ಹಿಂದೂ ಮಹಾಸಭಾಗಣಪನ ಮೆರವಣಿಗೆ ಸುತ್ತದ ಪೊಲೀಸ್ ಕಸ್ಟಡಿ ಡೀಟೈಲ್ಸ್, ಸುದ್ದಿ
-ತುಂಗಾತರಂಗ ದಿನಪತ್ರಿಕೆ

ಶಿವಮೊಗ್ಗ, ಸೆ.27:
ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಹಾಗೂ ಅದಕ್ಕೆ ಪೂರಕವಾಗಿ ಮೆರವಣಿಗೆಯ ಬಂದೂಬಸ್ತಿನ ವಿಚಾರವಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಸಕಲ ಸಿದ್ಧತೆ ನಡೆಸಿದ್ದು, ಇಂದು ಶಿವಮೊಗ್ಗದ ಮೆರವಣಿಗೆ ಜಾಗದಲ್ಲಿ ಪೊಲೀಸ್ ಬಂದೋಬಸ್ತಿನ ಪಾಠ ಹೇಳಿಕೊಡಲಾಯಿತು.

ಸುದ್ದಿ ಓದಿ ಕೆಳಗಿನ ಲಿಂಕ್ ಬಳಸಿ

ನಾಳಿನ ಗಣಪನ ಮೆರವಣಿಗೆಗೆ ಸಜ್ಜಾದ ಶಿವಮೊಗ್ಗ |ಬಹುತೇಕ ರಸ್ತೆಗಳಲ್ಲಿ ಕೇಸರಿ ತೋರಣ |ಗಾಂಧಿ ಬಜಾರ್ ದ್ವಾರದಲ್ಲಿ ಉಗ್ರನರಸಿಂಹ ಮೂರ್ತಿ ಸ್ಥಾಪನೆ | ಗೀತೋಪದೇಶಸಾರುವ ಚಿತ್ರಗಳು| ಚಂದ್ರಯಾನ -3 ರಾಕೆಟ್ ಪ್ರತಿಕೃತಿ ನಿರ್ಮಾಣ https://tungataranga.com/?p=23851

ಪೂರ್ತಿ ಸುದ್ದಿ👆👆 ಓದಲು ಕೊಟ್ಟಿರುವ ಲಿಂಕ್ ಬಳಸಿ


ನಾಳೆ ಸೆ.28ರಂದು ನಡೆಯುವ ಶಿವಮೊಗ್ಗ ನಗರದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಜಿ. ಕೆ. ನೇತೃತ್ವದಲ್ಲಿ ಈ ದಿನ ಸಂಜೆ ಶಿವಮೊಗ್ಗ ನಗರದಲ್ಲಿ ರೂಟ್ ಮಾರ್ಚ್ (ಪಥ ಸಂಚಲನ) ನ್ನು ಹಮ್ಮಿಕೊಂಡಿತ್ತು.


ಶಿವಮೊಗ್ಗ ನಗರದ ಗೋಪಿ ವೃತ್ತದಿಂದ ಪ್ರಾರಂಭಿಸಿ, ಅಮೀರ್ ಅಹಮ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಗಾಂಧಿ ಬಜಾರ್ ರಸ್ತೆ, ಎಂಕೆಕೆ ರಸ್ತೆ, ಕೆ ಆರ್ ಪುರಂನಿಂದ ಆರ್.ಎಂ.ಎಲ್ ನಗರದ ಟೆಂಪೋ ಸ್ಟಾಂಡ್ ಗೆ ಬಂದು ಮುಕ್ತಾಯ ಮಾಡಲಾಯಿತು.
ಸದರಿ ರೂಟ್ ಮಾರ್ಚ್ (ಪಥ ಸಂಚಲನ) ನಲ್ಲಿ ಪೊಲೀಸ್ ಉಪಾಧೀಕ್ಷಕರುಗಳು, ಪೊಲೀಸ್ ವೃತ್ತ ನಿರೀಕ್ಷಕರುಗಳು, ಪೊಲೀಸ್ ನಿರೀಕ್ಷಕರುಗಳು, ಪೊಲೀಸ್ ಉಪ ನಿರೀಕ್ಷಕರುಗಳು ಹಾಗೂ ಆರ್‌.ಎ.ಎಫ್‌, ಡಿಎಆರ್, ಕೆಎಸ್ಆರ್.ಪಿ, ಸಿವಿಲ್ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಹಾಗೂ ಗೃಹ ರಕ್ಷಕ ಸಿಬ್ಬಂಧಿಗಳು ಭಾಗವಹಿಸಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!