ತುಂಗಾತರಂಗ, ಶಿವಮೊಗ್ಗ

ಸುಮಾರು 20 ವರ್ಷಗಳ ದಾಂಪತ್ಯ ಬದುಕಿನ ನಡುವೆ ಪತ್ನಿಯನ್ನು ಕಳೆದುಕೊಂಡಾಗ ಪತಿ ಹೇಗೆ ತಾನೇ ಮಾನಸಿಕ ತುಮುಲಕ್ಕೆ ಒಳಗಾಗುತ್ತಾನೆ. ಅದೆಂತಹ ಜಗಳ, ಪ್ರೀತಿ ಇರಲಿ, ಜೀವನದ ಆಸರೆಯಾದಾಗ ಮಾನಸಿಕ ಸೀಮಿತತೆ ಕಳೆದುಕೊಂದು ತನ್ನ ಬದುಕನ್ನು ನಾನೇ ಅಂತ್ಯ ಮಾಡಿಕೊಳ್ಳುತ್ತಾನೆ ಎಂಬುದಕ್ಕೆ ಶಿವಮೊಗ್ಗ ಪೊಲೀಸ್ ಇಲಾಖೆಯ ಎಸ್ ಐ ಜಯಪ್ಪ ಸಾಕ್ಷಿಯಾಗಿ ನಿಲ್ಲುತ್ತಾರೆ.


ಸುಂದರ ದಾಂಪತ್ಯ ಜೀವನದ ಜೊತೆ ಇಬ್ಬರು ಲಕ್ಷ್ಮಿಯರನ್ನು ಹೊಂದಿದ್ದ ಸುಖೀ ಕುಟುಂಬದಲ್ಲಿ ಪತ್ನಿ ಹಸಲಿ ಸನ್ಯಾಸಿ ಕೋಡಮಗ್ಗಿಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರ ಸಾವು ಜಯಪ್ಪರನ್ನು ನಿಜಕ್ಕೂ ಮಾನಸಿಕವಾಗಿ ನಿತ್ರಾಣವನ್ನಾಗಿ ಮಾಡಿದೆ
ಸರಳ ಸಜ್ಜನಿಕೆಯ ಪೊಲೀಸ್ ಉದ್ಯೋಗಿ ಜಯಪ್ಪ ಹಾಗೂ ಅವರ ಪತ್ನಿ ಇಬ್ಬರು ಪುತ್ರಿಯನ್ನು ಹೊಂದಿದ್ದು, ಪ್ರಸ್ತುತ ಪಿಯುಸಿ ಹಾಗೂ ಹೈಸ್ಕೂಲ್ ಮಟ್ಟದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮೊನ್ನೆ ಅಷ್ಟೇ ಅಂದರೆ ಕಳೆದ ನಾಲ್ಕು ದಿನದ ಹಿಂದೆ ಸಾವನ್ನು ತರುವ ಕಾಯಿಲೆಗೆ ಪತ್ನಿ ಹೊಂದುತ್ತಾರೆ. ಈ ನೋವು ತಾಳಲಾರದೆ ಪೊಲೀಸ್ ಉದ್ಯೋಗಿ ಜಯಪ್ಪ ತಮ್ಮ ಸಮವಸ್ತ್ರದಲ್ಲೇ ಮಕ್ಕಳಿಗೊದು ಪುಟ್ಟ ಪತ್ರ ಬರೆದು ನೇಣಿಗೆ ಶರಣಾಗಿರುವುದು ನಿಜಕ್ಕೂ ದುರಂತದ ಘಟನೆಯೇ ಹೌದು. ಹಾಗೆಯೇ ತಮ್ಮ ಪುತ್ರಿಯರ ಜವಾಬ್ದಾರಿಯನ್ನು ಅದೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಂಬಂಧಿಕರಿಗೆ ವಹಿಸಿ ತಮ್ಮ ಕರ್ತವ್ಯವನ್ನು ಮುಗಿಸಿರುವುದು ಮಾತ್ರ ದುರಂತ.


ವಿವರ
ನಿನ್ನೆ ಕರ್ತವ್ಯ ಮುಗಿಸಿಕೊಂಡು ಬಂದಿದ್ದ ಸಂಚಾರಿ ಪಶ್ಚಿಮ ಪೊಲೀಸ್ ಠಾಣೆಯ ಎಎಸ್ ಐ ಜಯಪ್ಪ ಉಪ್ಪಾರ್ (49) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿನೋಬ ನಗರದ ಕರಿಯಣ್ಣ ಮನೆ ಹತ್ತಿರವಿರುವ ತಮ್ಮ ಸ್ವಂತ ಮನೆಯಲ್ಲಿ ಜಯಪ್ಪನವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಾಣಾಗಿದ್ದಾರೆ. ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೂರು ದಿನಗಳ ಹಿಂದೆ ಪತ್ನಿ ಅನಾರೋಗ್ಯದಿಂದ ಅಸುನೀಗಿದ್ದರು. ಈ ನೋವು ಜಯಪ್ಪನವರಲ್ಲಿ ಅಗಾಧವಾಗಿ ಬೇರೂರಿತ್ತು ಎಂದು ಹೇಳಲಾಗಿದೆ. ಪತ್ನಿಯ ಅಗಲಿಕೆಯಿಂದ ಜಯಪ್ಪ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅವರ ಆಪ್ತವಲಯ ಹೇಳುತ್ತಿದೆ.
ಕೆಲಸ ಮುಗಿಸಿಕೊಂಡು ಮನೆಗೆ ಹೋದ ಜಯಪ್ಪ ಸಮವಸ್ತ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿನೋಬ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

By admin

ನಿಮ್ಮದೊಂದು ಉತ್ತರ

error: Content is protected !!