ಶಿವಮೊಗ್ಗ, ಜು.17 :

ತುರ್ತು ಹೃದಯ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದ ಹಿನ್ನೆಲೆಯಲ್ಲಿ ಮೂರು ದಿನದ ಹಸುಗೂಸನ್ನು ನಗರದಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್’ನಲ್ಲಿ ಶಿಫ್ಟ್ ಮಾಡಲಾಗಿದೆ.


ನಿನ್ನೆ ರಾತ್ರಿ ೧೦ ಗಂಟೆಗೆ ಸರ್ಜಿ ಮಕ್ಕಳ ಆಸ್ಪತ್ರೆಯಿಂದ ಝೀರೋ ಟ್ರಾಫಿಕ್’ನಲ್ಲಿ ಶಿಶುವನ್ನು ಕರೆದುಕೊಂಡು ಹೊರಟ ಆಂಬುಲೆನ್ಸ್ ತಡರಾತ್ರಿ ೧.೨೦ಕ್ಕೆ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ತಲುಪಿತು.


ಶಿಶುವಿಗೆ ಆಗಿದ್ದೇನು?: ಶಿವಮೊಗ್ಗದ ವೆಂಕಟೇಶ ನಗರದ ನೀಲೇಶ್ ಹಾಗೂ ಮೋನಿಕಾ ದಂಪತಿಗಳ ಮೂರು ದಿನಗಳ ಶಿಶುವಿನ ಹೃದಯದಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಮಗುವಿಗೆ ತುರ್ತಾಗಿ ತೆರೆದು ಹೃದಯದ ಚಿಕಿತ್ಸೆ ನಡೆಸುವ ಅವಶ್ಯತೆ ಎದುರಾಗಿತ್ತು. ಹೀಗಾಗಿ, ಶಿಶುವನ್ನು ಬೆಂಗ ಳೂರಿನ ನಾರಾಯಣ ಹೃದಯಾಲಯಕ್ಕೆ ತುರ್ತಾಗಿ ಶಿಫ್ಟ್ ಮಾಡುವ ಅವಶ್ಯತೆಯಿತ್ತು.

ಈ ಹಿನ್ನೆಲೆಯಲ್ಲಿ ಶಿಶುವನ್ನು ತುರ್ತಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರನ್ನು ಸಂಪರ್ಕಿಸಲಾಯಿತು. ಪೋಷಕರ ಮನವಿಗೆ ಕೆಲವೇ ಕ್ಷಣಗಳಲ್ಲಿ ಸ್ಪಂದಿಸಿದ ಎಸ್’ಪಿ ಅವರು ತತಕ್ಷಣವೇ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದಾರೆ.


ಕೆಲವೇ ಕ್ಷಣಗಳಲ್ಲಿ ಆಂಬುಲೆನ್ಸ್ ವ್ಯವಸ್ಥೆಯನ್ನೂ ಸಹ ಮಾಡಿ ರಾತ್ರಿ ೧೦.೧೦ ನಿಮಿಷಕ್ಕೆ ಶಿವಮೊಗ್ಗದಿಂದ ಝೀರೋ ಟ್ರಾಫಿಕ್’ನಲ್ಲಿ ಹೊರಟು ತಡರಾತ್ರಿ ೧.೩೦ಕ್ಕೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನಾರಾಯಣ ಹೃದಯಾಲಯವನ್ನು ತಲುಪಲಾಯಿತು. ಆಂಬುಲೆನ್ಸ್ ಚಾಲಕರಾದ ಜಗದೀಶ್ ಅವರು ೩ ಗಂಟೆ ೨೦ ನಿಮಿಷದಲ್ಲಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಇಂದು ಶಿಶುವಿಗೆ ತೆರೆದು ಹೃದಯದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ನಡೆದಿದೆ ಎಂದು ವರದಿಯಾಗಿದೆ.
ಶಿಶುವಿಗಾಗಿ ಹಾಗೂ ಪೋಷಕರ ಮನವಿಗೆ ತುರ್ತಾಗಿ ಸ್ಪಂದಿಸಿ ಕೆಲವೇ ಕ್ಷಣಗಳಲ್ಲಿ ಸ್ಪಂದಿಸಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಝೀರೋ ಟ್ರಾಫಿಕ್’ನಲ್ಲಿ ತೆರಳಿದ ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಜೀವ ಒತ್ತೆಯಿಟ್ಟು ಚಾಲನೆ ಮಾಡಿದ ಆಂಬುಲೆನ್ಸ್ ಚಾಲಕರು, ವೈದ್ಯಕೀಯ ಸಿಬ್ಬಂದಿಗಳನ್ನು ತುಂಗಾ ತರಂಗ ಅಭಿನಂದಿಸುತ್ತದೆ.

By admin

ನಿಮ್ಮದೊಂದು ಉತ್ತರ

error: Content is protected !!