ಇಂದು ಬೆಳಗ್ಗೆ ಹಿತೇಂದ್ರ ಆರ್. ಐಪಿಎಸ್, ಮಾನ್ಯ ಎಡಿಜಿಪಿ (ಕಾನೂನು & ಸುವ್ಯವಸ್ಥೆ) ರವರು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸೇವಾ ಪೆರೇಡ್ ನ ವಿಕ್ಷಣೆ ನಡೆಸಿ ಗೌರವ ವಂದನೆ ಸ್ವೀಕರಿಸಿದರು.
ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ.ಕೆ. ರವರು ಪರೇಡ್ ಕಮಾಂಡರ್ ಆಗಿ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಇಲಾ ಖೆಯ ವಿವಿಧ ವಿಭಾಗಗಳಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಜಿಲ್ಲೆಯ ಪೊಲೀಸ್ ಅಧಿಕಾರಿ & ಸಿಬ್ಬಂಧಿಗಳಿಗೆ ಪ್ರಶಂಸನಾ ಪತ್ರಗಳನ್ನು ನೀಡಿ ಅಭಿನಂದಿಸಿ, ಪೊಲೀಸ್ ವಾಹನಗಳ ಪರಿವೀಕ್ಷಣೆ ನಡೆಸಿದರು.
ಅವರು ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲೆಯ ಅಪರಾಧ ವಿಮರ್ಶನಾ ಸಭೆ ನಡೆಸಿ, ಸಭೆಯಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿಗಳಿಗೆ ತನಿಖೆಯಲ್ಲಿರುವ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವಂತೆ, ರೌಡಿ ಆಸಾಮಿಗಳ ಚಟುವಟಿಕೆಗಳ ಮೇಲೆ ನಿಗಾವಹಿಸಿ,
ಚಟುವಟಿಕೆ ಯುಳ್ಳ ರೌಡಿ ಆಸಾಮಿಗಳ ವಿರುದ್ಧ ಗಡಿಪಾರು, ಗೂಂಡಾ ಕಾಯ್ದೆ ಮತ್ತು ಮುಂಜಾಗ್ರತಾ ಕ್ರಮದ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಸಂಘಟಿತ ಅಪರಾಧಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ, ಮಾದಕದ್ರವ್ಯ ಮಾರಾಟ ಮತ್ತು ಮಾದಕ ದ್ರವ್ಯ ವ್ಯಸನಿಗಳ ವಿರುದ್ಧ ಓಆPS ಕಾಯ್ದೆಯಡಿಯಲ್ಲಿ ಹೆಚ್ಚಿನ ಪ್ರಕರಣಗಳನ್ನು
ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ನೀಡಿ, ಜಿಲ್ಲಾ ಪೊಲೀಸ್ ಕಛೇರಿಯ ಪರಿವೀಕ್ಷಣೆ ನಡೆಸಿ, ಕಛೇರಿಯ ಸ್ವಚ್ಚತೆ, ಕಟ್ಟಡ ಮತ್ತು ವಾಹನಗಳ ಸ್ಥಿತಿಗತಿ, ಕಡತ ನಿರ್ವಹಣೆ, ಅನುದಾನ ಮತ್ತು ವೆಚ್ಚ ಗಳು ಮತ್ತು ಪೊಲೀಸ್ ಅಧಿಕಾರಿ ಸಿಬ್ಬಂಧಿಗಳ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರ..
ಈ ಸಂದರ್ಭದಲ್ಲಿ ತ್ಯಾಗರಾಜನ್, ಐಪಿಎಸ್, ಮಾನ್ಯ ಡಿಐಜಿಪಿ ಪೂರ್ವ ವಲಯ ದಾವಣಗೆರೆ, ಮಿಥುನ್ ಕುಮಾರ್ ಜಿ. ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-೧, ಕಾರಿಯಪ್ಪ ಎ ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-೨, ಕೃಷ್ಣಮೂರ್ತಿ, ಪೊಲೀಸ್ ಉಪಾಧೀಕ್ಷಕರು, ಡಿಎಆರ್,
ಶಿವಮೊಗ್ಗ, ಬಾಲರಾಜ್ ಬಿ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಎ ಉಪ ವಿಭಾಗ, ಸುರೇಶ್ ಎಂ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗ, ಗೋಪಾಲಕೃಷ್ಣ ಟಿ ನಾಯಕ್, ಪೊಲೀಸ್ ಉಪಾಧೀಕ್ಷಕರು, ಸಾಗರ ಉಪ ವಿಭಾಗ, ನಾಗರಾಜ್ ಪೊಲೀಸ್ ಉಪಾಧೀಕ್ಷಕರು, ಭದ್ರಾವತಿ ಉಪ ವಿಭಾಗ, ಶಿವಾನಂದ ಮದರಖಂಡಿ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗ, ಸತೀಶ್, ಸಹಾಯಕ ಆಡಳಿತಾದಿಕಾರಿಗಳು, ಮತ್ತು ಶಿವಮೊಗ್ಗ ಜಿಲ್ಲೆಯ ಎಲ್ಲಾ ಪೊಲೀಸ್ ನಿರೀಕ್ಷಕರು, ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಪೊಲೀಸ್ ಉಪ ನಿರೀಕ್ಷಕರು ಉಪಸ್ಥಿತರಿದ್ದರು.