ದೇವಸ್ಥಾನದ ಬೀಗ ಮುರಿದು ಹುಂಡಿಯ ಲ್ಲಿದ್ದ ಹಣ ಒಡವೆ ಆಭರಣಗಳ ಕಳ್ಳತನ ಮಾಡಿದ್ದ ಕಳ್ಳರು ಪೊಲೀಸರ ಕೈಗೆ ಸಿಕ್ಕಿಬಿದ್ದಿ ದ್ದಾರೆ.


ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಜಂಬರಗಟ್ಟೆ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಮುರಿದು ಹುಂಡಿಯಲ್ಲಿದ್ದ ಹಣ ಮತ್ತು ಬಂಗಾರ, ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ್ದರು.

ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳಾದ ಬುಳ್ಳಾಪುರದ ರಘು (೨೬) ತರಗನಹಳ್ಳಿಯ ಮಣಿಕಂಠ (೨೬) ಇವರನ್ನು ದಸ್ತಗಿರಿ ಮಾಡಿ, ಚಿಕ್ಕಮಗಳೂರು ಸೇರಿದಂತೆ ಒಟ್ಟು ೧೩ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ

೩೨ಸಾವಿರ ರೂ.ಬೆಲೆ ಬಾಳುವ ಬೆಳ್ಳಿ ಮತ್ತು ಬಂಗಾರದ ಆಭರಣ, ದ್ವಿಚಕ್ರ ವಾಹನ ಹಾಗೂ ೭೨ ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿ ಕೊಂಡಿದ್ದಾರೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.


ಎಸ್‌ಪಿ ಮಿಥುನ್‌ಕುಮಾರ್‌ಅವರ ಮಾರ್ಗ ದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಭೂಮರೆಡ್ಡಿ, ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಜಿತೇಂದ್ರಕುಮಾರ್ ದಯಾಮ ಹೊಳೆಹೊ ನ್ನೂರು ಠಾಣಾ ನಿರಿಕ್ಷಕ ಆರ್.ಎಲ್.

ಲಕ್ಷ್ಮೀಪತಿ ನೇತೃತ್ವದಲ್ಲಿ, ಪಿ.ಎಸ್.ಐಗಳಾದ ಸುರೇಶ್, ರಮೇಶ್ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ ಲಿಂಗೇಗೌಡ, ಮಂಜುನಾಥ, ಪಿಸಿಗಳಾದ ವಿಶ್ವನಾಥ, ಚಂದ್ರಶೇಖರ್, ಮೆಹಬೂಬ್ ಬಿಲ್ಲಳ್ಳಿ ಮತ್ತು ಸುದರ್ಶನರವರನ್ನೊಳಗೊಂಡ ತಂಡ ಭಾಗವಹಿಸಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!