ಶಿವಮೊಗ್ಗ, ಡಿ.೦೩:
ಹಿಂದೆ ಬೈಯ್ದು, ಹೊಡೆದು, ಹೆದರಿಸಿ ಪಾಠ ಕಲಿಸುತ್ತಿದ್ದ ದಿನಮಾನಗಳು ಯುಗಾಂತ ರಗಳಲ್ಲಿ ಬದಲಾವಣೆಯಾಗಿದೆ. ಇಂದಿನ ಕಲಿಯುಗದಲ್ಲಿ ಶಿಷ್ಯನಿಗೆ ಗುರುಗಳು ವಂದಿಸಿ ಬುದ್ದಿ ಕಲಿಸುವುದು ಅನಿವಾರ್ಯವಾಗಿದೆ. ಇಂದಿನ ಶಿಕ್ಷಣ ಸಂಸ್ಕಾರ ಕೊಡುವ ನಿಟ್ಟಿನಲ್ಲಿ ಬೆಳೆಯಬೇಕಿದೆ ಎಂದು ಜಡೆ ಸಂಸ್ಥಾನ ಮಠದ ಡಾ.ಮಹಾಂತ ಮಹಾಸ್ವಾಮಿಗಳು ಹೇಳಿದರು.


ಅವರು ಅನುಪಿನಕಟ್ಟೆ ರಾಮಕೃಷ್ಣ ಆಂಗ್ಲ ಮಾದ್ಯಮ ಗುರುಕುಲ ವಸತಿ ವಿದ್ಯಾಲಯದ ಪಾದಪೂಜೆ ನಂತರದ ಮಕ್ಕಳ ರಂಗೋತ್ಸವ ಹಾಗೂ ಪ್ರತಿಭಾಪುರಸ್ಕಾರ ಸಮಾರಂಭದ ಸಾನಿಧ್ಯವನ್ನೂ ವಹಿಸಿ ಮಾತನಾಡುತ್ತಾ, ಇಂದು ಶಿಕ್ಷಕರು ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಶಾಲೆಗೆ ಬನ್ನಿ ಎಂದು ಗೋಗರಿಯುವ ಅನಿವಾರ್ಯತೆ ಬಂದಿದೆ. ಇದು ಆತಂಕದ ಸಂಗತಿ. ಇದರ ನಡುವೆ ಸಂಸ್ಕಾರ ನೀಡುವ ಜೊತೆಗೆ ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಕಲಿಸುವ ಮಾದರಿ ಶಾಲೆ ಯಾಗಿ ರಾಮಕೃಷ್ಣ ಗುರುಕುಲ ಗುರುತಿಸಿಕೊಂ ಡಿರುವುದು ಹೆಮ್ಮೆಯ ವಿಷಯವೆಂದರು…


ಹಣೆಮುಟ್ಟಿ ಪಾದಕ್ಕೆ ನಮಸ್ಕರಿಸುವಾಗ ನಿಮ್ಮ ಮೂಗಿನಿಂದ ಪೂಜ್ಯರ, ಮಾತಾ-ಪಿತೃಗಳ ಚೈತನ್ಯ ಶಕ್ತಿ ನಿಮ್ಮ ಶ್ವಾಸಕೋಶದ ಮೂಲಕ ಮನಸ್ಸನ್ನು ಮುಟ್ಟುತ್ತದೆ. ಆಗ ಮನಸ್ಸಿನಲ್ಲಿರುವ ಅಂಧಕಾರ, ವಿಕಾರ, ಅಜ್ಞಾನವೆಂಬುದು ಮರೆಯಾಗುತ್ತದೆ ಎಂದ ಅವರು, ದಿನ ಬದಲಾದಂತೆ ವ್ಯವಸ್ಥೆಯು ಬದಲಾಗುತ್ತದೆ. ಆದರೆ ನಮ್ಮಲ್ಲಿ ಮನುಷ್ಯತ್ವ ಮರೆಯಾಗದಂತೆ ನೋಡಿಕೊಳ್ಳಬೇಕು ಎಂದರು…


ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿಶ್ವದೆಲ್ಲೆಡೆ ಯೋಗ ಮನೆಮಾತಾಗಿದೆ. ಭಾರತದ ಸಂಸ್ಕೃತಿಯ ಯೋಗ ಆರೋಗ್ಯ ಕಾಪಾಡು ಜೊತೆಗೆ ಮಾನಸಿಕ ಸ್ಥಿಮಿತತೆ ಯನ್ನು ನೀಡುತ್ತದೆ. ಜೂ.೨೧ರಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗು ತ್ತದೆ. ಅಂದಿನ ದಿನಾಂಕ ನಿಗಧಿಯಾಗಲು ಕಾರಣ ಅಂದು ವರ್ಷದ ಎಲ್ಲಾ ದಿನಗಳಿ ಗಿಂತ ಹೆಚ್ಚು ಸಮಯ ಹಗಲಾಗಿರುತ್ತದೆ. ಬೆಳಕು ಜಾಸ್ತಿ. ಬೆಳಕೊಂದು ಚೈತನ್ಯ ಶಕ್ತಿ ಎಂದರು. ಶಾಲೆಯ ಮಕ್ಕಳಿಂದ ವಿವಿಧ ಬಗೆಯ ರಂಗೋತ್ಸವ ಮನರಂಜನೆ ನೀಡಿತು. ವಿಶೇಷವಾಗಿ ಯಕ್ಷಗಾನ, ಭರತನಾಟ್ಯ, ಕಲಾತ್ಮಕ ನೃತ್ಯ, ಏಕಪಾತ್ರ ಅಭಿನಯ, ಮನಸೂರಗೊಂಡವು.

ತಾತ್ಸರಗಳಿಗೆ ಉತ್ತರ ನೀಡಿದ ರಾಮಕೃಷ್ಣ ಶಾಲೆಯ ಪಾದಪೂಜೆ
ಮಕ್ಕಳಲ್ಲಿ ತಂದೆ-ತಾಯಿಯರ ಬಗ್ಗೆ ಪ್ರೀತಿ, ಗೌರವ ಬರಬೇಕು ಎಂಬ ಕಾರಣದಿಂದ ಇಡೀ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ರಾಮಕೃಷ್ಣ ವಿದ್ಯಾಸಂಸ್ಥೆ ಪಾದಪೂಜೆ ಕಾರ್ಯಕ್ರಮವನ್ನು ೨೦೦೬ರಲ್ಲಿ ಕೇವಲ ೨೫೦ ಮಕ್ಕಳಿಂದ ಆರಂಭಿಸಿತ್ತು. ಇದನ್ನು ಆರಂಭಿಸಿದ ಸಂಸ್ಥೆಯ ಸಂಸ್ಥಾಪಕರಾದ ಡಿ.ಎಂ.ವೆಂಕಟರಮಣ ಅವರ ಈ ಕಾರ್ಯದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಅದಕ್ಕೆ ಕಿಂಚಿತ್ತೂ ಚಿಂತಿಸದೇ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದರು. ಈಗ ಇಡೀ ರಾಜ್ಯದ ೮೦ಕ್ಕೂ ಹೆಚ್ಚು ಶಾಲೆಗಳಲ್ಲಿ ಪಾದಪೂಜೆ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ಅದಕ್ಕೆ ಅಡಿಪಾಯ ಹಾಕಿಕೊಟ್ಟಿದ್ದು ನಮ್ಮ ವಿದ್ಯಾಸಂಸ್ಥೆ. ಮಕ್ಕಳಿಗೆ ಎಂದಿನವರೆಗೆ ಸಂಸ್ಕಾರ ಕೊಡುವುದಿಲ್ಲವೋ ಅಂದಿನವರೆಗೆ ವಿದ್ಯೆಯು ತೃಣಕ್ಕೆ ಸಮಾನವಾಗುತ್ತದೆ. ಗುರು-ಹಿರಿಯರನ್ನು ಗೌರವಿಸುವ ಪಾಠ ಕಲಿಸಬೇಕಿದೆ.
-ಶೋಭಾ ವೆಂಕಟರಮಣ, ಮ್ಯಾನೇಜಿಂಗ್ ಟ್ರಸ್ಟಿ.

By admin

ನಿಮ್ಮದೊಂದು ಉತ್ತರ

error: Content is protected !!