ಶಿವಮೊಗ್ಗ, ಜು.28:
ಚಿನ್ನಾಭರಣವನ್ನ ಕದ್ದು ನಂತರ ವಾಪಾಸ್ ಕೊಡುವುದಾಗಿ ಒಪ್ಪಿ ವಾಪಾಸ್ ಕೊಡದೆ ಸತಾಯಿಸಿದ ಮಗನ ಸ್ನೇಹಿತರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನ ದೊಡ್ಡಪೇಟೆ ಪೊಲೀಸರು ಬೇಧಿಸಿದ್ದಾರೆ.
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ಜ್ಯೋತಿ ಎಂಬುವರ ಮಗ ಶರ್ವಿನ್ ಹಾಗೂ ಆತನ ಸ್ನೇಹಿತರಾದ ಫಯಾಜ್, ರಾಹೀಲ್, ರೋಷನ್ ಇವರುಗಳು ಮನೆಯ ಗಾಡ್ರೇಜ್ ಬೀರುವಿನಲ್ಲಿಟ್ಟಿದ್ದ ಸುಮಾರು 2,45,950/-ರೂಗಳು ಬೆಲೆಬಾಳುವ ಬಂಗಾರದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿದ್ದರು.
ಈ ಬಗ್ಗೆ ಆರೋಪಿತರನ್ನು ವಿಚಾರ ಮಾಡಿದಾಗ ತಾವು ತೆಗೆದುಕೊಂಡಿರುವುದಾಗಿ ಒಪ್ಪಿ ವಾಪಾಸ್ ಬಂಗಾರದ ಒಡವೆಗಳನ್ನು ಕೊಡುವುದಾಗಿ ಹೇಳಿದ್ದು, ಈವರೆಗೂ ಕಳುವು ಮಾಡಿಕೊಂಡು ಹೋದ ಬಂಗಾರದ ಒಡವೆಗಳನ್ನು ಕೊಡದೇ ಇದ್ದುದರಿಂದ ಆರೋಪಿತರ ವಿರುದ್ಧ ಕಾನೂನುಕ್ರಮ ಜರುಗಿಸಿ ಬಂಗಾರದ ಒಡವೆಗಳನ್ನು ಕೂಡಿಸಿಕೊಡಬೇಕೆಂದು ಜ್ಯೋತಿಯವರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
ಪ್ರಕರಣದ ಆರೋಪಿ ಪತ್ತೆಯ ಬಗ್ಗೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಅಂಜನ್ ಕುಮಾರ್, ಪಿಎಸ್ಐ ವಸಂತ್ , ಮಹಿಳಾ ಪಿಎಸ್ಐಗಳಾದ ಮಂಜುಳಮ್ಮ ಉಮಾ ಪಾಟೀಲ್, ಎಎಸ್ಐ ಚಂದ್ರಶೇಖರ್ ಹಾಗು ಸಿಬ್ವಂದಿಗಳಾದ ಪಾಲಾಕ್ಷನಾಯ್ಕ, ಲಚ್ಚಾನಾಯ್ಕ,, ಗೋಪಾಲ ನಿತಿನ್ , ಚಂದ್ರನಾಯ್ಕ, ಶಶಿಧರ್, ರಮೇಶ್ ರವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.
ಆರೋಪಿತನಾದ ಮಹಮ್ಮದ್ ರಾಹೀಲ್ ಖಾನ್ -@ ರಾಹೀಲ್, ಬಿನ್ ದಾದಾಪೀರ್ 24 ಮುಸ್ಲಿಂ ಜನಾಂಗ ಲ್ಯಾಬ್ ಟೆಕ್ನಿಷಿಯನ್ ಕೆಲಸ ವಾಸ: ಬಾಪೂಜಿ ನಗರ 06 ನೇ ಕ್ರಾಸ್ ಶಿವಮೊಗ್ಗ ಹಾಲಿ ವಾಸ: ಹುಣಸೆಕಟ್ಟೆ ಹೆಚ್.ಕೆ ಜಂಕ್ಷನ್ ಹತ್ತಿರ ಭದ್ರಾವತಿ ತಾಲ್ಲೂಕ್ ಶಿವಮೊಗ್ಗ ಇವರನ್ನು ದಸ್ತಗಿರಿ ಮಾಡಿ ಸುಮಾರು 103000/- ರೂ ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ಪತ್ತೆ ಮಾಡಲು ಸತತ ಪ್ರಯತ್ನ ಮಾಡಿ ಅರೋಪಿಯನ್ನು ಬಂದಿಸಿದ್ದು ಸದರಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ರವರು ಅಭಿನಂದನೆ ಸಲ್ಲಿಸಿದ್ದಾರೆ