ನಿಗಮ ಮಂಡಳಿಯಲ್ಲಿ ನೀಡಿದ ವಾಗ್ದಾನದಂತೆ ಅಲ್ಪಸಂಖ್ಯಾತರಿಗೆ ಹುದ್ದೆ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಮುಖಂಡ ಹಾಗೂ ಜಿಲ್ಲಾ ಕಾಂಗ್ರೆಸ್ ನಗರ ಪ್ರಚಾರ ಸಮಿತಿ ಅಧ್ಯಕ್ಷ ಆಸೀಫ್ ಮಸ್ಸೂದ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೨೦೨೩ರ ಚುನಾವಣೆಯಲ್ಲಿ ಇಡೀ ಅಲ್ಪಸಂಖ್ಯಾತ ಸಮು ದಾಯ ಶೇ.೯೯ರಷ್ಟು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಸರ್ಕಾರ ರಚಿಸಲು ಸಹಕಾರಿಯಾಗಿದೆ. ಚುನಾವಣೆಯ ಮೊದಲು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಅಭ್ಯರ್ಥಿ, ಅಲ್ಪಸಂಖ್ಯಾತ ಮುಖಂಡರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಗಮ ಮಂಡಳಿಗಳಲ್ಲಿ ಸೂಕ್ತ ಸ್ಥಾನಮಾನವನ್ನು ಕಲ್ಪಿಸುವುದಾಗಿ ಮಾತು ಕೊಟ್ಟಿದ್ದರು. ಅಷ್ಟೇ ಅಲ್ಲ ಪ್ರಮಾಣ ಕೂಡ ಮಾಡಿದ್ದರು ಎಂದರು


ಆದರೆ, ಈಗ ಪಕ್ಷದ ಮೂಲ ಮಾಹಿತಿಯ ಪ್ರಕಾರ ಜಿಲ್ಲೆಯ ೫ ಜನರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಕೊಡುತ್ತಿರುವುದಾಗಿ ತಿಳಿದು ಬಂದಿದೆ. ಅದರಲ್ಲಿ ಯಾವ ಅಲ್ಪಸಂಖ್ಯಾತರ ಹೆಸರು ಇಲ್ಲವೆಂದು ಗೊತ್ತಾ ಗಿದೆ. ಇದರಿಂದ ಇಡೀ ಮುಸ್ಲಿಂ ಸಮುದಾಯ ಸಹಜವಾಗಿ ಬೆಸರಗೊಂಡಿದೆ. ಇದು ಸತ್ಯವೋ ಸುಳ್ಳೋ ಗೊತ್ತಿಲ್ಲ. ಆದರೆ ಮುಸ್ಲಿಂ ಮುಖಂಡರಿಗೆ, ಕಾರ್ಯಕರ್ತ ರಿಗೆ ನಿಗಮ ಮಂಡಳಿಯಲ್ಲಿ ಹುದ್ದೆ ನೀಡಬೇಕು ಇದು ನಮ್ಮ ಹಕ್ಕು ಕೂಡ ಎಂದರು.


ಶಿವಮೊಗ್ಗ ಜಿಲ್ಲೆಯಲ್ಲಿ ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಎಂ.ಎಲ್.ಎ. ಟಿಕೇಟ್ ನೀಡಿರುವು ದಿಲ್ಲ. ಆದರೂ ಸಹ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತು ಅಧಿಕಾರ ತರುವುದರಲ್ಲಿ ಹಗಲಿ ರುಳು ಕಷ್ಟಪಟ್ಟಿದ್ದಾರೆ. ಆದರೆ ಈಗ ನಿಗಮಮಂಡಳಿ ಗಳಲ್ಲಿ ಸ್ಥಾನವಿಲ್ಲವೆಂದರೆ, ಕಷ್ಟ ಮುಸ್ಲಿಂ ಸಮುದಾಯ ಬೆಸರಗೊಳ್ಳುವ ಸಾಧ್ಯತೆ ಇದೆ ಎಂದರು.


ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಪ್ತಾಬ್ ಪರ್ವೀಜ್, ನಯಾಜ್ ಅಹಮ್ಮದ್ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರುಗಳಾದ ಮೊಹಮ್ಮದ್ ಆರೀಪುಲ್ಲಾ, ಸೈಯ್ಯದ್ ಮಜರ್ ಜಾವೀದ್, ಮೊಹೀಬುಲ್ಲಾ, ಮೊಹಮ್ಮದ್ ಹುಸೇನ್, ಅಕ್ಬರ್, ಆಕ್ರಂ ಮುಂತಾದವರು ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!