ಗ್ರಾಮಾಂತರ ಭಾಗದ ಕೊಮ್ಮನಾಳು ಗ್ರಾಮದ ಸರ್ಕಾರಿ ಪ್ರೌಢಶಾಲೆಯಿಂದ ಬನ್ನಿಕೆರೆ ಗ್ರಾಮದವರೆಗಿನ ಜಿಲ್ಲಾ ಹೆದ್ದಾರಿ ಈಗ ಕೆಸರಿನ ಗದ್ದೆಯಾಗಿದ್ದು ದುರಸ್ತಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೊಮ್ಮನಾಳು ಗ್ರಾಮದಲ್ಲಿರುವ ಪ್ರೌಢಶಾಲೆಗೆ ಅಕ್ಕ-ಪಕ್ಕದ ಊರಿನ ವಿದ್ಯಾರ್ಥಿಗಳು ಸುಮಾರು ೨ ಕಿಮೀ. ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಆದರೆ ಈ ರಸ್ತೆ ಈಗ ಕೆಸರಿನ ಗದ್ದೆಯಾಗಿದ್ದು
ಭತ್ತದ ನಾಟಿಮಾಡಲುಸಿದ್ಧ ಮಾಡಿದಂತಿದೆ. ಈ ರಸ್ತೆಯಲ್ಲಿ ಸಾರ್ವಜನಿಕರು ಓಡಾಡಬೇಕಾಗಿದೆ.ಅದರಲ್ಲೂ ವಯಸ್ಸಾದವರು, ರೋಗಿಗಳು
ಓಡಾಡುವುದೇ ಕಷ್ಟವಾಗಿದೆ.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದು,
ಅವ್ಯವಸ್ಥೆಯನ್ನು ನೋಡಿಯೂ ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ. ತಕ್ಷಣವೇ ಈ ರಸ್ತೆಯನ್ನು ಸರಿಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಪಡಿಸಿದ್ದಾರೆ.