ಶಿವಮೊಗ್ಗ ಖಾತೆ ಬದಲಾವಣೆಗೆ ಸಂಬಂಧಪಟ್ಟಂತೆ ಲಂಚ ಸ್ವೀಕರಿಸುತ್ತಿದ್ದ ಗ್ರಾಮಲೆಕ್ಕಿಗನನ್ನು ಲಂಚದ ಹಣದ ಜೊತೆಗೆ ಭ್ರಷ್ಟಾಚಾರ ನಿಗ್ರಹದಳದ ಪೊಲೀಸರು ಬಂಧಿಸಿರುವ ಘಟನೆ ಇಂದು ಮದ್ಯಾಹ್ನ ನಡೆದಿದೆ.
ಎಸಿಬಿ ಶಿವಮೊಗ್ಗ ಪೊಲೀಸರಿಗೆ ಹೊಸನಗರ ತಾಲೂಕು ರಿಪ್ಪನ್‌ಪೇಟೆ ಬಳಿಯ ಕೆರೆಹಳ್ಳಿ ಗ್ರಾಮದ ಗ್ರಾಮಲೆಕ್ಕಿಗ ರಾಘವೇಂದ್ರ ಅವರು ಇದೇ ಗ್ರಾ.ಪಂ.ವ್ಯಾಪ್ತಿಯ ಕೆಡ್ಡಲಗುಡ್ಡೆ ಗ್ರಾಮದ ಜೋಸೆಫ್‌ಚಾಕೊ ಅವರಿಗೆ ೧ಸಾವಿರ ಲಂಚ ಕೇಳದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ದೂರು ದಾಖಲಾಗಿದೆ.
ಎಸಿಬಿ ಡಿವೈಎಸ್‌ಪಿ ಲೋಕೇಶ್ ಜೆ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ವೀರೇಂದ್ರ ಅವರ ತಂಡ ಈ ದಾಳಿ ನಡೆಸಿದ್ದು, ಖಾತೆ ಬದಲಾವಣೆಯ ಲಂಚ ಸ್ವೀಕಾರದ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!