ಶಿವಮೊಗ್ಗ, ಡಿ.೧೯:
ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶ ದಿಂದ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗ ದಲ್ಲಿ ನಡೆಯಲಿರುವ ಕರೋಕೆ ಸ್ಪರ್ಧೆಗೆ ೧೦೦ಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಂಘದ ನಿರ್ದೇಶಕ ಹಾಗೂ ಕಾರ್ಯಕ್ರಮ ಸಂಚಾಲಕ ರಾಮಚಂದ್ರ ಗುಣಾರಿ ತಿಳಿಸಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎರಡು ವಿಭಾಗದಲ್ಲಿ ಈ ಸ್ಪರ್ಧೆ ನಡೆಯುತ್ತಿದ್ದು, ೩೬ ರಿಂದ ೫೫ ರ ವಯೋಮಿತಿಯವರ ವಿಭಾಗದ ಅರ್ಹತಾ ಸುತ್ತಿನ ಸ್ಪರ್ಧೆಗಳು ಡಿ.೨೨ರಂದು ಮಧ್ಯಾಹ್ನ ೨ಕ್ಕೆ ಪ್ರಸ್‌ಟ್ರಸ್ಟ್ ನೂತನ ಸಂಭಾಗಣದಲ್ಲಿ ನಡೆಯಲಿದೆ. ೨೦ ರಿಂದ ೩೫ ರ ವಯೋಮಿತಿಯ ವಿಭಾಗದ ಅರ್ಹ ತಾ ಸುತ್ತಿನ ಸ್ಪರ್ಧೆಗಳು ಡಿ.೨೩ರಂದು ಮಧ್ಯಾಹ್ನ ೨ಕ್ಕೆ ನಡೆಯಲಿವೆ. ಅರ್ಹತಾ ಸುತ್ತಿನಲ್ಲಿ ಈ ಎರಡು ವಿಭಾಗದದ ೨೦ರಿಂದ ೨೫ ಸ್ಪರ್ಧೆಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.


ಪ್ರತಿ ಸ್ಪರ್ಧಿಗೆ ಹಾಡುಗಾರಿಕೆಗೆ ೩ರಿಂದ ೪ ನಿಮಿಷ ಕಾಲಾವಕಾಶವಿರುತ್ತದೆ. ಅಭ್ಯರ್ಥಿಯು ೨ ಹಾಡುಗಳಿಗೆ ಸಿದ್ಧರಾಗಿ ಬರತಕ್ಕದ್ದು. ಸ್ಪರ್ಧಿಯು ಹಾಡಬಯಸುವ ಹಾಡಿನ ಕರೋಕೆ ಆಡಿಯೋ ಫೈಲನ್ನು ಪೆನ್ ಡ್ರೈವ್ ಅಥವಾ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿ ಕೊಂಡು ಬರಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಪಯಣ ವೆಚ್ಚ, ಊಟ, ವಸತಿ ವೆಚ್ಚವನ್ನು ಅಭ್ಯರ್ಥಿಗಳೇ ಭರಿಸತಕ್ಕದ್ದು. ಕಾರ್ಯಕ್ರಮ ವೇಳೆ ಹೈ ಟೀ ವ್ಯವಸ್ಥೆ ಮಾಡಲಾಗುವುದು ಎಂದರು.


ಅರ್ಹತಾ ಸುತ್ತಿನಲ್ಲಿ ಆಯ್ಕೆಯಾದ ಹಾಡುಗಾರರಿಗೆ ಮುಂದಿನ ಸುತ್ತುಗಳ ಬಗ್ಗೆ ಮಾಹಿತಿ ನೀಡಲಾಗುವುದು. ಅರ್ಹತಾ ಸುತ್ತಿನಲ್ಲಿ ಮೂವರು ತೀರ್ಪುಗಾರರು ಪಾಲ್ಗೊ ಳ್ಳುವರು. ಆಯ್ಕೆ ಸುತ್ತುಗಳಲ್ಲಿ ಪ್ರತಿ ಸುತ್ತಿಗೆ ಒಬ್ಬ ಅತಿ ಥಿಯನ್ನು ಆಹ್ವಾನಿಸಲಾಗುವುದು. ಒಟ್ಟು ೮ ಸುತ್ತುಗಳು ನಡೆಯುತ್ತವೆ. ಎಲ್ಲಾ ಸುತ್ತುಗಳು ವಿಷಯಾಧಾರಿತ ಸುತ್ತುಗಳಾಗಿರುತ್ತವೆ. ಈ ಸುತ್ತುಗಳಲ್ಲಿ ತೀರ್ಪುಗಾರರೇ ಮುಂಚಿತವಾಗಿ ಹಾಡುಗಳನ್ನು ಸೂಚಿಸುತ್ತಾರೆ. ಅಭ್ಯ ರ್ಥಿಗಳು ಈ ಹಾಡುಗಳಿಗೆ ಸಿದ್ಧರಿರಬೇಕು. ಉತ್ತಮ ಕಂಠ, ಸ್ವರ, ಲಯ ಹಾಗೂ ತಾಳಗಳನ್ನು ಗಮನಿಸಲಾ ಗುವುದು. ಹೊರಊರಿನಿಂದ ಬರುವ ಗಾಯಕರಿಗೆ ಆಧ್ಯತೆ ನೀಡಲಾಗುವುದು ಎಂದು ತಿಳಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!