ಶಿವಮೊಗ್ಗ, ಡಿಸೆಂಬರ್ 19,

: ಕುಂಸಿ-ಆನಂದಪುರ ಸ್ಟೇಷನ್ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.80(ಕಿ.ಮೀ.96/200-300) ನ್ನು ತಾಂತ್ರಿಕವಾಗಿ ಪರಿಶೀಲನೆ ಮಾಡಬೇಕಾಗಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ವಾಹನ ಸಂಚಾರಕ್ಕೆ ಅಡಚಣೆ ಆಗದಂತೆ ಡಿ.25 ರಿಂದ 26 ರವರೆಗೆ ಗೇಟ್ ಮುಚ್ಚಿ ಕೆಳಕಂಡಂತೆ ತಾತ್ಕಾಲಿಕವಾಗಿ ಪಯಾರ್ಯ ಮಾರ್ಗ ಕಲ್ಪಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್. ಆದೇಶಿಸಿದ್ದಾರೆ.


     ರಿಪ್ಪನ್‍ಪೇಟೆಯಿಂದ ಆಯನೂರು ಮತ್ತು ಆಯನೂರಿನಿಂದ ರಿಪ್ಪನ್‍ಪೇಟೆಗೆ ಸಂಚರಿಸುವ ಲಘು ವಾಹನಗಳು ರೈಲ್ವೆ ಲೆವೆಲ್ ಕ್ರಾಸ್ ನಂ.79ರ ಮೂಲಕ ಆಯನೂರು, ಕುಂಸಿ, ಚೋರಡಿ, ಗುಂಡೂರು ಕ್ರಾಸ್, ಶೆಟ್ಟಿಕೆರೆ,

ಸೂಡೂರು, ರಿಪ್ಪನ್‍ಪೇಟೆ ಹಾಗೂ ರಿಪ್ಪನ್‍ಪೇಟೆಯಿಂದ ಶಿವಮೊಗ್ಗಕ್ಕೆ ಬರುವ ವಾಹನಗಳು ರಿಪ್ಪನ್‍ಪೇಟೆ, ಸೂಡೂರು, ಶೆಟ್ಟಿಕೆರೆ, ಚೋರಡಿ, ಕುಂಸಿ, ಆಯನೂರು, ಶಿವಮೊಗ್ಗ ಮಾರ್ಗವಾಗಿ ಹಾಗೂ ಭಾರಿ ವಾಹನಗಳು ಅಯನೂರು,

ಕುಂಸಿ, ಚೋರಡಿ, ಆನಂದಪುರ, ರಿಪ್ಪನ್‍ಪೇಟೆ ಮುಖಾಂತರ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಡಿ.14 ರ ಆದೇಶದಲ್ಲಿ ಸೂಚಿಸಿದ್ದಾರೆ.
——————————

By admin

ನಿಮ್ಮದೊಂದು ಉತ್ತರ

error: Content is protected !!