ಸಾಗರ, ಪಟ್ಟಣದ ಗಾಂಧಿಮೈದಾನದಲ್ಲಿ ಜೂನ್ ೬ ರಂದು ಮಧ್ಯಾಹ್ನ ೨-೩೦ ರಿಂದ ಸಾಗರ ರೈತ ಉತ್ಪಾದಕರ ಸೌಹಾರ್ದ ಸಹಕಾರಿ ಸಂಘ ಯಮಿತ ಇದರ ವತಿಯಿಂದ ಸಿರಿ ಸಾಗರ ಉತ್ಪನ್ನಗಳ ಲೋಕಾರ್ಪಣೆ ಮತ್ತು ಆಹಾರ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ರಜಶ್ ಹೆಗಡೆ ಹಕ್ರೆ ತಿಳಿಸಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಶವಾರ ಸುದ್ದಿಗೋಷ್ಠಿಯಲ್ಲಿ ವಿವರ ಡಿದ ಅವರು, ಐಡಿಎಫ್ ನ ಕಾರ್ಯರ್ವಾಹಕ ಟ್ರಸ್ಟಿ ಟಿ.ವಿ.ಶ್ರೀಕಾಂತ ಶೆಣೈ ಅವರು ರೈತ ಉತ್ಪಾದಕ ಸಂಸ್ಥೆಗಳ ಕುರಿತು ಮಾಹಿತಿ ಡಲಿದ್ದು, ವೃತ್ತ ಉಪಕುಲಪತಿ ಡಾ.ಎಂ.ಎಸ್.ವಿಘ್ನೇಶ್ ಮಂಚಾಲೆ ಅವರು ಕಾರ್ಯಕ್ರಮ ಉದ್ಘಾಟಿಸಿ, ಕೃಷಿಯಲ್ಲಿ ತಾಂತ್ರಿಕ ಪ್ರಗತಿ ಕುರಿತು ಮಾತನಾಡುವರು. ಹಿರಿಯ ಸಹಕಾರಿ ಧುರೀಣ ಎಚ್.ಎಸ್.ಮಂಜಪ್ಪ ಸೊರಬ ಅವರು ರೈತರ ಅಭಿವೃದ್ಧಿಯಲ್ಲಿ ಸಹಕಾರಿಯ ಪಾತ್ರ ಕುರಿತು ಮಾತನಾಡುವರು.
ನಂತರ ಸಂಜೆ ೪ ಗಂಟೆಗೆ ರಾಜ್ಯ ಹೊಟೇಲ್ ಮಾಲೀಕರುಗಳ ಸಂಘದ ವಲಯ ಕಾರ್ಯದರ್ಶಿ ಮಧುರಾ ಹೋಟೆಲ್ ಮಾಲೀಕರಾದ ಎಚ್.ಎನ್.ಉಮೇಶ್ ಅವರು ಆಹಾರ ಮೇಳ ಉದ್ಘಾಟಿಸುವರು. ಸಾಗರ ರೈತ ಉತ್ಪಾದಕರ ಸಂಘದ ಅಧ್ಯಕ್ಷ ರಜಶ್ ಹೆಗಡೆ ಟಿ.ಎನ್.ಹಕ್ರೆ ಅಧ್ಯಕ್ಷತೆ ವಹಿಸುವರು. ಕೃಷಿಕರು, ರೈತ ಮಹಿಳೆಯರು ಆಗಮಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಸಂರ್ಘದ ರ್ದೇಶಕ ನಾಗೇಂದ್ರ ಸಾಗರ್ ಮಾತನಾಡಿ, ಭಾರತ ಸರ್ಕಾರದ ಮಹಾತ್ವಾಕಾಂಕ್ಷಿಯ ಯೋಜನೆ ಇದಾಗಿದ್ದು, ದೇಶದಾದ್ಯಂತ ೧೦ ಸಾವಿರ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಿದ್ದು, ಕರ್ನಾಟಕ ರಾಜ್ಯದ ಸೌಹಾರ್ದ ಸಹಕಾರಿ ಕಾಯ್ದೆಯಡಿ ೧೭-೨-೨೨ ರಂದು ಸಾಗರ ರೈತ ಉತ್ಪಾದಕರ ಸೌಹಾರ್ದ ಸಹಕಾರಿ ಸಂಘ ಯಮಿತವು ನೋಂದಣಿಯಾಗಿದೆ. ರೈತರು ಬೆಳೆದ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ ರೈತರಿಗೆ ಯೋಗ್ಯ ಬೆಲೆ ಕೊಡಲಾಗುವುದು. ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ವಿವಿಧ ಗ್ರಾಮಗಳ ರೈತರು ಈ ಸಂಘದ ಷೇರುದಾರರಾಗಬಹುದು. ಈಗಾಗಲೇ ಸಂಘದಲ್ಲಿ ೩೨೪ ಷೇರುದಾರರು ನೋಂದಾವಣಿ ಮಾಡಿದ್ದು, ೧೫೦೦ ಷೇರುದಾರರ ಗುರಿ ಹೊಂದಲಾಗಿದೆ ಎಂದರು.
ಭಾರತ ಸರ್ಕಾರದ ೧೦ ಸಾವಿರ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸುವ ಯೋಜನೆಯಡಿ ರಾಷ್ಟ್ರೀಯ ಸಹಕಾರಿ ವಿಕಾಸ ಮಗ, ನವದೆಹಲಿ ಇದರಿಂದ ಅನುಷ್ಠಾನಗೊಳ್ಳುತ್ತಿದೆ. ಬೆಂಗಳೂರು ಮೂಲದ ಇಶಿಯೇಟಿವ್ಸ್ ಫಾರ್ ಡೆವಲೆಪ್‌ಮೆಂಟ್ ಫೌಂಡೇಶನ್ (ಐಡಿಎಫ್) ಸಂಸ್ಥೆಯು ಈ ಸಹಕಾರಿಗೆ ಎಲ್ಲ ರೀತಿಯ ಮಾರ್ಗದರ್ಶನ ಮತ್ತು ನೆರವು ಡುತ್ತಿದೆ ಎಂದರು.
ರೈತರ ಕೃಷಿ ಉತ್ಪನ್ನಗಳಿಗೆ ನೇರ ಮಾರುಕಟ್ಟೆಯ ಪ್ರಯತ್ನ, ಕೃಷಿ ಪರಿಕರಗಳ ಪೂರೈಕೆದಾರರು, ತಯಾರಕುರ ಸಂಪರ್ಕ ಜಾಲ ಬೆಳೆಸುವುದು, ರೈತರ ಅಗತ್ಯದ ಕೃಷಿ ತಂತ್ರಜ್ಞಾನಗಳ ಮತ್ತು ಹೊಸ ಆವಿಷ್ಕಾರಗಳ ಮಾಹಿತಿ ಪಡೆದು ಅಗತ್ಯ ಪರಿಕರಗಳನ್ನು ಒದಗಿಸುವುದು. ಉತ್ಪನ್ನಗಳ ಮೌಲ್ಯವರ್ಧನೆ, ರೈತರಿಗೆ ಅಗತ್ಯ ತರಬೇತಿ, ಸುಸ್ಥಿರ ಸಾವಯವ ಕೃಷಿಗೆ ಪ್ರೋತ್ಸಾಹ, ಸರ್ಕಾರ ಮತ್ತು ಇತರ ಸಂಸ್ಥೆಗಳ ಯೋಜನೆಗಳ ಬಗ್ಗೆ ಅರಿವು – ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕಾರ್ಯಪ್ರವೃತ್ತರಾಗಿ ಷೇರುದಾರರ ಮತ್ತು ಕೃಷಿಯ ಒಳಿತಿಗೆ ಬೇಕಾದ ಎಲ್ಲ ಚಟುವಟಿಕೆಗಳನ್ನು ಸಂಘವು ನಡೆಸುವ ಉದ್ದೇಶ ಹೊಂದಿದೆ ಎಂದರು.
ಯೋಜನೆಯ ಕಾರ್ಯಕ್ರಮ ಸಂಯೋಜಕ ರಾಜೇಂದ್ರ ಹೆಗಡೆ ಮಾತನಾಡಿ, ರೈತ ಉತ್ಪಾದಕರ ಸಂಘಕ್ಕೆ ಐಡಿಎಫ್ ಸೂಕ್ತ ಮಾರ್ಗದರ್ಶನ ಮಾಡುತ್ತದೆ. ತರಬೇತಿ, ಹಣಕಾಸು ಸೌಲಭ್ಯ ಒದಗಿಸುತ್ತದೆ. ಸಾಂಬಾರು ಬೆಳೆ, ಜಾಯಿಕಾಯಿ ಇತ್ಯಾದಿಗಳನ್ನು ಆನ್‌ಲೈನ್, ಆಫ್‌ಲೈನ್ ನಲ್ಲಿ ಖರೀದಿಸಲಾಗುತ್ತದೆ. ಮೊದಲ ಮೂರು ವರ್ಷ ಐಡಿಎಫ್ ಅಗತ್ಯ ಮಾರ್ಗದರ್ಶನ ಮಾಡುತ್ತದೆ. ಇದರಿಂದ ರೈತರ ಸಂಸ್ಥೆಗೆ ನಂಬಿಕೆ ಬರುತ್ತದೆ ಎಂದರು.
ಭಾರತ ಸರ್ಕಾರದ ಪರಿಸರಕ್ಕಾಗಿ ಜೀವನಶೈಲಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಷಯಗಳನ್ನೂ ಸಂದರ್ಶಕರಿಗೆ ತಿಳಿಸುವ ಪ್ರಯತ್ನ ಮಾಡಲಾಗುವುದು. ಪರಿಸರ ಹಾ, ಕಸರಹಿತ ಮನೆಗಳು, ಏಕಬಳಕೆಯ ವಸ್ತುಗಳ ಸಮಸ್ಯೆಗಳು, ರಾಸಾಯಕಗಳಿಂದ ಆಗುವ ದುಷ್ಪರಿಣಾಮಗಳು ಹೀಗೆ ಹಲವು ವಿಷಯಗಳ ಬಗ್ಗೆ ಭಿತ್ತಿಪತ್ರಗಳ ಮೂಲಕ, ಚರ್ಚೆಗಳ ಮೂಲಕ ಮಾಹಿತಿ ಕೊಡಲಾಗುವುದು ಎಂದರು.
ಆಹಾರ ಮೇಳದಲ್ಲಿ ಸಾವಯವ, ರಾಸಾಯಕ ಮುಕ್ತ ವಸ್ತುಗಳ ಪ್ರದರ್ಶನ, ರೈತ ಮಹಿಳೆಯರು ಮನೆಯಲ್ಲೇ ಉತ್ಪಾದಿಸಿದ ಹಪ್ಪಳ, ಸಂಡಿಗೆ, ಮಲೆನಾಡಿನ ತಿಂಡಿ ತಿಸುವಳ ಪ್ರದರ್ಶನ ಮತ್ತು ಮಾರಾಟವಿರುತ್ತದೆ. ರೈತರು ಬೆಳೆದ ಎಲ್ಲ ರೀತಿಯ ಸಾಂಬಾರು ಬೆಳೆ ಉತ್ಪನ್ನಗಳನ್ನು ಸಹಕಾರಿಯಿಂದ ಖರೀದಿಸಲು ಚಾಲನೆ ಡಲಾಗುವುದು ಎಂದರು. ಹೆಚ್ಚಿನ ಮಾಹಿತಿಗೆ ಸಂಪರ್ಕ : ೯೯೪೫೦೭೬೦೭೦, ೮೨೭೭೧೭೩೨೨೭
ಸಂಘದ ರ್ದೇಶಕರಾದ ಗಣಪತಿ ಕೆ.ಟಿ.ಕೋಡ್ಸರ, ವಿಲಾಸ್ ಕಾಕಾಲ್, ನಟರಾಜ ಶಿರೂರು, ಅರುಣ ಗೌಡರ್ ಹಾಜರಿದ್ದರು.