ಶಿವಮೊಗ್ಗ: ಬೆಂಗಳೂರು ಮೂಲದ ಪ್ರಮುಖ ಇಂಜಿನಿಯರಿಂಗ್ ವಿನ್ಯಾಸ ಸೇವೆಗಳ ಕಂಪನಿಯಾದ ಎನ್ವೆಂಚರ್ ಶಿವಮೊಗ್ಗದ ಪಿ.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್ಮೆಂಟ್ ಎನ್ವೆಂಚರ್ ಸೆಂಟರ್ ಫಾರ್ ಅಡ್ವಾನ್ಸ್ಡ್ ಡಿಜಿಟಲ್ ಕನ್ಸ್ಟ್ರಕ್ಷನ್ ಕೇಂದ್ರವನ್ನು ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿ?ತ್ ಸದಸ್ಯ ರಾದ ಎಸ್.ರುದ್ರೇಗೌಡ , ಡಿ.ಎಸ್. ಅರುಣ್ ಉದ್ಘಾಟಿಸಿದರು.
ಎನ್ವೆಂಚರ್ ಅಧ್ಯಕ್ಷ ಅನಿಲ್ ಶಿವದಾಸ್ ಮಾತನಾಡಿ, ಹೊಸದಾಗಿ ಪದವಿ ಪಡೆದ ಇಂಜಿನಿಯರ್ಗಳಿಗೆ ಮತ್ತು ಶಿವಮೊಗ್ಗಕ್ಕೆ ಪುನಃ ವಲಸೆ ಹೋಗಲು ಬಯಸುವ ಇಂಜಿನಿಯರ್ಗಳಿಗೆ ಈ ಕೇಂದ್ರವು ಉದ್ಯೋಗಾವಕಾಶ ಒದಗಿಸುತ್ತದೆ ಎಂದರು.
ಈ ವ?ದಲ್ಲಿ ಎನ್ವೆಂಚರ್ ಸೆಂಟರ್ ಫಾರ್ ಅಡ್ವಾನ್ಸ್ಡ್ ಡಿಜಿಟಲ್ ಕನ್ಸ್ಟ್ರಕ್ಷನ್ ಪಿ.ಇ.ಎಸ್.ಐ.ಟಿ.ಎಂ.ನಿಂದ ಸುಮಾರು ೧೦೦ ಇಂಜಿನಿಯರ್ಗಳನ್ನ ನೇಮಕ ಮಾಡಿಕೊಳ್ಳಲಿದೆ. ಬಿಲ್ಡಿಂಗ್ ಇನ್ಫಾರ್ಮೇ?ನ್, ಮಾಡಲಿಂಗ್, ಕಟ್ಟಡಗಳ ಯೋಜನೆ ವಿನ್ಯಾಸ ಮತ್ತು ನಿರ್ಮಾಣಕ್ಕೆ ನಿರ್ಣಾಯಕವಾದ ತ್ರಿಡಿ ವಿನ್ಯಾಸ ತಂತ್ರಜ್ಞಾನದಲ್ಲಿ ಹೆಚ್ಚಿನ ಸಾಮರ್ಥ್ಯ ಗಳಿಸುವಲ್ಲಿ ಈ ಕೇಂದ್ರವು ಅವರಿಗೆ ಮೂರು ತಿಂಗಳ ಅವಧಿಗೆ ತರಬೇತಿ ನೀಡುತ್ತದೆ ಎಂದರು.
ಈ ಕೇಂದ್ರವು ೩ಡಿ ವಿನ್ಯಾಸ ತಂತ್ರಜ್ಞಾನದಲ್ಲಿ ಒಟ್ಟಾರೆ ಕೌಶಲ್ಯ ಮಟ್ಟವನ್ನು ಸುಧಾರಿಸುವಲ್ಲಿ ಅಧ್ಯಾಪಕರೊಂದಿಗೆ ಕೆಲಸ ಮಾಡುತ್ತದೆ ಶಿವಮೊಗ್ಗದ ಕ್ಯಾಂಪಸ್ನಲ್ಲಿ ನಮ್ಮ ಸೆಂಟರ್ ಫಾರ್ ಅಡ್ವಾನ್ಸ್ಡ್ ಡಿಜಿಟಲ್ ಕನ್ಸ್ಟ್ರಕ್ಷನ್ ಸ್ಥಾಪಿಸಲು ನಮಗೆ ಅವಕಾಶ ನೀಡಿದ ಪಿಇಎಸ್ಗೆ ಅಭಿನಂದಿಸಿದರು.
ನಗರಗಳಲ್ಲಿನ ಪ್ರತಿಭೆಗಳನ್ನು ಗುರುತಿಸುವ ಮತ್ತು ಅಲ್ಲಿ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ನಾವು ಹೊಂದಿದ್ದೇವೆ ಏಕೆಂದರೆ ಇದು ನಮಗೆ ದೊಡ್ಡ ಪ್ರತಿಭೆಯ ಗುಂಪನ್ನು ನೀಡುತ್ತದೆ ದೇಶದ ಮೂಲೆ ಮೂಲೆಗಳಲ್ಲಿ ಲಭ್ಯವಿರುವ ಕೌಶಲ್ಯಗಳು ಮತ್ತು ಈ ಪ್ರದೇಶಗಳಲ್ಲಿನ ಮೂಲ ಸೌಕರ್ಯ ಅಭಿವೃದ್ಧಿಗೆ ಹರಿದು ಬರುತ್ತಿರುವ ಸ್ಥಿರ ಹೂಡಿಕೆಗಳಿಂದಾಗಿ ಈ ನಗರಗಳು ಕ್ರಮೇಣ ಭಾರತದ ಉದ್ಯೋಗ ಮಿಶ್ರಣದಲ್ಲಿ ಉತ್ತಮ ಶ್ರೇಯಾಂಕಗಳನ್ನು ಪಡೆಯುತ್ತವೆ ಎಂದರು.
ಕಾರ್ಯಪಡೆಯನ್ನು ಇನ್ನಿ? ವೈವಿಧ್ಯಮಯವಾಗಿ ಎರಡು ಮತ್ತು ಮೂರನೇ ಶ್ರೇಣಿಯ ನಗರಗಳ ಇಂಜಿನಿಯರ್ ಪ್ರತಿಭೆಗಳನ್ನು ಬಳಸಿಕೊಳ್ಳುವ ಉದ್ದೇಶ ಇದಾಗಿದೆ. ಎನ್ವೆಂಚರ್ ಸೆಂಟರ್ ಫಾರ್ ಅಡ್ವಾನ್ಸ್ಡ್ ಡಿಜಿಟಲ್ ಕನ್ಸ್ಟ್ರಕ್ಷನ್ ಹೊಸದಾಗಿ ಪದವಿ ಪಡೆದ ಇಂಜಿನಿಯರ್ಗಳಿಗೆ ಅನುಭವಿ ವೃತ್ತಿಪರರಿಂದ ಮಾರ್ಗದರ್ಶನ ಪಡೆಯಲು ಉತ್ತಮ ಅವಕಾಶ ಒದಗಿಸಿಕೊಡುತ್ತದೆ ಎಂದರು.