ಕಾವ್ಯಕ್ಕೆ ಯಾವುದೇ ಕಟ್ಟಳೆಗಳು ಇರಬಾ ರದು ಎಂದು ಪತ್ರಕರ್ತ ಆರುಂಡಿ ಶ್ರೀನಿವಾಸ ಮೂರ್ತಿ ಹೇಳಿದರು.
ಅವರು ಇಂದು ಹೊಸಮನೆಯ ಶ್ರೀ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪ್ರೊ. ಸತ್ಯನಾರಾಯಣರ ಬದುಕಿನ ರಥದ ಸುತ್ತಮುತ್ತ ಪುಸ್ತಕ ಬಿಡುಗಡೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಕಾವ್ಯ ತಣ್ಣಗಿರಬೇಕು. ಅದಕ್ಕೆ ಯಾವುದೇ ವಿಧಿ ವಿಧಾನಗಳು ಇರಬಾರದು. ಸಹಜವಾಗಿ ಮೂಡಿಬರಬೇಕು. ಗಿಡದಲ್ಲಿ ಅರಳುವ, ನಳನಳಿ ಸುವ ಹೂವಿನಂತೆ ಕಾವ್ಯ ಇರಬೇಕು. ಅವಸ ರದ, ಅಧ್ಯಯನವೇ ಇಲ್ಲದ ಅನುಭವದ ಕೊರತ ಇರುವ ಕಾವ್ಯಗಳು ಗಟ್ಟಿತನ ಕಂಡುಕೊಳ್ಳಲು ಸಾಧ್ಯವಿಲ್ಲ. ಅನುಭವವೇ ಕಾವ್ಯದ ಸಾರ ಎಂದರು.


ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್. ಸುಂದರ್‌ರಾಜ್ ಮಾತನಾಡಿ, ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಮಾತನಾಡುವ ಮೂಲಕ ಉಳಿಸಬೇಕಾಗಿದೆ. ಆಂಗ್ಲ ಭಾಷೆ ಅಂತರಾ ಷ್ಟ್ರೀಯ ಭಾಷೆ ಎಂಬ ತಪ್ಪು ಕಲ್ಪನೆ ನಮಗಿದೆ. ಕನ್ನಡ ಭಾಷೆ ಉದಯವಾದ ಎಷ್ಟೋ ವರ್ಷಗಳ ನಂತರ ಆಂಗ್ಲ ಭಾಷೆ ಬಂದಿದೆ. ಅದರ ವ್ಯಾಮೋಹದಿಂದ ಹೊರಬಂದು ಕನ್ನಡವನ್ನು ಉಳಿಸಬೇಕಾಗಿದೆ. ಕನ್ನಡ ಪುಸ್ತಕಗಳನ್ನು ಕೊಂಡು ಓದಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿ ಹಾಗೂ ಪುಸ್ತಕದ ಲೇಖಕ ಪ್ರೊ. ಸತ್ಯನಾರಾ ಯಣ ಮಾತನಾಡಿ, ಕನ್ನಡಕ್ಕೆ ಆದ್ಯತೆ ಇರಬೇಕು. ಕನ್ನಡನ್ನು ಪ್ರೀತಿಸಬೇಕು. ಗೌರವಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷೆ ನಾಗರತ್ನಾ ಕುಮಾರ್, ಉಪಪ್ರಾಂಶುಪಾಲೆ ಲಕ್ಷ್ಮೀ ರವೀಶ್, ರಮೇಶ್, ಸಾವಿತ್ರಮ್ಮ, ಪಾಲಾಕ್ಷಪ್ಪ ಮುಂತಾದವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!