ಶಿವಮೊಗ್ಗ, ಸೆಪ್ಟೆಂಬರ್ ೧೩,

: ಸಾಗರ ಜಂಬಗಾರು-ಆನಂದಪುರ ಸ್ಟೇ?ನ್ ನಡುವೆ ಬರುವ ರೈಲ್ವೆ ಲೆವಲ್ ಕ್ರಾಸಿಂಗ್ ಗೇಟ್ ನಂ:೧೩೨ ಕಿ.ಮಿ :೧೪೪/೨೦೦-೩೦೦ ಮತ್ತು ಕುಂಸಿ-ಆನಂದಪುರ ಸ್ಟೇ?ನ್ ನಡುವೆ ಬರುವ

ಎಲ್ ಸಿ ನಂ: ೧೦೫ ಕಿ.ಮೀ ೧೧೭/೦೦೦-೧೦೦ ರಲ್ಲಿ ತಾಂತ್ರಿಕವಾಗಿ ಪರಿಶೀಲನೆ ಮಾಡುವುದಕ್ಕಾಗಿ ದಿನಾಂಕ:೧೩.೯.೨೦೨೩ ರಿಂದ ದಿನಾಂಕ:೧೫.೯.೨೦೨೩ ಮತ್ತು ದಿನಾಂಕ: ೨೦.೯.೨೦೨೩ ರಿಂದ ದಿನಾಂಕ:೨೨.೯.೨೦೨೩ ರವರೆಗೆ ಗೇಟ್ ಮುಚ್ಚಿ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.


ಸೆ.೧೩ ರಿಂದ ೧೫ರವರೆಗೆ ಸಾಗರ ಜಂಬಗಾರು -ಆನಂದಪುರ ಮಧ್ಯ ಬರುವ ರೈಲ್ವೆ ಲೆವಲ್ ಕ್ರಾಸಿಂಗ್ ೧೩೨ ನ್ನು ತೆರೆದು ಪರಿಶೀಲನೆ ಮಾಡುವ ಸಂದರ್ಭದಲ್ಲಿ ವಾಹನಗಳು ಸೂರಬ ರಸ್ತೆಯ ಮೂಲಕ ರೈಲ್ವೆ ಲೆವೆಲ್ ಕ್ರಾಸ್ ಗೇಟ್ ೧೩೦ ರ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂಚರಿಸಬಹುದಾಗಿದೆ.


ಸೆ.೨೦ ರಿಂದ ಸೆ. ೨೨ರವರೆಗೆ ಕುಂಸಿ – ಆನಂದಪುರ ಮಧ್ಯೆ ಬರುವ – ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ೧೦೫ ನ್ನು ತೆರೆದು ತಾಂತ್ರಿವಾಗಿ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಎಲ್ಲಾ ವಾಹನಗಳು ಆನಂದಪುರ –

ಎಡೇಹಳ್ಳಿ – ಹೆಬ್ಬೆಲ್ ರಸ್ತೆ- ಅಡೂರು -ಕೋಣನತಲೆ- ಹೊಸೂರು ಮೂಲಕ ರೈಲ್ವೆ ಲೆವಲ್ ಕ್ರಾಸ್ ಗೇಟ್ ನಂ: ೧೦೪ ರ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂಚರಿಸಬಹುದಾಗಿರುತ್ತದೆ.

By admin

ನಿಮ್ಮದೊಂದು ಉತ್ತರ

error: Content is protected !!