ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಾಗೂ ಸತ್ಪ್ರಜೆಗಳನ್ನು ರೂಪಿಸಲು ಅಗತ್ಯವಾದ ಸಹಾಯವನ್ನು ಶಾಹಿ ಎಕ್ಸ್ಪೋರ್ಟ್ ಸದಾ ನೀಡುತ್ತದೆ ಎಂದು ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಸುಖವಂತ್ ಸಿಂಗ್ ಬೈನ್ಸ್ ತಿಳಿಸಿದರು.
ಅವರು ಶಿವಮೊಗ್ಗ ಸಮೀಪದ ಶಾಹಿ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಯು ನಿಧಿಗೆ ಸರ್ಕಾರಿ ಪ್ರೌಢಶಾಲೆಗೆ ನೀಡಿರುವ ಐದೂವರೆ ಲಕ್ಷ ರೂ ಮೌಲ್ಯದ ವಿಜ್ಞಾನ ಪ್ರಯೋಗಾಲಯ ( ಸ್ಟೆಮ್ ಲ್ಯಾಬ್) ವನ್ನು ಹಸ್ತಾಂತರಿಸುವ ಮೂಲಕ ವಿದ್ಯಾರ್ಥಿಗಳಿಗೆ ಅದರ ಸದುಪಯೋಗ ಪಡೆಯುವಂತೆ ಸೂಚಿಸಿದರು.
ನೀವೇ ನಾಳಿನ ಭವಿಷ್ಯದ ನಾಯಕರು. ನಿಮ್ಮ ಬುದ್ಧಿವಂತಿಕೆಯನ್ನು ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ಕಾರಣಕರ್ತರಾಗಿ. ನಿಮ್ಮ ಬೆಳವಣಿಗೆಗೆ ನಮ್ಮ ಆಡಳಿತ ಮಂಡಳಿ ಸದಾ ಸಹಾಯ ಹಸ್ತ ನೀಡುತ್ತದೆ ಎಂದರು.
ಸಂಸ್ಥೆಯ ಮತ್ತೋರ್ವ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರ್. ಅಲಗಪ್ಪನ್ ಅವರು ಮಾತನಾಡುತ್ತಾ ಈ ಶಾಲೆಗೆ ನೀಡಿರುವಂತಹ ಅವಕಾಶಗಳನ್ನು ನಮ್ಮ ಸಂಸ್ಥೆ ಎಲ್ಲೆಡೆ ಮಾಡು ತ್ತಿದೆ. ಇಲ್ಲಿನ ಮಕ್ಕಳಿಗೆ ಸದ್ಯದಲ್ಲೇ ಉತ್ತಮವಾದ ಸೈಕಲ್ಗಳನ್ನು ನೀಡುತ್ತೇವೆ. ಮಕ್ಕಳು ಇದನ್ನು ಸದುಪಯೋ ಗಪಡಿಸಿಕೊಳ್ಳುವ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಸಿಕೊಳ್ಳಿ ಎಂದು ಹೇಳಿದರು.
ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ನಾಗರಾಜ್ ಅವರು ಮಾತನಾಡುತ್ತಾ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶಾಹಿ ಎಕ್ಸ್ಪೋರ್ಟ್ಸ್ ಸಹಕಾರ ನೀಡುತ್ತಿರುವುದನ್ನು ಸ್ಲಾಗತಿಸಿ ಇಂತಹ ಲಾಭಗಳಿಂದ ಮಕ್ಕಳಲ್ಲಿ ಪ್ರತಿಭೆ ಪ್ರದರ್ಶಿಸಲು ಹಾಗೂ ಅನೇಕ ಆಲೋ ಚನಾ ಶಕ್ತಿಗಳನ್ನು ಬೆಳೆಸಲು ಅನುಕೂಲ ಮಾಡಿಕೊಡುತ್ತದೆ ಎಂದರು.
ಶಾಹಿಯ ಎಜಿಎಂ ಲಕ್ಷ್ಮಣ ಧರ್ಮಟ್ಟಿ ಅವರು ಮಾತನಾಡುತ್ತಾ, ಪ್ರಾಯೋಗಿಕ ಕಲಿಕೆಯಿಂದ ಮಾತ್ರ ಓದು ಸುಲಭವಾಗುತ್ತದೆ. ಇಂತಹ ಯೋಜನೆಯಲ್ಲಿ ನಮ್ಮ ಸಂಸ್ಥೆ ವಿಜ್ಞಾನ ಪ್ರಯೋಗಾಲಯವನ್ನು ನೀಡಿದ್ದು ಇದನ್ನು ಬಳಸಿ ನೀವು ಬೆಳೆಯಿರಿ ಎಂದರು.
ಡಯಟ್ ನ ಉಪ ಪ್ರಾಂಶುಪಾಲ ನಾಗರಾ ಜಪ್ಪ ಅವರು ಮಾತನಾಡುತ್ತಾ ಸರಿಯಾದ ಗುರಿಗಳೊಂದಿಗೆ ಮಕ್ಕಳು ಬೆಳೆಯಬೇಕು ನಿರಂತರವಾದ ಪ್ರಯತ್ನದ ಕಲಿಕೆಯಿಂದ ಯಶಸ್ಸು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮಣಪ್ಪ ವಹಿಸಿದ್ದು,ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್, ಶಾಹಿ ಎಕ್ಸ್ ಪೋರ್ಟ್ ನ ಪ್ರೀತೇಶ, ಸಹನಾಬಾನು, ನಾಗಯ್ಯ, ಪ್ರಮುಖರಾದ ಸೋಮ ಶೇಖರ್, ಪ್ರಮೀಳಾ, ಕರಿಬಸಪ್ಪ, ಮಂಜುಳಾ, ಭರ್ಮಪ್ಪ, ಸ್ಟೆಮ್ ನ ಧರ್ಮದೇವ್, ನವೀನ್, ಎಸ್‌ಡಿ ಎಂಸಿ ಪದಾಧಿಕಾರಿಗಳು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಭೌತಶಾಸ್ತ್ರ, ರಾಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ಅಧ್ಯಯನದ ವಿಶೇಷ ಪ್ರಯೋಗಶಾಲೆ ಇದಾ ಗಿದ್ದು, ಇದರಲ್ಲಿ ಎಲ್ಲ ಬಗೆಯ ಕಲಿಕೆಗೆ ಅನುಕೂಲವಾಗುತ್ತದೆ.