ಶಿವಮೊಗ್ಗ,ಡಿ.೧೩: ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಡಿ.೧೬ರಂದು ಸಂಜೆ ೬ಗಂಟೆಗೆ ಕೋಟಿ ಶ್ರೀರಾಮಾಂಜನೇಯ ದೇವಸ್ಥಾನದಲ್ಲಿ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಗುರುಗುಹ ಸಂಗೀತ ಮಹಾವಿದ್ಯಾಲಯದ ಶೃಂಗೇರಿ ನಾಗರಾಜ್ ಹೇಳಿದರು.


ಅವರು ಇಂದು ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ ಅಸ್ಮಿತೆಯಾದ ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಗೊಳ್ಳುತ್ತಿರುವ ಸಂಭ್ರಮದ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಶ್ರೀರಾಮ ದೀಪೋತ್ಸವ ವಿಶೇಷ ಉಪನ್ಯಾಸ ಹಾಗೂ ಅಭಿನಂದನೆ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ ಎಂದರು.
ಡಿ.೧೬ರಂದು ಸಂಜೆ ೬ಗಂಟೆಗೆ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರು ರಚಿಸಿದ ಅಯೋಧ್ಯಾ ಸಚಿತ್ರ ರಾಮಾಯಣ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು ಹಾಗೂ ದೇಶದ ಅಸ್ಮಿತೆಯ ಸಂಕೇತವಾಗಿ ಆಯೋಧ್ಯೆಯ ಶ್ರೀರಾಮ ಮಂದಿರ ವಿಷಯ ಕುರಿತು ಚಿಂತಕ ರೋಹಿತ್ ಚಕ್ರತೀರ್ಥರವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಹಾಗೆಯೇ ಆಯೋಧ್ಯೆಯಲ್ಲಿ ಈ ಹಿಂದೆ ನಡೆದ ಕರಸೇವಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಎಸ್.ಎನ್. ಚೆನ್ನಬಸಪ್ಪನವರನ್ನು ಸನ್ಮಾನಿಸಲಾಗುವುದು ಎಂದರು.


ಅಜೇಯ ಸಂಸ್ಕೃತಿ ಬಳಗದ ಕಾರ್ಯದರ್ಶಿ ಅಚ್ಯುತರಾವ್ ಮಾತನಾಡಿ, ರಾತ್ರಿ ೮ಗಂಟೆಗೆ ಆಯೋಧ್ಯೆಯ ಶ್ರೀರಾಮ ದೇವಾಲಯ ನಿರ್ಮಾಣಗೊಳ್ಳುತ್ತಿರುವ ಹಿನ್ನಲೆಯನ್ನು ಸಡಗರ ಸಂಭ್ರಮಗಳಿಂದ ಸ್ವಾಗತಿಸುತ ಶ್ರೀರಾಮಜ್ಯೋತಿಯನ್ನು ಬೆಳಗಿಸುವ ಶ್ರೀರಾಮ ದೀಪೋತ್ಸವವನ್ನು ಆಯೋಜಿಸಲಾಗಿದೆ. ದೀಪ ಹಚ್ಚುವ ಇಚ್ಚೆಯುಳ್ಳವರು ಕೋಟೆಶ್ರೀರಾಮಾಂಜನೇಯ ದೇವಸ್ಥಾನದ ಕಚೇರಿಯಲ್ಲಿ ಉಚಿತ ಟೋಕನ್ ಪಡೆಯಬೇಕು ಎಂದರು.


ಅಂದಿನ ಎಲ್ಲಾ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಲೇಖಕ ಕೊರ್ಗಿಶಂಕರನಾರಾಯಣ ಉಪಧ್ಯಾಯ, ಅರ್ಚಕರಾದ ಭಾರ್ಗವ ರಾಮ ಅಯ್ಯಂಗಾರ್ ಉಪಸ್ಥಿತರಿರುವರು. ಅಜೆಯ ಸಂಸ್ಕೃತಿ ಬಳಗದ ಅಧ್ಯಕ್ಷ ಜೆ.ರಾಮಾಚಾರ್ ಅಧ್ಯಕ್ಷತೆ ವಹಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕುಮಾರ ಶಾಸ್ತ್ರಿ, ನಾಗೇಶ್, ವಿನಯ್, ಚೇತನ್, ಹರೀಶ್ ಕಾರ್ಣಿಕ್ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!