ಶಿವಮೊಗ್ಗ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿಐಎಸ್‌ಎಲ್ ಕಾರ್ಖಾನೆಗೆ ತಾತ್ಕಾಲಿಕ ಚಾಲನೆ ನೀಡಬಾರದು. ಕಾರ್ಖಾನೆಯನ್ನು ಮುಚ್ಚಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ಹೇಳಿದರು.


ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾರ್ಖಾನೆ ಬಂದ್ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಎಲ್ಲೂ ಹೇಳಿರಲಿಲ್ಲ. ಇಲ್ಲಿನ ಕೆಲವು ಜನಪ್ರತಿನಿಧಿಗಳು, ಸಂಸದರು ಮಧ್ಯೆ, ಮಧ್ಯೆ ಬಂದು ಈ ರೀತಿ ಹೇಳಿಕೆ ಕೊಟ್ಟರು ವಿಐಎಸ್‌ಎಲ್, ಎಂಪಿಎಂ ಕಾರ್ಖಾನೆ ಶಿವಮೊಗ್ಗ ಜಿಲ್ಲೆಗೆ ಕಿರೀಟವಿದ್ದಂತೆ. ಕಾರ್ಖಾನೆ ನಡೆಸಲು ಹೊರೆ ಇರುತ್ತದೆ. ಅದನ್ನು ಉಳಿಸುವುದು ಕೇಂದ್ರ ಸರ್ಕಾರದ ಕೈಯಲ್ಲಿದೆ ಎಂದರು.


ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಈ ರೀತಿ ಹೇಳಿಕೆ ನೀಡುವುದರ ಮೂಲಕ ಅವರ ಯೋಗ್ಯತೆ ಏನು ಅಂತಾ ತೋರಿಸಿಕೊಟ್ಟಿದ್ದಾರೆ. ಅವರ ಬಗ್ಗೆ ಮಾತನಾಡುವುದಿಲ್ಲ. ನಾವು ರಾಜಕಾರಣಿಗಳು ಎಲ್ಲರಿಗೂ ಮಾದರಿಯಾಗಿರಬೇಕು. ಮೊದಲು ಖರ್ಗೆ ಅಂದ್ರು, ಆಮೇಲೆ ಇಲ್ಲ ಅಂದ್ರು. ವ್ಯಕ್ತಿಗತ ನಿಂದನೆ ಒಳ್ಳೆಯದಲ್ಲ. ಅದು ನಿಲ್ಲಬೇಕು. ಅಭಿವೃದ್ಧಿ ಕಾರ್ಯಕ್ರಮ ಕುರಿತು ಮಾತನಾಡಬೇಕು ಎಂದರು.
ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆದಿದೆ

ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಅದಕ್ಕೆ ನೀಡಿದ ಮಧು ಬಂಗಾರಪ್ಪ, ವರ್ಗಾವಣೆ ಕುರಿತು ಮಾತನಾಡುವ ಕುಮಾರಸ್ವಾಮಿ ಅವರು ಈ ಕೆಲಸವನ್ನು ಎ? ಸಲ ಮಾಡಿದ್ದಾರೆ ? ಪೆನ್ ಡ್ರೈವ್ ಇಟ್ಟುಕೊಂಡು ಬಂದರೂ ಏನು ಆಗಲಿಲ್ಲ. ಆ ರೀತಿ ದೂರು ಇದ್ದರೆ ನನಗೆ ತಿಳಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಈ ರೀತಿ ಹೇಳಿಕೆಗಳು ಅವರಿಗೆ ಶೋಭೆ ತರುವುದಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.


ರಾಹುಲ್ ಗಾಂಧಿ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು. ಈ ತೀರ್ಪಿನಿಂದಾಗಿ ಭಾರತದಲ್ಲಿ ಪ್ರಜಾಪ್ರಭುತ್ವ ಉಳಿದಿದೆ ಎನಿಸುತ್ತದೆ. ಕಾನೂನು ರೀತಿ ಬಂದಿರುವ ತೀರ್ಪನ್ನು ಸ್ವಾಗತ ಕೋರುತ್ತೇನೆ. ರಾಹುಲ್ ಗಾಂಧಿ ಅವರ ಧೈರ್ಯ ಮೆಚ್ಚಬೇಕು. ದೇಶವನ್ನು ಸುತ್ತುವುದರ ಜೊತೆಗೆ ಈ ರೀತಿ ಕ? ಅನುಭವಿಸಿ ಜಯಗಳಿಸಿದ್ದಾರೆ ಎಂದರು.


ಶಾಸಕರ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಶಾಸಕರು ಪತ್ರ ಬರೆದಿರುವುದರಲ್ಲಿ ಯಾವ ಅಸಮಾಧಾನ ಇಲ್ಲ. ಆದರೆ ಮಾಧ್ಯಮದಲ್ಲಿ ತೋರಿಸುವ ಬಗ್ಗೆ ನಮ್ಮ ಅಸಮಾಧಾನ ಇದೆ. ಶಾಸಕರು ಪತ್ರ ಬರೆದಿರುವುದು ಒಳ್ಳೆಯದು. ಪತ್ರ ಬರೆಯುವ ಹಕ್ಕು ಎಲ್ಲರಿಗೂ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಆದರೆ ಅಸಮಾಧಾನ ಇದ್ದಿದ್ದೇ ಆದರೆ ಪತ್ರ ಬರೆಯದ ಮಾತುಕತೆ ಮಾಡಬಹುದಿತ್ತು. ಹಿರಿಯರು ಪತ್ರ ಬರೆದಿರುವುದರಲ್ಲಿ ತಪ್ಪಿಲ್ಲ. ಸ್ನೇಹಿತರು ಸರಿ ಹೋಗುತ್ತದೆ ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!