ಶಿವಮೊಗ್ಗ, ಆ.12:

ನಗರದ ಜೆಸಿಐ ಶಿವಮೊಗ್ಗ ಮಲ್ನಾಡು ಸಂಸ್ಥೆಯು ಪಾಸೀಟೀವ್ ಮೈಂಡ್ ಆಸ್ಪತ್ರೆ ಸಹಯೋಗದಲ್ಲಿ ಹದಿಹರೆಯ ಮಕ್ಕಳಿಗಾಗಿ “ಹದ್ದು ಮೀರದಿರಲಿ ಹದಿಹರೆಯ” ಎಂಬ ವಿಶೇಷ ಕಾರ್ಯಗಾರವನ್ನು ಬರುವ 13 ಆಗಸ್ಟ್ ರ ನಾಳೆ ಸಂಜೆ 4.45 ಸರಿಯಾಗಿ ಅಂಬೇಡ್ಕರ್ ಭವನದಲ್ಲಿ ನಡೆಸಲಿದ್ದಾರೆ.

ವೈದ್ಯರುಗಳಾದ ಡಾ.ಎಸ್.ಟಿ. ಅರವಿಂದ್ ಹಾಗೂ ಡಾ. ಐಶ್ವರ್ಯ ಅರವಿಂದ್, ನಗರದ ಪಾಸಿಟಿವ್ ಮೈಂಡ್ ಆಸ್ಪತ್ರೆಯ ಮನೋವೈದ್ಯ ಸಲಹೆಗಾರರು, ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳು.
ಈ ಕಾರ್ಯಗಾರದಲ್ಲಿ ವಿಶೇಷವಾಗಿ ಹದಿಹರೆಯದ ಮಕ್ಕಳಿಗೆ ಮೊಬೈಲ್ ಫೋನ್, ಮಾದಕ ದ್ರವ್ಯ, ಮದ್ಯಪಾನ, ಸಾಮಾಜಿಕ ಜಾಲತಾಣ ಇನ್ನಿತರ ಹದಿಹರೆಯದವರು ಎದುರಿಸಬೇಕಾದ ಸವಾಲುಗಳ ಬಗ್ಗೆ ಸಲಹೆಗಳನ್ನು ತಜ್ಞರು ನೀಡುವರು.


ಮುಖ್ಯ ಅತಿಥಿಗಳಾಗಿ ಸೆಲ್ವಮಣಿ, ಜಿಲ್ಲಾಧಿಕಾರಿಗಳು, ಶಿವಮೊಗ್ಗ ಹಾಗೂ ಮಿಥುನ್ ಕುಮಾರ್, ಎಸ್ ಪಿ, ಶಿವಮೊಗ್ಗ, ಆಗಮಿಸಲಿರುವರು.
ಈ ಕಾರ್ಯಾಗಾರದಲ್ಲಿ ಪೋಷಕರೂ ಸಹ ತಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು. ಕಾರ್ಯಾಗಾರವು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಇರುವುದು. ಇದರ ಸದುಪಯೋಗವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು, ಪೋಷಕರು, ಶಿಕ್ಷಕರು ಪಡೆಯಬೇಕೆಂಬ ವಿನಂತಿಸಲಾಗಿದೆ.
ವಿವರಗಳಿಗೆ ಸಂಪರ್ಕಿಸಿ – ಟೀಮ್ ಜೆಸಿಐ. ಸುನಿಲ್ ನಲ್ಲೂರ್ – 9164519116 ಅವರನ್ನು ಸಂಪರ್ಕಿಸಿ
.

By admin

ನಿಮ್ಮದೊಂದು ಉತ್ತರ

error: Content is protected !!