ಶಿವಮೊಗ್ಗ, ಸೆ.೧೧:
ಶಿವಮೊಗ್ಗ ನಗರದ ಬಸ್ಟ್ಯಾಂಡ್ ವೃತ್ತ ದಲ್ಲಿ ಸಿಗ್ನಲ್ ಅಳವಡಿಕೆಯಿಂದ ವಾಹನ ಸವಾರರರಿಗೆ ಕಿರಿಕಿರಿಯಾಗುವ ಜೊತೆಗೆ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಪರ್ಯಾಯ ಮಾರ್ಗ ಕಂಡುಕೊಳ್ಳುವ ಜೊತೆಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.


ಬಸ್ಟ್ಯಾಂಡ್ ವೃತ್ತದಲ್ಲಿ ನಿನ್ನೆಯಿಂದ ಹೊಸದಾಗಿ ಆರಂಭಗೊಂಡಿರುವ ಟ್ರಾಫಿಕ್ ಸಿಗ್ನಲ್‌ನಿಂದ ಬಿ.ಹೆಚ್.ರಸ್ತೆಯಿಂದ ಬರುವ ವಾಹನಗಳು, ಸಾಗರ ರಸ್ತೆ, ಎನ್.ಟಿ. ರಸ್ತೆಯಿಂದ ಬರುವ ವಾಹನಗಳು ಸುಮಾರು ವಾಹನಗಳು ಬಂದು ಸೇರುವ ಬಸ್ಟ್ಯಾಂಡ್ ವೃತ್ತದಲ್ಲಿ ಸುಮಾರು ೧ ಕಿ.ಮೀ ಉದ್ದಕ್ಕೂ

ವಾಹನಗಳು ನಿಲ್ಲುವುದು ಒಂದು ಕಡೆ ಕಂಡು ಬಂದರೆ ಇನ್ನೊಂದೆಡೆ, ಈ ರಸ್ತೆಗಳಲ್ಲಿ ಸದಾ ವಾಹನಗಳಿಂದ ತುಂಬಿರುವ ಸ್ಥಿತಿಯಿಂದ ಟ್ರಾಫಿಕ್ ಜಾಮ್ ಹಾಗೂ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ. ಅಲ್ಲದೇ ಸದಾಕಾಲ ವಾಹನ ದಟ್ಟಣೆ ಪರಿಣಾಮ ಜನರಿಗೆ ತೊಂದರೆ ಆಗುತ್ತಿದೆ ಎಂಬುದು ಆರೋಪ.


ಈ ರಸ್ತೆಗಳ ಸಿಗ್ನಲ್‌ಗಳಲ್ಲಿ ಆಂಬುಲೆನ್ಸ್ ಸಿಕ್ಕಾಕ್ಕಿಕೊಂಡರೆ ರೋಗಿಗಳು ಪ್ರಾಣ ಕಳೆದು ಕೊಳ್ಳುವ ಸಂಭವಗಳೂ ಇವೆ. ಸಿಗ್ನಲ್ ಅಳವಡಿಕೆ

ಒಳ್ಳೆಯದಾದರೂ ಸಹ ಭಾರಿ ವಾಹನ ದಟ್ಟಣೆಯ ಇಂತಹ ಸ್ಥಳಗಳಲ್ಲಿ ಸೂಕ್ತ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ಜೊತೆಗೆ ವಾಹನಗಳು ನಿಧಾನವಾಗಿ ತಮ್ಮ ತಮ್ಮ ಕಡೆ ಹೋಗಲು ಅವಕಾಶ ಮಾಡಿಕೊ ಡುವುದು ಒಳ್ಳೆಯದಲ್ಲವೇ.

By admin

ನಿಮ್ಮದೊಂದು ಉತ್ತರ

error: Content is protected !!