ಸಾಕ್ಷ್ಯ ಟಿವಿ ಸುದ್ದಿ ವರದಿ:
ಕ್ರಿಕೇಟ್ ಪಂದ್ಯಾವಳಿಯಲ್ಲಿ ಭಾರತ ವಿಶ್ವಕಪ್ ನ್ನು ಗೆದ್ದರೆ ಬೀಚ್ ನಲ್ಲಿ ಬೆತ್ತಲಾಗಿ ಓಡಾಡುವೇ ಎಂದು ನಟಿಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ನಿನ್ನೆ ರಾತ್ರಿ ಸೆಮಿಫೈನಲ್ ಆಡುತ್ತಿರುವ ಭಾರತ ತಂಡ ಎದುರಾಳಿ ನ್ಯೂಜಿಲೆಂಡ್ ತಂಡಕ್ಕೆ ಭಾರೀ ಟಾರ್ಗೆಟ್ ನ್ನೇ ನೀಡಿದೆ. ಈ ಮಧ್ಯೆ ತೆಲುಗು ನಟಿ ಭಾರತ ವಿಶ್ವಕಪ್ ಗೆದ್ದರೆ ಬೆತ್ತಲಾಗಿ ವಿಶಾಖಪಟ್ಟಣದ ಬೀಚ್​ನಲ್ಲಿ ಓಡಾಡುವುದಾಗಿ ಹೇಳಿದ್ದಾರೆ.
ಮತ್ತೊಂದು ಫೊಸ್ಟ್​ನಲ್ಲಿ ‘ಧರ್ಮದ ಕಾರಣಕ್ಕೆ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಗೆಲ್ಲಲಿ ಎಂದು ಕೋರಿಕೊಳ್ಳುತ್ತಿದ್ದವರು ಈಗ ನನ್ನ ಘೋಷಣೆ ನಂತರ ಭಾರತ ಗೆಲ್ಲಲಿ ಎಂದು ಪ್ರಾರ್ಥಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ
.

. ಗ್ಲಾಮರಸ್ ಪಾತ್ರಗಳ ಮೂಲಕವೇ ಜನಪ್ರಿಯತೆ ಗಳಿಸಿರುವ ನಟಿ ಪೂನಂ ಪಾಂಡೆ ಮೊದಲ ಬಾರಿ ಹೀಗೆ ಹೇಳಿಕೆ ನೀಡಿದ್ದರು. 2013ರ ವಿಶ್ವಕಪ್ ಆಡುವ ಸಮಯದಲ್ಲಿ, ‘ಭಾರತ ವಿಶ್ವಕಪ್ ಗೆದ್ದರೆ ಬೆತ್ತಲಾಗುವೆ’ ಎಂದು ಹೇಳಿಕೆ ನೀಡಿದ್ದರು. ಪೂನಂರ ಈ ಹೇಳಿಗೆ ತೀವ್ರ ವಿರೋಧ ಆಗ ವ್ಯಕ್ತವಾಗಿತ್ತು.
ಈಗ ತೆಲುಗು ನಟಿ ರೇಖಾ ಬೋಜ್, ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಚಾಂಪಿಯನ್ ಆದರೆ ನಾನು ವಿಶಾಖಪಟ್ಟಣದ ಬೀಚ್​ನಲ್ಲಿ ಬೆತ್ತಲಾಗಿ ಓಡಾಡುತ್ತೇನೆ ಎಂದು ಫೇಸ್​ಬುಕ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಟಿಯ ಪೋಸ್ಟ್​ಗೆ ಹಲವಾರು ಪ್ರತಿಕ್ರಿಯೆಗಳು ಬಂದಿದ್ದು, ಹಲವರು ಪೋಸ್ಟ್ ಖಂಡಿಸಿದ್ದಾರೆ. ಇನ್ನೂ ಹಲವರು ಫೈನಲ್ ಪಂದ್ಯವನ್ನು ವೈಜಾಗ್​ ಬೀಚ್​ನಲ್ಲಿಯೇ ನಿಂತು ವೀಕ್ಷಿಸುತ್ತೇವೆ ಎಂದು ತರಲೆ ಮಾತುಗಳನ್ನು ಆಡಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!