ಶಿವಮೊಗ್ಗ: ಶಿವಮೊಗ್ಗ ನಗರ ತುಂಗಾ ನದಿಯ ಉತ್ತರ ದಂಡೆಯ ಮುಂಭಾಗದಲ್ಲಿ ಪಾದಚಾರಿ ಸೇತುವೆ ವಾಯುವಿಹಾರಕ್ಕೆ ಮೂಲಭೂತ ಸೌಕರ್ಯ ಅಭಿವೃದ್ಧಿ ಸೇರಿದಂತೆ ನದಿದಂಡೆಯ ಸೌಂದರ್ಯಿಕರಣಕ್ಕೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಅನೇಕ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಸ್ಮಾರ್ಟ್ ಸಿಡಿ ಎಂಡಿ ಚಿದಾನಂದ ವಠಾರೆ ಹೇಳಿದ್ದಾರೆ.


ಕಾಮಗಾರಿಯ ಕಿರುಪರಿಚಯ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೨೦೧೫ರಲ್ಲಿ ಸ್ಮಾರ್ಟ್ ಸಿಟಿ ಮಿ?ನ್ ಆರಂಭವಾಯಿತು .ಜೂನ್ ೨೫ರಲ್ಲಿ ೮ನೇ ವ?ಚರಣೆ ಮಾಡಲಾಗುತ್ತಿದೆ.


ಯೋಜನೆ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡುವ ಅವಶ್ಯಕತೆ ಇದೆ. ತುಂಗ ನದಿಯನ್ನ ರಿವರ್ ಸೈಡ್ ಪ್ರೊಜೆಕ್ಸ್ ಎಂದು ಕೈಗೆತ್ತಿಕೊಳ್ಳಲಾಗಿದೆ. ಗುಜರಾತಿನ ಸಾಬರ್‌ಮತಿ ನದಿ ದಂಡೆಯ ಮೇಲೆ ಅಭಿವೃದ್ಧಿ ಪಡಿಸಿದಂತೆ ತುಂಗಾ ನದಿಯಲ್ಲಿ ೨.೭ ಕಿ.ಮೀ. ಉದದ್ದ ವಾಕ್‌ಪಾತ್ ಮಾಡಲಾಗಿದೆ. ಇಲ್ಲಿ ಮೊದಲು ಕೊಳಚೆ ಪ್ರದೇಶವಾಗಿತ್ತು. ನದಿದಂಡೆಯನ್ನು ಒತ್ತುವರಿ ಮಾಡಲಾಗಿತ್ತು. ಅದನ್ನ ನಿವಾರಿಸಿ ಈಗ ಸುಂದರವಾಗಿ ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂದರು.


ರಿವರ್ ಫ್ರಂಟ್, ಚಿಲ್ಡ್ರನ್ ಸ್ಪೋರ್ಟ್ಸ್, ಬೈಪಾಸ್‌ನಿಂದ ಬೆಕ್ಕಿನಕಲ್ಮಠ ತನಕ ನಿರ್ಮಿಸಲಾಗಿದೆ. ಬೈಸಿಕಲ್‌ನಲ್ಲಿ ಸೈಕ್ಲಿಂಗ್‌ಗೂ ಅವಕಾಶವಿದೆ. ಲ್ಯಾಂಡ್ ಸ್ಕೇಪಿಂಗ್ ಇದೆ. ಐದು ಕಟ್ಟಡ ಇದೆ. ಫುಡ್ ಕ್ಯಾಂಟೀನ್ ಇದೆ. ಇಂಡೋರ್ ಗೇಮ್ಸ್ ಬ್ಯಾಸ್ಕೆಟ್ ಬಾಲ್ ಆಡುವ ವ್ಯವಸ್ಥೆ ಇದೆ. ವೀಕ್ಷಣೆಗಾಗಿ ವಾಚ್ ಟವರ್ ಇದೆ.
ಅಡಳಿತ ಕಚೇರಿ ಇದೆ. ಗಣಪತಿ ಹಬ್ಬದ ವೇಳೆ ಗಣಪತಿ ಮೂರ್ತಿಯನ್ನ ನದಿಗೆ ಬಿಡಲು ವಿಸರ್ಜನಾ ಪಾಯಿಂಟ್ಸ್ ಅನ್ನೂ ನಿರ್ಮಿಸಲಾಗಿದೆ. ವಾಟರ್ ಸ್ಟೋರ್ ಮಾಡಿ ಬೋಟಿಂಗ್‌ಗೆ ಅವಕಾಶ ನೀಡಲಾಗಿದೆ. ಬೋಟಿಂಗ್‌ಗೆ ೧.೮ ಕಿಮೀ. ಇರುತ್ತದೆ. ಐದು ಆಕ್ಟಿವಿಟಿ ವಾಲ್ ಇದೆ. ಪ್ರಕೃತಿಯನ್ನು ನೋಡಲು ಕಲ್ಲಿನ ಬೆಂಚ್ ಇದೆ. ಬಯಲು ರಂಗಮಂದಿರವಿದೆ. ವಿವಿಧೋದ್ದೇಶ ಕ್ರೀಡಾ ಸಂಕೀರ್ಣ ಇದೆ. ರಾಮಣ್ಣ ಶ್ರೇಷ್ಠಿ ಪಾರ್ಕ್ ಮತ್ತು ಗಾಯತ್ರಿ ಮಂಟಪದ ಹತ್ತಿರ ಪಾದಚಾರಿ ಮಾರ್ಗಕ್ಕೆ ಸೇತುವೆ ನಿರ್ಮಾಣ ಮಾಡಲಾಗಿದೆ.

ಪಹಿಳೆಯರಿಗೆ,ಪುರುಷರಿಗೆ ಮತ್ತು ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ. ಆಡಳಿತ ಮತ್ತು ಪ್ರಥಮ ಚಿಕಿತ್ಸಾ ಕೇಂದ್ರ ಮಾಡಲಾಗಿದೆ. ಉಗ್ರಾಣ ಕಚೇರಿ ಕೂಡ ಇದ್ದು, ಸುಂದರ ವಿದ್ಯುದ್ದೀಪಗಳ ಅಲಂಕಾರ ಮಾಡಲಾಗಿದ್ದು, ನಗರದ ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಲಾಗಿದೆ. ೯೫% ಕಾಮಗಾರಿ ಮುಗಿದಿದೆ ಆ.೧೫ರ ನಂತರ ಆರಂಭಿಸುವ ಸಾಧ್ಯತೆ ಇದೆ ಎಂದರು.


ಇದಕ್ಕೆ ೮೧ ಕೋಟಿ ರೂ. ವೆಚ್ಚವಾಗಿದೆ. ೨೩ ಕೋಟಿ ನಿರ್ವಹಣೆಗೆ ಇರುತ್ತದೆ. ರೆವಿನ್ಯೂ ಜನರೇಟ್ ಮಾಡಲಾಗುವ ಬಗ್ಗೆ ಯೋಚಿಸಲಾಗಿದೆ. ಸಿಸಿಟಿವಿ ಅಳವಡಿಸಲಾಗುತ್ತಿದೆ. ೭೦ಕ್ಕೂ ಹೆಚ್ಚು ಸಿಸಿ ಟಿವಿ ಅಳವಡಿಸಲಾಗಿದೆ. ೨೦ ಇ- ಸೈಕಲ್‌ಗಳನ್ನು ಸೈಕ್ಲಿಂಗ್‌ಗಾಗಿ ಇಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!