ಇದೊಂದು ಪ್ರಶ್ನೆಯೊಳಗಿನ ಸುದ್ದಿ
ಶಿವಮೊಗ್ಗ/ ಗಾಂಜಾ ಹೆಂಗ್ ಬೆಳೆದಿದ್ದರು ನೋಡ್ರಿ ನಾಳಿನ ಈ ವೈದ್ಯ ಮಹಾನುಭಾವರು…!
ಶಿವಮೊಗ್ಗ,
ಏನಾದರೂ ಆಗಲಿ ತಮ್ಮ ಮಕ್ಕಳು ಜೀವನದಲ್ಲಿ ಅತ್ಯುತ್ತಮ ವಿದ್ಯೆ ಪಡೆಯಬೇಕು. ದೇಶದ ಪ್ರಬುದ್ಧ ಸಮಾಜ ಸೇವಕನಾಗಬೇಕು. ಹಾಗೆಯೇ ಅವರ ಸಾಧನೆ ನಮಗೆ ಹೆಸರು ತರುವಂತೆ ಇರಬೇಕು ಎಂದು ತಂದೆ ತಾಯಿಗಳು ಯೋಚಿಸುವುದು ಸರಿಯಷ್ಟೇ.
ಆದರೆ ಶಿವಮೊಗ್ಗದ ಮೂವರು ವೈದ್ಯಕೀಯ ವಿದ್ಯಾಲಯದಲ್ಲಿ ಕಲಿಯುವ ಹಾಗೂ ಕಲಿತ ನಂತರದ ಈಗ ಅಗತ್ಯದ ತರಬೇತಿ ಪಡೆಯುತ್ತಾ ವೈದ್ಯಮಹಾಶಯನಾಗಬೇಕಿದ್ದವ ಕನಿಷ್ಠ ಚಿಲ್ಲರೆ ವ್ಯವಹಾರಕ್ಕೆ ಬಿದ್ದು ಗಾಂಜಾ ಮಾರಾಟ ಮಾಡುವ, ಅದನ್ನು ಬೆಳೆಯುವ ಸಾಹಸದಲ್ಲಿ ತೊಡಗಿ ಅದರಲ್ಲೇ ಸಿಕ್ಕು ಬಿದ್ದಿರುವುದು ಇಡೀ ಸಮಾಜದ ಇಂದಿನ ಕೆಲ ದುರುಳ ವಿಕೃತಮನಸ್ಥಿತಿಗಳನ್ನು ಪ್ರಶ್ನಿಸುವಂತೆ ಮಾಡಿದೆ.
ಎಂಬಿಬಿಎಸ್ ಸೀಟ್ ಸಿಗುವುದು ಸುಲಭದ ಮಾತೇನಲ್ಲ. ಕಷ್ಟಪಟ್ಟು ಓದಬೇಕು, ರ್ಯಾಂಕ್ ಪಡೆದು ಆ ಸೀಟನ್ನು ಪಡೆದುಕೊಳ್ಳಬೇಕು. ಇಲ್ಲವೇ ಕನಿಷ್ಠ ಪರೀಕ್ಷೆಯನ್ನು ಮುಗಿಸಿ ಅಪ್ಪ-ಅಮ್ಮನ ದುರಂಕಾರದ ದುಡ್ಡಲ್ಲಿ ಕಲಿಯಬೇಕು.ಈಗ ಸಿಕ್ಕು ಬಿದ್ದಿರುವವರು ಯಾವ ಕೆಟಗರಿಯವರು ಗೊತ್ತಿಲ್ಲ.
ಘಟನೆಯ ಸಮಸ್ತ ಮಾಹಿತಿಯನ್ನು ನಿಮ್ಮ ಮುಂದಿಡುವ ಒಂದು ಚಿಕ್ಕ ಪ್ರಯತ್ನ ಇದು.
ತಡವಾಗಿ ನೀಡಲು ಕಾರಣ ವೈದ್ಯ ಲೋಕದ ಕಲಿಕೆಯಲ್ಲಿ ತೊಡಗಿ ಅತ್ಯಂತ ನೀಚ ಮಟ್ಟಕ್ಕೆ ಸಿಲುಕಿ ತಮ್ಮ ಬದುಕನ್ನೇ ಕಳೆದುಕೊಂಡ ಅಂದರೆ ಹಾಳು ಮಾಡಿಕೊಂಡ ಇವರ ವಿಕೃತ ಮನೋಸ್ಥಿತಿಯನ್ನು ಸುಂದರ ಸದೃಢ ಸಮಾಜವನ್ನು ನಿರ್ಮಿಸುತ್ತಿರುವ, ಆರೋಗ್ಯವನ್ನು ಕಾಪಾಡುತ್ತಿರುವ ವೈದ್ಯ ಸಮುದಾಯದ ಹಾಗೂ ಕಲಿಯುತ್ತಿರುವ ಅಪಾರ ಮಕ್ಕಳ ಮನಸ್ಸಿಗೆ ಘಾಸಿಯಾಗಬಾರದೆಂದು ಎಂಬುದಾಗಿತ್ತಷ್ಟೆ.
ವಿವರ:
ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮನೆಯಲ್ಲೇ ಗಾಂಜಾ ಬೆಳೆದಿದ್ದನ್ನ ಗ್ರಾಮಾಂತರು ಪೊಲೀಸರು ಬೇಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಎಸ್ಪಿ ಮಿಥುನ್ ಕುಮಾರ್ ಎರಡು ದಿನದ ಹಿಂದೆ ಗಾಂಜಾ ಪ್ರಕರಣದಲ್ಲಿ ಮೆಡಿಕಲ್ ಕಾಲೇಜಿನ ಇಬ್ಬರನ್ನ ಬಂಧಿಸಲಾಗಿತ್ತು. ಆಗ 450 ಗಾಂಜಾ ಮಾರಾಟ ಮಾಡಿರುವುದು ಪತ್ತೆಯಾಗಿತ್ತು.
ನಿನ್ನೆ ಮೂರು ಜನ ಅರೆಸ್ಟ್ ಆಗಿದ್ದಾರೆ. ಮನೆಯಲ್ಲೇ ಗಾಂಜಾ ಬೆಳೆದ ವಿಘ್ನರಾಜ್, ವಿನೋದ್, ಪಾಂಡು ದೊರೆ ಎಂಬ ವಿದ್ಯಾರ್ಥಿಗಳಾಗಿದ್ದಾರೆ. ಈ ಮೂವರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ದಾಳಿಯಲ್ಲಿ 150 ಗ್ರಾಂ ಡ್ರೈಗಾಂಜಾ ಪತ್ತೆಯಾಗಿದೆ. ಆರ್ಟಿಪಿಷಿಯಲ್ ಆಗಿ ಗಾಂಜಾ ಬೆಳೆದಿರುವುದು ಬೆಳಕಿಗೆ ಬಂದಿದೆ. ಮನೆಯನ್ಬ ರೆಂಟ್ ಗೆ ಪಡೆದು ಬೆಡ್ ರೂಂ ನಲ್ಲೇ ಅರ್ಟಿಫಿಷಿಯಲ್ ಟೆಂಟ್ ನಲ್ಲಿ ಗಾಂಜಾ ಬೆಳೆದಿದ್ದಾರೆ ಎಂದು ಹೇಳಿದರು.
ಆನ್ ಲೈನ್ ನಲ್ಲಿ ಗಾಂಜಾ ಪಡೆದು ರಸಾಯನಿಕ ಗೊಬ್ಬರವನ್ನೂ ಖರೀದಿಸಿದ್ದಾರೆ. ಸಿಗರೇಟ್ ಬಟ್ಸ್ ಮೆಟರಿಯಲ್ ಸಿಕ್ಕಿದೆ ಈ ಮೂವರು ಮೆಡಿಕಲ್ ಕೊನೆಯ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿಸಿದರು.
ಸ್ಥಳೀಯರಿಗೆ ಮತ್ತು ತಮಿಳುನಾಡಿಗೆ ಮಾರಾಟ ಮಾಡಿರುವ ಅನುಮಾನವಿದೆ. ನಾಲ್ಕೈದು ತಿಂಗಳಿಂದ ಬೆಳೆಸಿರಬಹುದು ಎಂಬ ಮಾಹಿತಿ ಇದೆ. ಈ ಬಗ್ಗೆ ತನಿಖೆ ಆರಂಭವಾಗಿದೆ. ಮೂವರ ವಿರುದ್ಧ ಕ್ರಿಮಿನಲ್ ಹಿಸ್ಟರಿ ಇಲ್ಲ. ಸಿಟಿಯಲ್ಲಿ ಶಿವಮೊಗ್ಗದಲ್ಲಿ ಮೊದಲಬಾರಿ ಈ ಪ್ರಕರಣ ಪತ್ತೆಯಾಗಿದೆ ಎಂದರು.
ಬ್ಲಾಕ್ ಕಲರ್ 5×10 ಅಡಿಯಲ್ಲಿ ಟೆಂಟ್ ರೀತಿಯಲ್ಲಿ ಬೆಳೆಸಲಾಗಿದೆ. ಕಸ್ಟಮರ್ ಬಗ್ಗೆ ಪುರಾವೆ ಸಿಕ್ಕಿದೆ. ಕಾಲೇಜಿನ ಹಾಸ್ಟೆಲ್ ನಲ್ಲಿ ಗಾಂಜಾ ಮಾರಾಟ ಮತ್ತು ಬೆಳೆದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಂಟ್ರೋಲ್ ಆಗಿದೆ. ನಾನು ಸಹ ವಿಸಿಟ್ ಮಾಡಲಾಗುತ್ತಿದೆ. ಜಾಗೃತಿ ಮೂಡಿಸುವ ಬಗ್ಗೆನೂ ಇಲಾಖೆ ಮುಂದುವರೆಸಿದೆ. ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕವಾಗಿ ಪರಿಣಾಮ ಬೀರುತ್ತದೆ.
ಇಂಜಿನಿಯರ್, ಮೆಡಿಕಲ್ ಡಿಗ್ರಿ ಓದುತ್ತಿರುವವರ ಬಗ್ಗೆನೂ ಸಂಬಂಧಿಕರು ಸ್ನೇಹಿತರು ಗಮನ ಹರಿಸಬೇಕಿದೆ. ಏನಾದರೂ ಅನುಮಾನವಿದ್ದಲ್ಲಿ ಮಾಹಿತಿ ನೀಡಬೇಕಿದೆ. ಇದು ಕೆಟ್ಟ ಪರಿಣಾಮ ಬೀರಲಿದೆ. ಬಂಧಿತ ವಿದ್ಯಾರ್ಥಿಗಳಲ್ಲಿ ಇಬ್ಬರು ತಮಿಳುನಾಡು ಮತ್ತು ಕೇರಳದ ವಿದ್ಯಾರ್ಥಿಯಾಗಿದ್ದಾರೆ.
ಈ ಪ್ರಕರಣವೂ ಸಹ ಪುರಲೆಯಲ್ಲಿ ಪತ್ತೆಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ರಮೇಶ್, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಅಭಯ್ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.
ಹಣಕ್ಕಾಗಿ ಮ್ಯಾನೇಜ್ ಮೆಂಟ್ ಸೀಟಿನ ವ್ಯವಹಾರವಾ…?- ನಾಳೆ ನೋಡಿ