ಶಿವಮೊಗ್ಗ,ಡಿ.29:
ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ವಿವಿಧ ಕೃಷಿ ಪರಿಕರಗಳ ಮಾರಾಟಗಾರರು ನಿತ್ಯ ಅನುಭವಿಸುತ್ತಿರುವ ಅನೇಕ ಸಮಸ್ಯೆಗಳನ್ನು ಎದುರಿಸಲು ಹಾಗೂ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಮಾರಾಟಗಾರರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿ ಪರಿಹಾರ ಕಂಡುಕೊಳ್ಳಲು ನೂತನವಾಗಿ “ಮಲೆನಾಡು ಕೃಷಿ ಪರಿಕರಗಳ ಮಾರಾಟಗಾರರ ಸಂಘ” ವನ್ನು ಅಸ್ತಿತ್ವಕ್ಕೆ ತಂದಿದ್ದಾರೆ .


ಸಂಘದ ಪದಾಧಕಾರಿಗಳಾಗಿ ಈ ಕೆಳಕಂಡಂತೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ವೀರಶೇಖರ್, ಕಾರ್ಯದರ್ಶಿಯಾಗಿ ಡಾ. ಕೋಟೆ ಲೋಕೇಶ್ವರ್, ಉಪಾಧ್ಯಕ್ಷರುಗಳಾಗಿ ಎಸ್.ಪಿ.ನಾಗೇಶ್ ಬಾಬು ಮತ್ತು ಓ.ಈಶ್ವರಪ್ಪ, ಸಹ ಕಾರ್ಯದರ್ಶಿಯಾಗಿ ಎಸ್. ಕೆ. ರಾಕೇಶ್, ಖಜಾಂಚಿಯಾಗಿ ಬಿ. ಆರ್. ಶಿವಕುಮಾರ್ ಅವರು ಆಯ್ಕೆಯಾಗಿದ್ದಾರೆ. ಸಂಘದ ನಿರ್ದೇಶಕರುಗಳಾಗಿ ಬಿ. ಎಂ. ಸಿದ್ದಲಿಂಗಯ್ಯ, ಆರ್. ಸಂಜಯ್ಯ, ಜಿ. ಶ್ರೀನಿವಾಸ್, ಕೆ.ಜಿ. ಮಹೇಶ್ವರಪ್ಪ, ಆರ್.ಅಭಿಷೇಕ್, ಎಂ. ಎಸ್.ವಿಶ್ವನಾಥ್, ಪಿ .ಸುರೇಶ್, ಎಚ್. ಎಸ್. ಮಣಿಕಂಠ, ಕೆ. ಉಮೇಶ್, ಕೆ. ಎಚ್. ರವೀಂದ್ರ, ವೈ. ನಟರಾಜ್, ಎನ್. ಚ್. ಚಂದ್ರಶೇಖರ್ ಹಾಗೂ ಆರ್.ರಾಘವೇಂದ್ರ ಅವರುಗಳು ಆಯ್ಕೆಯಾಗಿದ್ದಾರೆ
.

By admin

ನಿಮ್ಮದೊಂದು ಉತ್ತರ

error: Content is protected !!