ಪಾಲಿಕೆ ಆರೋಗ್ಯಾಧಿಕಾರಿಯಿಂದ ಲಂಚದ ಬೇಡಿಕೆ: ಪ್ರತಿಭಟನೆ
ಶಿವಮೊಗ್ಗ: ಪಾಲಿಕೆಯಲ್ಲಿ ಟ್ರೇಡ್ ಲೈಸೆನ್ಸ್, ಕಟ್ಟಡ ಪರವಾನಿಗೆ, ಜನನ-ಮರಣ ಪ್ರಮಾಣ ಪತ್ರಕ್ಕೂ, ರಾಜಾರೋಷವಾಗಿ ಲಂಚ ತೆಗೆದುಕೊಳ್ಳುವ ಪಾಲಿಕೆಯ ಕೆಲವು ಲಂಚ ಬಾಕರು ಇದೀಗ ಸ್ಯಾನಿಟರಿ ಸೂಪರ್‌ವೈಸರ್ ಕೆಲಸಕ್ಕೆ1 ಲಕ್ಷ ರೂ. ಲಂಚವನ್ನು ಕೇಳುವುದರ ಮೂಲಕ ಪಾಲಿಕೆಯ ಮಾನ ಹರಾಜು ಹಾಕಿದ್ದಾರೆ.
ಹೊಸಮನೆಯ ಪಾಲಾಕ್ಷಿ ಎನ್ನುವವರು ಸ್ಯಾನಿಟರಿ ಸೂಪರ್‌ವೈಸರ್ ಕೆಲಸಕ್ಕೆ ಅರ್ಜಿ ಹಾಕಿದ್ದರು, ಕೆಲಸ ನೀಡಬೇಕಾದರೆ 1 ಲಕ್ಷ ರೂ. ನೀಡಬೇಕು, ನಾನು ಹಲವರಿಗೆ ಕೊಡಬೇಕಾ ಗಿದೆ. ಈಗ ನಡೆಯುತ್ತಿರುವುದೇ 1 ಲಕ್ಷ ಎಂದು ಪಾಲಿಕೆ ಆರೋಗ್ಯಾಧಿಕಾರಿ ಮದಕರಿ ನಾಯಕ್ ನೇರವಾಗಿ ಪಾಲಾಕ್ಷಿಗೆ ಹೇಳಿದ್ದು, ಇದರಿಂದ ಗಾಬರಿಗೊಂಡ ಅವರು ನಾನು ಕಡು ಬಡವನಾ ಗಿದ್ದು, ನನ್ನಲ್ಲಿ ಹಣವಿಲ್ಲ ಎಂದಾಗ ಆರೋಗ್ಯಾ ಧಿಕಾರಿ ರೋಷನ್ ಅವರಿಗೆ ಟೆಂಡರ್ ಆಗಿದೆ ಅವರಲ್ಲಿ ವಿಚಾರಿಸಿ ಎಂದಿದ್ದಾರೆ.
ಅವರು ೫೦ ಸಾವಿರಕ್ಕೆ ಬೇಡಿಕೆ ಇಟ್ಟಿದ್ದು, ಕೊನೆಗೆ ತನ್ನ ಆರ್ಥಿಕ ಸಂಕಷ್ಟ ತೋಡಿಕೊಂಡು ಮನೆಯಲ್ಲಿನ ಒಡವೆ ಅಡವಿಟ್ಟು 40 ಸಾವಿರ ನೀಡಿದ್ದಾರೆ. ಕೆಲಸದ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅವರಿಂದ ಫಾರಂ ಪಡೆದು ಭರ್ತಿ ಮಾಡಿ ನೀಡಿದ್ದಾರೆ. ಇಂದು ಕೆಲಸಕ್ಕೆಂದು ಬಂದಾಗ ನೀನು ಚುನಾವಣೆಗೆ ಸ್ಪರ್ಧಿಸಿದ್ದಿ, ಆದ್ದರಿಂದ ನಿನಗೆ ಕೆಲಸ ನೀಡಲು ಆಗುವುದಿಲ್ಲ ಎಂದು ಸಬೂಬು ಹೇಳಿದ್ದಾರೆ. ಇದರಿಂದ ನೊಂದ ಪಾಲಾಕ್ಷಿ ಇಂದು ಮಹಾನಗರ ಪಾಲಿಕೆಯ ಮುಖ್ಯ ದ್ವಾರದಲ್ಲಿ ಅಂಬೇಡ್ಕರ್ ಭಾವಚಿತ್ರ ಹಿಡಿದುಕೊಂಡು ನನಗೆ ನ್ಯಾಯ ಬೇಕು, ಪಾಲಿಕೆಯಲ್ಲಿ ಸ್ಯಾನಿಟರಿ ಸೂಪರ್‌ವೈಸರ್ ಕೆಲಸ ನೀಡಬೇಕು, ಲಂಚ ಬಾಕ ಅಧಿಕಾರಿ ಮದಕರಿ ನಾಯಕ್ ಅವರನ್ನು ಕೂಡಲೆ ಅಮಾನತು ಪಡಿಸಬೇಕೆಂದು ಆಗ್ರಹಿಸಿ ಏಕಾಂಗಿ ಪ್ರತಿಭಟನೆ ನಡೆಸಿದರು.
ನ.20ರಿಂದ ನೀರು ಸ್ಥಗಿತ
ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ಪ್ರದೇಶಾಭಿ ವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಪ್ರಾಧಿಕಾರದ ಸಭಾಂಗಣದಲ್ಲಿ ಇಂದು ನೀರು ಸಲಹಾ ಸಮಿತಿ ಸಭೆ ನಡೆಸಿದರು.
ಈ ಒಂದು ಸಭೆಯಲ್ಲಿ ಭದ್ರಾ ಯೋಜನೆಯ ಅಚ್ಚುಕಟ್ಟು ವ್ಯಾಪ್ತಿಯ 20-21ರ ಮುಂಗಾರು ಹಂಗಾ ಮಿನ ಬೆಳೆಗಳಿಗೆ ಭದ್ರಾ ಜಲಾಶಯ ದಿಂದ ಜುಲೈ ತಿಂಗಳ ೨೨ರಿಂದ ನೀರು ಹರಿಸಲಾಗುತ್ತಿದ್ದು, ಪ್ರಾಧಿಕಾರದ ಬೈಲಾ ಪ್ರಕಾರ 120 ದಿನಗಳು ಮಾತ್ರ ನೀರು ಹರಿಸಬೇಕಿದ್ದು, ಬರುವ ನವೆಂಬರ್ 19ಕ್ಕೇ ಅವಧಿ ಪೂರ್ಣ ಗೊಳ್ಳಲಿದ್ದು, ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ, ಅಚ್ಚುಕಟ್ಟು ವ್ಯಾಪ್ತಿಯ ರೈತರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ಅಲಿಸಲಾಯಿತು.
ನಂತರ ಬರುವ ನವೆಂಬರ್ 20ರ ಮಧ್ಯರಾತ್ರಿ 12ಗಂಟೆಗೆ ನೀರು ನಿಲ್ಲಿಸಲು ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಕಾಡ ನಿರ್ದೇ ಶಕರಾದ ಷಡಾಕ್ಷರಿ ಅವರು, ರುದ್ರ ಮೂರ್ತಿ ಅವರು, ರೈತ ಮುಖಂಡ ರಾದ ತೇಜಸ್ವಿ ಪಟೇಲ್ ಅವರು, ನೀರು ಬಳಕೆದಾರರ ಸಹಕಾರ ಮಹಾ ಮಂಡಳದ ನಿರ್ದೇಶಕರಾದ ದ್ಯಾವಪ್ಪ ರೆಡ್ಡಿ ಅವರು, ಮುಖ್ಯ ಎಂಜಿನಿಯರ್ ಯತೀಶ್ ಚಂದ್ರ ಅವರು, ಕಾಡ ಆಡಳಿತಾಧಿಕಾರಿ ಕೃಷ್ಣ ಮೂರ್ತಿ ಅವರು ಹಾಗೂ ಇನ್ನು ಹಲವಾರು ಪ್ರಮುಖರು, ರೈತ ಮುಖಂಡರು ಉಪಸ್ಥಿತರಿದ್ದರು.
ವಿದ್ಯಾದಾನ ಶ್ರೇಷ್ಠ ದಾನ: ಕೆ.ಬಿ. ಪ್ರಸನ್ನಕುಮಾರ್
ಶಿವಮೊಗ್ಗ: ವಿದ್ಯಾದಾನ ಶ್ರೇಷ್ಠ ದಾನವಾಗಿದ್ದು, ಮುಂದಿನ ಪೀಳಿಗೆಗೆ ವಿದ್ಯೆಯನ್ನು ಕೊಡ ಬೇಕಾಗಿರುವುದು ಪೋಷಕರ ಹಾಗೂ ಸಮಾಜದ ಮತ್ತು ಸರ್ಕಾರದ ಕರ್ತವ್ಯ ಹಾಗೂ ಜವಾಬ್ದಾರಿ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದ್ದಾರೆ.
ಅವರು ಇಂದು ನಗರದ ಮುಸ್ಲಿಂ ಹಾಸ್ಟೆಲ್ ಸಭಾಂಗಣದಲ್ಲಿ ಶಿವಮೊಗ್ಗ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ದಿಂದ ಆಯೋಜಿಸಿದ್ದ ಅಬ್ದುಲ್ ಕಲಾಂ ಅಜಾದ್ ಜಯಂತಿ ಮತ್ತು ನ್ಯಾಷನಲ್ ಏಜುಕೇಷನ್ ಡೇ ಪ್ರಯುಕ್ತ ವಿದ್ಯಾಬ್ಯಾಸಕ್ಕೆ ಒತ್ತುಕೊಟ್ಟ ಗಣ್ಯರಿಗೆ ಸನ್ಮಾನ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಎಷ್ಟೇ ಸಂಪತ್ತಿದ್ದರೂ ಅದು ಕಳೆದು ಹೋಗುತ್ತದೆ. ಆದರೆ, ವಿದ್ಯೆಯನ್ನು ಯಾರೂ ಕೂಡ ಕದಿಯಲು ಆಗುವು ದಿಲ್ಲ. ಅನೇಕ ವಿದ್ಯಾರ್ಥಿಗಳಿಗೆ ಒಳ್ಳೆಯ ವಿದ್ಯಾಬ್ಯಾಸ ಸಿಗುವುದಿಲ್ಲ. ಕೆಲವರಿಗೆ ದಿನನಿತ್ಯದ ಬದುಕೆ ಕಷ್ಟವಾಗಿರುತ್ತದೆ. ವಿದ್ಯಾಬ್ಯಾಸ ದೂರದ ಮಾತು. ಇಂತಹ ಸಂದರ್ಭದಲ್ಲಿ ಪೋಷಕರು ಮತ್ತು ಸಮಾಜ ತಾವು ಕಷ್ಟಪಟ್ಟು ಗಳಿಸಿದ್ದರಲ್ಲಿ ಆದಾಯದ ಒಂದು ಭಾಗವನ್ನು ವಿದ್ಯೆ ಗಾಗಿ ಮೀಸಲಿಟ್ಟು, ಅನ್ಯರಿಗೆ ವಿದ್ಯಾಬ್ಯಾಸ ಸಿಗುವಂತೆ ಮಾಡುವುದು ದೇವರ ಕೆಲಸ. ಯಾವ ಕೆಲಸದಿಂದ ಎಲ್ಲಾರಿಗೂ ಖುಷಿ ಯಾಗುತ್ತದೆಯೋ ಅದೇ ದೇವರ ಕೆಲಸ ಎಂದು ಭಾವಿಸಬೇಕು. ವಿದ್ಯೆ ಇದ್ದರೆ ಎಲ್ಲವೂ ಇದ್ದ ಹಾಗೆ. ದೇಶಕ್ಕೆ ಸತ್ ಪ್ರಜೆಗಳ ಅವಶ್ಯಕತೆ ತುಂಬಾ ಇದ್ದು, ವಿದ್ಯೆಯ ಜೊತೆಗೆ ದೇಶಕ್ಕೆ ಸತ್ ಪ್ರಜೆಗ ಳನ್ನು ರೂಪಿಸಬೇಕಾಗಿದೆ ಎಂದರು.
ಕಾಂಗ್ರೆಸ್ ಎಂದರೆ ಜನ ಸೇವೆ ಮಾಡುವ, ಸಾಮಾಜಿಕ ನ್ಯಾಯ ಒದಗಿ ಸುವ ಪ್ರಾಚೀನ ಇತಿಹಾಸವುಳ್ಳ ಪಕ್ಷವಾ ಗಿದ್ದು, ವಿದ್ಯೆಗೆ ಒತ್ತು ನೀಡುವವರನ್ನು ಸನ್ಮಾನಿಸುವ ಕಾರ್ಯವನ್ನು ನಗರದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಹಮ್ಮಿಕೊಂಡಿದ್ದು, ಅಭಿನಂದನೀಯ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎನ್.ರಮೇಶ್, ಚೇತನ್, ಮಹಮ್ಮದ್ ನಿಹಾಲ್, ಆಫ್ತಾ ಫಾರ್ವಿಜ್, ಪಾಲಿಕೆಯ ಮಾಜಿ ಸದಸ್ಯರಾದ ಅಸೀಪ್ ಮೊದಲಾದವರಿದ್ದರು.