ನೆನಗುದಿಗೆ ಬಿದ್ದಿರುವ ಭದ್ರಾ ಮೇಲ್ದಂಡೆ ಯೋಜನೆಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಚಿತ್ರದುರ್ಗ ಜಿಲ್ಲಾಉಸ್ತುವಾರಿ ಸಚಿವ ಹಾಗೂ ಯೋಜನೆ ಮತ್ತು ಸಾಂಖಿಕ ಸಚಿವ ಡಿ. ಸುಧಾಕರ್ ಹೇಳಿದರು.


ಅವರು ಇಂದು ಬಿ.ಆರ್.ಪಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆ ಮತ್ತು ಇತರೆ ಕಾಮಗಾರಿಗಳ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.


ಭದ್ರಾ ಮೇಲ್ದಂಡೆ ಯೋಜನೆ ಪ್ರಮು ಖವಾಗಿ ಕುಡಿಯುವ ನೀರಿನ ಯೋಜನೆ ಯಾಗಿದೆ. ಈ ಯೋಜನೆಯಿಂದ ಚಿತ್ರದುರ್ಗ, ಶಿರಾ, ದಾವಣಗೆರೆ ಮತ್ತು ತುಮ ಕೂರು ಜಿಲ್ಲೆಗಳಿಗೆ ಅನುಕೂಲವಾಗುತ್ತದೆ. ಆದರೆ ಈ ಯೋಜನೆ ೨೦೧೮ರಿಂದಲೂ ಕುಂಠಿತಗೊಂಡಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಗೆ ಮಹತ್ವ ನೀಡಿದ್ದರಾದೂ ಅದು ಕಾರ್ಯಗತ ಆಗಿರಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಮತ್ತಷ್ಟು ತೀವ್ರಗೊಳಿಸಲು ಉದ್ದೇಶಿಸಿದೆ ಎಂದರು


ಈ ಯೋಜನೆಗೆ ಅನೇಕ ಸ್ಥಳೀಯ ಸiಸ್ಯೆಗಳಿವೆ. ಈ ಬಗ್ಗೆ ಈಗಾಗಲೇ ಮಾಹಿತಿ ತೆಗೆದುಕೊಳ್ಳತ್ತಿದ್ದೇನೆ ಕೆಲವು ಕಡೆ ಕೆಇಬಿಗೆ ಸಂಬಂಧಿಸಿದಂತೆ ೧೨ ಟವರ್ ಗಳನ್ನು ನಿರ್ಮಿಸಬೇಕಾಗಿದೆ. ರಸ್ತೆಗಳ ನಿರ್ಮಾಣ ಆಗಬೇಕಾಗಿದೆ. ಟವರ್ ನಿರ್ಮಿ ಸಲು ಇನ್ನೂ ಅನುಮತಿ ಸಿಕ್ಕಿಲ್ಲ. ಅರಣ್ಯ ಇಲಾಖೆ ಅನುಮತಿಕೂಡ ಬೇಕಾಗಿದೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟು ಕೊಂಡು ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.


ಯೋಜನೆ ಜಾರಿಗೆ ಸಂಬಂಧಿಸಿದಂತೆ ಮಾಹಿತಿ ಮತ್ತು ವರದಿಯನ್ನು ತರಿಸಿಕೊಳ್ಳುತ್ತೇನೆ. ಒಟ್ಟು ೧೭ಟಿಎಂಸಿ ನೀರನ್ನು ತುಂಗಾನದಿಯಿಂದ ಲಿಫ್ಟ್ ಮಾಡುವ ಉದ್ದೇಶ ಹೊಂದಲಾಗಿದೆ. ತುಂಗಾ ನದಿ ತುಂಬಿದಾಗ ಮಾತ್ರ ಲಿಫ್ಟ್ ಮಾಡಲಾಗುವುದು. ಹೆಚ್ಚುವರಿ ನೀರನ್ನು ಲಿಫ್ಟ್ ಮಾಡಲಾಗುತ್ತದೆಯಷ್ಟೆ. ಇದರಿಂದ ತುಂಗಾ ಅಣೆಕಟ್ಟಿನ ನೀರನ್ನು ಬಳಸುವಂ ತಾಗುವುದಿಲಮಳೆಗಾಲದಲ್ಲಿ ಮಾತ್ರ ನೀರನ್ನು ಲಿಫ್ಟ್ ಮಾಡಲಾಗುವುದು ಎಂದರು.


ಹಾಯ್‌ಹೊಳೆ, ಗೌಡನಕೆರೆ, ಮೊದಲಾದ ಕೆರೆಗಳು ಭರ್ತಿಯಾದ ಮೇಲೆ ಭದ್ರಾ ಮೇಲ್ದಂಡೆಗೆ ನೀರು ಹರಿಸಲಾಗಿದ್ದು, ಎರಡೂ ನದಿಯ ನೀರು ಸೇರಿ ಒಟ್ಟು ೩೨ ಟಿಎಂಸಿ ನೀರನ್ನು ಚಿತ್ರದುರ್ಗ ತುಮಕೂರು ಶಿರಾ ದಾವಣಗೆರೆ ಮೊದಲಾದ ಊರುಗಳಿಗೆ ನೀರು ಹರಿಸುವ ಯೋಜನೆ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಶಾಸಕ ಗೋಪಾಲಕೃಷ್ಣ, ಶಾಸಕ ವೀರೇಂದ್ರ ಪಪ್ಪಿ, ರಘುಮೂರ್ತಿ, ಮಾಜಿ ಸಚಿವ ಆಂಜನೇಯ, ರಾಜುಗೌಡ, ಗ್ರಾ.ಪಂ ಅಧ್ಯಕ್ಷ ಮಹೇಶ್ವರಪ್ಪ ಸೇರಿದಂತೆ ಹಲವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!