ಚಾರ್ಮುಡಿ ಘಾಟಿಯಲ್ಲಿನ ಪ್ರಸ್ತುತ ಸನ್ನಿವೇಶ/ ಪ್ರಯಾಣ ಕಷ್ಟ – ಎಚ್ಚರವಾಗಿರೋದು ಒಳಿತು- ತುಂಗಾತರಂಗ ದಿನಪತ್ರಿಕೆ

ಶಿವಮೊಗ್ಗ, ಜು.,25:
ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕರಾವಳಿ ಕಡೆಯಿಂದ ಬರುವ ಮಲ್ನಾಡಿನ ಹೆಬ್ಬಾಗಿಲುಗಳು ಮುಚ್ಚಿಕೊಳ್ಳುತ್ತಿವೆ.


ಅಲ್ಲಿನ ದಟ್ಟಕಾನನದ ನಡುವಿನ ರಸ್ತೆಗಳಲ್ಲಿ ಎಲ್ಲೆಲ್ಲೂ ಜಲಾವೃತವೇ ಕಾಣಿಸಿಕೊಳ್ಳುತ್ತಿದೆ.
ಶಿವಮೊಗ್ಗ ದಕ್ಷಿಣ ಕನ್ನಡ ಜಿಲ್ಲೆಗೆ ಚಿಕ್ಕಮಗಳೂರು ಮಾರ್ಗದಲ್ಲಿ ಸಂಪರ್ಕ ಕಲ್ಪಿಸುವ ಚಾರ್ಮುಡಿ ಘಾಟ್ ಬಹುತೇಕ ನೀರಿನಿಂದ ಆವೃತವಾಗಿದೆ. ಆ ರಸ್ತೆಯಲ್ಲಿ ಪ್ರಯಾಣಿಸುವುದು ಅತ್ಯಂತ ಕಷ್ಟಕರವಾಗಿದೆ.


ಇಂತಹ ಒಂದು ಸನ್ನಿವೇಶವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದವರೊಬ್ಬರು ಶಿವಮೊಗ್ಗ ಪತ್ರಕರ್ತ ನಾಗರಾಜ್ ಶಣೈ ಅವರಿಗೆ ತಲುಪಿಸಿದ್ದು ಅವರು ತಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಈ ಪರಿಸ್ಥಿತಿಯ ಹಾಗೂ ಪ್ರಸ್ತುತ ಸನ್ನಿವೇಶದ ವಿಡಿಯೋವನ್ನು ಹಾಕಿದ್ದಾರೆ.
ಅದರ ತುಣಕಿನೊಂದಿಗೆ ಇಂದು ಆ ರಸ್ತೆಯಲ್ಲಿ ಸಂಚಾರ ಕಷ್ಟವಾಗಿದೆ ಎಂಬುದನ್ನು ಜನರ ಗಮನಕ್ಕೆ ತರುವ ಚಿಕ್ಕದೊಂದು ಪ್ರಯತ್ನ ನಿಮ್ಮ ತುಂಗಾತರಂಗ ಪತ್ರಿಕೆಯ ಕಡೆಯದು.

By admin

ನಿಮ್ಮದೊಂದು ಉತ್ತರ

error: Content is protected !!