗಮನವಿದೆ. ಶಾಲೆಯ ಎಲ್ಲ ತರಗತಿಗಳಿಗೂ ಸ್ಮಾರ್ಟ್ ಟಿವಿಗಳನ್ನ ಅಳವಡಿಸಲಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಕ್ರೀಡಾಶಕ್ತ ವಿದ್ಯಾರ್ಧಿಗಳಿಗೆ ಕ್ರೀಡಾ ಉಪಕರಣಗಳನ್ನು ಹಾಗೂ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ದಾನಿಗಳಾದ ಗಂಗಾಧರ್, ಪ್ರಕಾಶ್ ಹುಲಿ, ವಿಜಯಕುಮಾರ್ ಕರಿಬಸವಯ್ಯ. ಸತೀಶ್ ರುಕ್ಮಯ್ಯ .ಸಂತೋಷ್ ಎಸ್ ಎಸ್ .ಅಮಿತ್ ಜೈನ್ ರವರನ್ನ ಸನ್ಮಾನಿಸಲಾಯಿತು ಕಳೆದ ವರ್ಷ ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು . ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ

ಮೋಹನ್ ಕುಮಾರ್. ಕಲೀಮುಲ್ಲಾ ಖಾನ್, ಬಿ.ಡಿ.ರವಿ, ಜಗನ್ನಾಥ್ ಆರ್, ಉಮೇಶ್ ಎನ್., ಮಹೇಶ್, ಶೃತಿ, ಗಂಗಮ್ಮ ನಾಗಪ್ಪ. ಉಪಾಧ್ಯಕ್ಷೆ ರೂಪಲತಾ ನಾಗರಾಜ್. . ಸಿರಿಜಾನ್ ಗ್ರಾ ಪಂ ಸದಸ್ಯರು ಪ್ರಸನ್ನ ಸಹಾಯಕ ನಿರ್ದೇಶಕರು ಪ್ರಧಾನ ಮಂತ್ರಿ ಘೋಷಣ್ ಅಭಿಯಾನ ಸಾಗರ ರಾಮಚಂದ್ರ ಕೆಎಂ ಉಪಾಧ್ಯಕ್ಷರು ಎಸ್ ಟಿ ಎಂ ಸಿ ಕೆ ಪಿ ಎಸ್ ರವಿಶಂಕರ್ ಎನ್. ಪ್ರಾಂಶುಪಾಲರು ಕೆಪಿಎಸ್ಸಿ ಈಶ್ವರಪ್ಪ ಎಚ್ ಎಂ ಉಪ ಪ್ರಾಂಶುಪಾಲರು ನಾಗರಾಜ್ ಟಿಎಲ್ ಮುಖ್ಯೋಪಾಧ್ಯಾಯರು ಹಾಗೂ ಎಸ್ ಟಿಎಂಸಿ ಸದಸ್ಯರು ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!