ಶಿವಮೊಗ್ಗ, ಜು.28:
ಪ್ರತಿವರ್ಷದಂತೆ ಈ ವರ್ಷವೂ ಸಹ ಶಿವಮೊಗ್ಗ ನಗರದ ಕ್ರೀಡಾ ಪ್ರೇಮಿಗಳಿಗಾಗಿ ಹಾಗೂ 76 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್( ರಿ )ಶಿವಮೊಗ್ಗ ಹಾಗೂ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ “ಚುಂಚಾದ್ರಿ ಕಪ್ 2023” ರ ವಾಲಿಬಾಲ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರಿಗಾಗಿ ಆಗಸ್ಟ್ 11 ರಿಂದ 14 ರವರೆಗೆ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು,
ಈ ಕ್ರೀಡಾ ಕೂಟದ ದಿವ್ಯ ಸಾನ್ನಿಧ್ಯವನ್ನು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಯವರು ಸಾನ್ನಿಧ್ಯ ವಹಿಸಲಿದ್ದು, ಹಾಗೂ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ದಿವ್ಯ ಉಪಸ್ಥಿತಿ ವಹಿಸಿಸುವರು.
ತಮ್ಮ ಪ್ರೌಢಶಾಲಾ ಬಾಲಕ ಮತ್ತು ಬಾಲಕೀಯರ ತಂಡಗಳನ್ನು ಈ ಸ್ಪರ್ಧೆಗೆ ಕಳುಹಿಸಿ, ಚುಂಚಾದ್ರಿ ಕಪ್ 2023 ನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಕೋರುತ್ತೇವೆ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಕಡ್ಡಾಯವಾಗಿ ತಮ್ಮ ಶಾಲೆಯ ಕ್ರೀಡಾಪಟುಗಳ ಜೊತೆಯಲ್ಲಿ ಇರತಕ್ಕದ್ದು, ಒಂದು ವೇಳೆ ದೈಹಿಕ ಶಿಕ್ಷಣ ಶಿಕ್ಷಕರು ಮಕ್ಕಳ ಜೊತೆ ಇಲ್ಲದ ತಂಡಗಳಿಗೆ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಜೊತೆಗೆ ಶಾಲೆಯ ಪ್ರಾಂಶುಪಾಲರಿಂದ ದೃಢೀಕರಣ ಪತ್ರವನ್ನು ತರಬೇತಿದಾರರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ತರತಕ್ಕದ್ದು.
ತಮ್ಮ ತಂಡಗಳ ನೋಂದಣಿಗಾಗಿ ನಾವು ಕಳುಹಿಸಿರುವ ನೋಂದಣಿ ಪತ್ರದಲ್ಲಿ ವಿದ್ಯಾರ್ಥಿಗಳ ಮಾಹಿತಿಯನ್ನು ಭರ್ತಿ ಮಾಡಿ ಪ್ರಾಂಶುಪಾಲರು,ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಶರಾವತಿ ನಗರ, ಶಿವಮೊಗ್ಗ ಇವರಿಗೆ 03-8 – 2023 ರೊಳಗಾಗಿ ಕಳುಹಿಸಿಕೊಡಲು ಕೋರಲಾಗಿದೆ.
ಸೂಚನೆಗಳು : ತಂಡಗಳು ಕಡ್ಡಾಯವಾಗಿ ಕ್ರೀಡಾ ಸಮಸ್ತ ಧರಿಸಿ ಈ ಪಂದ್ಯಾವಳಿಯಲ್ಲಿ ಭಾಗವಹಿಸಬೇಕು.17 ವರ್ಷ ವಯೋಮಿತಿ ಮೀರಿರಬಾರದು (01-01-2007 ರ ನಂತರ ಜನಿಸಿರಬೇಕು )
ಕಡ್ಡಾಯವಾಗಿ 18 ಕಾಲಂ ಇರುವ ಗುರುತಿನ ಚೀಟಿ ತರಬೇಕು (ಇತ್ತೀಚಿನ ಭಾವಚಿತ್ರದೊಂದಿಗೆ ), ವಿದ್ಯಾರ್ಥಿಗಳ ಆಧಾರ ಗುರುತಿನ ಕಾರ್ಡ್, SATS ನಂಬರ್ ಹಾಗೂ ಶಾಲೆಯ ಡೈಸ್ ಕೋಡ್ ಕಡ್ಡಾಯವಾಗಿರುತ್ತದೆ.
9945833464,8971452532, 8880895404, 9964796101 ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ಸಂಸ್ಥೆಯ ಪ್ರಾಂಶುಪಾಲರಾದ ಹೇಮಾ ಎಸ್. ಆರ್.ರವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.