ಪರಿಸರ ದಿನದ ಮುನ್ನ ದಿನದ ತುಂಗಾತರಂಗ ಸಂಭ್ರಮ

ಪತ್ರಿ ವರುಷ ವಾರ್ಷಿಕ ಸಂಚಿಕೆ, ಕ್ಯಾಲೆಂಡರ್ ಅನ್ನು ಉಚಿತವಾಗಿ ನೀಡುತ್ತಿರುವ ನಿಮ್ಮ ಪತ್ರಿಕೆ. ಕಳೆದ ವರುಷದ ವಿಶೇಷಾಂಕ ಮುಖಪುಟ

ಶಿವಮೊಗ್ಗದ ನಿಮ್ಮೆಲ್ಲರ ಹಿರಿಮೆಯ ಪ್ರೀತಿಯ ತುಂಗಾತರಂಗ ದಿನಪತ್ರಿಕೆಗೆ ಜೂನ್ 4 ಎಂದರೆ ಹೊಸ ದಿನದ ಸಂಭ್ರಮ. 1980ರ ಸಾಲಿನಲ್ಲಿ ಜೂನ್ ನಾಲ್ಕರಂದು ಅಂದಿನ ಸಂಪಾದಕರಾದ ಜೇವಿಯರ್ ಡೇವಿಡ್ ಅವರು ಆರಂಭಿಸಿದ ತುಂಗಾತರಂಗ ದಿನಪತ್ರಿಕೆ ಇಂದು 44ರ ಸಂಭ್ರಮವನ್ನು ಆರಂಭಿಸಿದೆ.
ತುಂಗಾತರಂಗ ಕೇವಲ ಸುದ್ದಿಗಳಿಗೆ ಮಾತ್ರ ಸೀಮಿತವಾಗದೆ, ಪ್ರಗತಿಪರ, ಸೃಜನಶೀಲ ಹಾಗೂ ನೈಜತೆಯ ಬರಹಗಳ ಮೂಲಕ ತಮ್ಮನ್ನು ಸದಾ ತಲುಪುತ್ತಿರುವುದನ್ನು ತಾವುಗಳು ಗಮನಿಸಿದ್ದೀರಿ.
1980ರ ಸಾಲಿನಿಂದ 2011ರ ಆಗಸ್ಟ್ 15 ರವರೆಗೆ ಪತ್ರಿಕೆಯನ್ನು ಶಿಸ್ತು ಬದ್ದಾಗಿ ಜನರ ಧ್ವನಿಯಾಗಿ ನೀಡಿದ್ದ ಜೀವಿಯರ್ ಡೇವಿಡ್ ರವರು ಪತ್ರಿಕಾ ರಂಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನನ್ನನ್ನು ಗುರುತಿಸಿ ಈ ಜವಾಬ್ದಾರಿಯನ್ನು ನೀಡಿದರು.
ಡಿಬಿ ವಿಜಯಕುಮಾರ್ ಅವರ ಶುಭ ಹಾರೈಕೆಯೊಂದಿಗೆ ಅಂದಿನಿಂದ ತುಂಗಾತರಂಗ ಹೊಸ ಮಗ್ಗುಲಲ್ಲಿ ಗುರುತಿಸಿಕೊಳ್ಳಲು ತೊಡಗಿದೆ. ಆರಂಭದಲ್ಲಿ ಮುದ್ರಣದ ಜೊತೆಗೆ ಸಾಮಾಜಿಕ ಜಾಲತಾಣಗಳಾದ ಬ್ಲಾಗ್ ಹಾಗೂ ಫೇಸ್ಬುಕ್ನಲ್ಲಿ ಕಾಣಿಸಿಕೊಳ್ಳುತ್ತಾ ತನ್ನದೇ ಆದ ಅಪಾರ ಓದುಗನ್ನು ಸೃಷ್ಟಿಸಿಕೊಳ್ಳುತ್ತಾ ಬಂದಿತ್ತು. ತದನಂತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖವಾದ ವಾಟ್ಸಪ್ ನಲ್ಲಿ ನಿತ್ಯ ನಿರಂತರ ಸುದ್ದಿಗಳನ್ನು ನೀಡುತ್ತಿತ್ತು. ಹೀಗೆ 12 ವರ್ಷಗಳಿಂದ ಎಲ್ಲ ಸಾಮಾಜಿಕ ಜಾಲತಾಣಗಳ ಜೊತೆಗೆ ಕಳೆದ ನಾಲ್ಕು ವರ್ಷಗಳಿಂದ ಆರಂಭಿಸಿದ ತುಂಗಾತರಂಗ ಡಾಟ ಕಾಂ (tungataranga.com) ವೆಬ್ ನ್ಯೂಸ್ ಕೇವಲ ಜಿಲ್ಲೆಗೆ ಮಾತ್ರ ಸೀಮಿತವಾಗದೆ ವಿಶ್ವದಾಧ್ಯಂತ ತನ್ನದೇ ಲಕ್ಷಾಂತರ ಓದುಗರನ್ನು ಬೆಳೆಸಿಕೊಂಡಿದೆ. ಇದಕ್ಕೆ ಸ್ಪೂರ್ತಿಯಾಗಿ ನಿಂತು ಸದಾ ಬೆನ್ನು ತಟ್ಟಿದ ಓದುಗ ಬಳಗಕ್ಕೆ ನಾವುಗಳು ಆಭಾರಿಯಾಗಿದ್ದೇವೆ.

ಇಂದಿನ ದಿನಮಾನಗಳಲ್ಲಿ ಪತ್ರಿಕೆ ನಡೆಸುವುದೇ ಕಷ್ಟ ಎನ್ನುವ ಅತ್ಯಂತ ಕಠಿಣ ಕ್ಷಣಗಳನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸಿದ ಹಾಗೂ ಅದೇ ರೀತಿ ಜನರ ಧ್ವನಿಯಾಗಿ ತುಂಗಾತರಂಗ ನಿಮ್ಮ ನಡುವೆ ಕಾಣಿಸಿಕೊಳ್ಳಲು ಹಾಗೂ ವಿಶೇಷವಾಗಿ ನಿರಂತರವಾಗಿ ಪತ್ರಿಕೆಗೆ ಜಾಹೀರಾತುಗಳ ಮೂಲಕ ನೆರವಾಗುತ್ತಿರುವ ಜಾಹೀರಾತುದಾರರಿಗೆ ಮತ್ತು ಮುದ್ರಣದ ಪತ್ರಿಕೆಗಳ ಜಿಲ್ಲೆಯ ಚಂದಾದಾರರಿಗೆ ನಾವು ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇವೆ.
ನಮ್ಮ ವೆಬ್ ನ್ಯೂಸ್ ಸುಖಾಸುಮ್ಮನೆ ಅನಗತ್ಯವಾದ ಯಾವುದೇ ಮಾಹಿತಿಯನ್ನು ನೀಡದೆ ಅವಶ್ಯಕತೆಯ ಅತ್ಯಗತ್ಯದ ಮಾಹಿತಿಯನ್ನು ಅಷ್ಟೇ ನೀಡುತ್ತಾ ನಿಮ್ಮ ನಡುವೆ ಬೆಳೆದಿರುವುದನ್ನು ತಾವುಗಳು ಗುರುತಿಸಿದ್ದೀರಿ.

ಕೇವಲ ವಾಟ್ಸಾಪ್ ಒಂದರಲ್ಲೇ ಸುಮಾರು 36 ಗುಂಪುಗಳಲ್ಲಿ ಕನಿಷ್ಠ 500 ಜನರಂತೆ ಓದುಗರನ್ನು ಹೊಂದಿರುವ ತುಂಗಾತರಂಗ ಬಳಗದಿಂದ ಯಾರೂ ಹೊರ ಹೋಗಿಲ್ಲ.


ಏಕೆಂದರೆ ನಿತ್ಯ ಈ ಗುಂಪುಗಳಲ್ಲಿ ಬೆಳಗಿನ ಸುಂದರ ಸಾಹಿತ್ಯದ ಭಾವಗೀತೆ ಇಲ್ಲವೇ ತತ್ವಪದಗಳು ಭಕ್ತಿಗೀತೆಯ ಸುಮಧುರ ಹಾಡನ್ನು ನೀಡುತ್ತಾ ಬಂದಿದೆ. ಮತ್ತೊಂದು ವಿಶೇಷವೆಂದರೆ ಇದರ ಜೊತೆಗೆ ಪ್ರತಿ ಭಾನುವಾರ ರಾತ್ರಿ ಕನ್ನಡ ಚಿತ್ರರಂಗದ ಹಳೆಯ ಚಲನ ಚಿತ್ರಗೀತೆಗಳನ್ನು ನೀಡುವ ಕರ್ತವ್ಯವನ್ನು ತಪ್ಪದೇ ಮಾಡುತ್ತಿದೆ. ಇದು ನಮ್ಮ ಶ್ರಮದ ಕೆಲಸವಾದರೂ ಸಹ ಒಮ್ಮೆ ನೀಡಿದ ಹಾಡನ್ನು ಮತ್ತೊಮ್ಮೆ ಹಾಕಿರುವ ನಿದರ್ಶನಗಳು ಅತ್ಯಂತ ಕಡಿಮೆ ಎಂಬುದನ್ನು ನೀವುಗಳು ಸಹ ಗಮನಿಸಿದ್ದೀರಿ.

ಇದುನಿಮ್ಮ ತುಂಗಾತರಂಗ ಬಳಗದ ನಿರಂತರ ಜವಾಬ್ದಾರಿ- ೨೦೨೨ ರ ಕ್ಯಾಲೆಂಡರ್


ಪತ್ರಿಕಾ ರಂಗದಲ್ಲಿ ಸುಮಾರು 27 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ನನಗೆ ಇಂತಹದೊಂದು ಮಹತ್ತರ ಜವಾಬ್ದಾರಿಯನ್ನು ಕೊಡಿಸಲು ನನ್ನ ಪತ್ರಿಕಾ ರಂಗದ ಸ್ನೇಹಿತರಾದ ಪದ್ಮನಾಬ್, ಚಂದ್ರಶೇಖರ್ ಸೇರಿದಂತೆ ಹಲವರು ಕಾರಣ. ಜೊತೆಗೆ ನನ್ನ ಪತ್ರಿಕಾ ಜಗತ್ತಿನ ಎಲ್ಲಾ ಮಿತ್ರರು ನನಗೆ ಹೊಸ ಪತ್ರಿಕೆಯ ಜವಾಬ್ದಾರಿ ಹೊತ್ತಾಗ ಬೆನ್ನೆಲುಬಾಗಿ ನಿಂತು ಸಹಕರಿಸಿದ ಕ್ಷಣಗಳನ್ನು ಹಾಗೂ ಸಹಕರಿಸುತ್ತಿರುವ ಈ ದಿನಗಳನ್ನು ಎಂದಿಗೂ ಮರೆಯುವುದಿಲ್ಲ.


ತುಂಗಾತರಂಗ ದಿನಪತ್ರಿಕೆ ಈಗ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಗೂಗಲ್ ಪ್ಲಸ್, ಕೂ., ಟೆಲಿಗ್ರಾಂ, ಇನ್ಸ್ತಾಗ್ರಾಂ ಸೇರಿದಂತೆ ಎಲ್ಲೆಡೆ ಸುದ್ದಿ ರೂಪದಲ್ಲಿ ನಿಮ್ಮ ನಡುವೆ ಕಾಣಿಸಿಕೊಳ್ಳುತ್ತಿದೆ. ತಮ್ಮ ಪ್ರೀತಿ ವಿಶ್ವಾಸಕ್ಕೆ ನಾವು ಆಭಾರಿಯಾಗಿದ್ದೇವೆ. ಪತ್ರಿಕೆಯ ಜನ ದ್ವನಿ ನಿಲುವುಗಳಿಗೆ ಸದಾ ಬೆಂಗಾವಲಾಗಿರುವ ಆತ್ಮೀಯ ನಮ್ಮೆಲ್ಲಾ ಓದುಗ ದೊರೆಗಳಿಗೆ ಅಭಿನಂದನೆಗಳು.


ನಿಮ್ಮ ತುಂಗಾತರಂಗ ಹೊಸತನದ ಈ ದಿನದಲ್ಲಿ ಮತ್ತಷ್ಟು ಹೊಸ ಹೊಸ ಅಭಿಲಾಷೆಗಳನ್ನು ಹೊತ್ತು ನಿಮ್ಮ ಮುಂದೆ ಬರುತ್ತಿದೆ. ನಿಮ್ಮ ಶುಭಹಾರೈಕೆ ನಮ್ಮ ತುಂಗಾತರಂಗ ಪತ್ರಿಕಾ ಬಳಗದ ಮೇಲೆ ಸದಾ ಇರುತ್ತದೆ ಎಂಬ ಅತಿ ದೊಡ್ಡ ನಂಬಿಕೆಯೊಂದಿಗೆ..,
ವಂದನೆಗಳೊಂದಿಗೆ
ಎಸ್ ಕೆ ಗಜೇಂದ್ರ ಸ್ವಾಮಿ,
ಸಂಪಾದಕರು, ತುಂಗಾ ತರಂಗ ದಿನಪತ್ರಿಕೆ

ಇದು ಇಂದಿನ ನಿಮ್ಮ ತುಂಗಾತರಂಗ ದಿನಪತ್ರಿಕೆ, ನಮ್ಮ ವಾಟ್ಸಪ್ ಗುಂಪಿಗೆ ಬನ್ನಿ. ನಿಮಗೆ ನಿತ್ಯ ಕಿರಿಕಿರಿಯಿಲ್ಲದ ಸುದ್ದಿದೌತಣ, ಬೆಳಗಿನ ಹಾಡು ಇರುತ್ತೆ. https://chat.whatsapp.com/7SMCGIpYxv13TPhwElOoLe ಇಲ್ಲಿ ಸೇರಿ

By admin

ನಿಮ್ಮದೊಂದು ಉತ್ತರ

error: Content is protected !!