ಶಿವಮೊಗ್ಗ, ಸೆಪ್ಟಂಬರ್ 12
: ಮಕ್ಕಳ ಭವಿಷ್ಯ ಉಜ್ವಲವಾದಾಗ ಕುಟುಂಬ ಜೀವನ ಸಹಜವಾಗಿ ನೆಮ್ಮದಿಯಿಂದ ಕೂಡಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಹೇಳಿದರು.
ಅವರು ಸೆ.೧೦ ರಂದು ನಗರದ ಹೊರ ವಲಯದಲ್ಲಿರುವ ಪೇಸ್ ಕಾಲೇಜಿನ ಶ್ರೀಮತಿ ಜಯಲಕ್ಷ್ಮಿ ಈಶ್ವರಪ್ಪ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘ, ಸೌಹಾರ್ದ ಮತ್ತು ಗೃಹ ನಿರ್ಮಾಣ ಸಹಕಾರ ಸಂಘಗಳ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನೌಕರರ ಸಂಘವು ತನ್ನ ಸದಸ್ಯರು ಮಾತ್ರವಲ್ಲದೆ ನೌಕರರ ಕುಟುಂಬ ವರ್ಗ ಹಾಗೂ ಅವರ ಪ್ರತಿಭಾವಂತ ಮಕ್ಕಳ ಭವಿ?ದ ಬಗ್ಗೆಯೂ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರೋತ್ಸಾಹಿಸುಸುತ್ತಿರುವುದು ವಿಶೇ? ಎನಿಸಿದೆ ಎಂದರು.
ಪೋ?ಕರು ತಮ್ಮ ಮಕ್ಕಳ ಅಗತ್ಯಗಳನ್ನು ಪೂರೈಸಲುವುದು ಮಾತ್ರವಲ್ಲ ಅವರ ಚಲನವಲನಗಳ ಬಗ್ಗೆಯೂ ಗಮನಹರಿಸಬೇಕು. ಮಕ್ಕಳೂ ಕೂಡ ಪೋ?ಕರ ಆಸೆ-ನಿರೀಕ್ಷೆ ಗಳಿಗೆ ಪೂರಕವಾಗಿ ನಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು. ಮಕ್ಕಳ ಕುರಿತು ಪೋ?ಕರಲ್ಲಿ ನಿರೀಕ್ಷೆಗಳು ಹೆಚ್ಚಾಗಿವೆ. ವಿದ್ಯಾರ್ಥಿಗಳು ದೇಶದ ಮಾದರಿ ಪ್ರಜೆಗಳಾಗಿ ಗುರುತಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಮಾತನಾಡಿ, ಮಕ್ಕಳು ನಿರೀಕ್ಷಿತ ಗುರಿ ತಲುಪಲು ಸತತ ಪರಿಶ್ರಮ ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.?ಡಕ್ಷರಿ ಅವರು ಮಾತನಾಡಿ, ರಾಜ್ಯದಲ್ಲಿ ಸರ್ಕಾರಿ ನೌಕರರ ಸುಮಾರು ೭೦೦೦ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ಗೌರವಿಸಲಾಗುತ್ತಿದೆ. ಈ ರೀತಿ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಗೌರವಿಸುವ ರಾಜ್ಯದ ಏಕೈಕ ದೊಡ್ಡ ಸಂಘ ಇದಾಗಿದೆ. ವಿದ್ಯಾರ್ಥಿಗಳು ಕೂಡ ಪೋ?ಕರಿಗೆ ಹೊರೆ ಆಗದಂತೆ ಭವಿ? ರೂಪಿಸಿಕೊಳ್ಳಬೇಕು ಎಂದರು. ಮಕ್ಕಳು ಇಲ್ಲಿನ ಸಂಸ್ಕೃತಿ ಸಂಸ್ಕಾರವನ್ನು ಕಲಿತು ತಮ್ಮ ಪೋ?ಕರನ್ನು ಗೌರವಿಸಬೇಕು ಎಂದರು.
ಸಂಘವು ಈವರೆಗೆ ಸುಮಾರು ೨೫೦೦ ಜನರಿಗೆ ಅತ್ಯಂತ ಕಡಿಮೆ ಬೆಲೆಗೆ ನಿವೇಶನ ನೀಡಿದೆ. ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಸಹಕಾರಿ ಸದಸ್ಯರಿಗೆ ಅರ್ಜಿ ಸಲ್ಲಿಸಿದ ಒಂದು ಗಂಟೆಯೊಳಗೆ ೫ ಲಕ್ಷ ರೂ.ಗಳ ಸಾಲ ಸೌಲಭ್ಯ ನೀಡಲಾಗುತ್ತಿದೆ. ಅಲ್ಲದೇ ಸಂಘವು ಮುಂದಿನ ದಿನಗಳಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಸರ್ಕಾರವನ್ನು ಒತ್ತಾಯಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ನೌಕರರ ಪ್ರತಿಭಾವಂತ ಮಕ್ಕಳಿಗೆ ಗೌರವಿಸಲಾಯಿತು.
ಸಭೆಯಲ್ಲಿ ಆರ್.ಮೋಹನ್ ಕುಮಾರ್, ಪಾಪಣ್ಣ, ಕೃ?ಮುರ್ತಿ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರು ಉಪಸ್ಥಿತರಿದ್ದರು.