ಶಿವಮೊಗ್ಗ,
೬೦ ವರ್ಷದ ಸಂಭ್ರಮದಲ್ಲಿರುವ ಜಿಲ್ಲಾ ವಾಣಿಜ್ಯಮತ್ತುಕೈಗಾರಿಕಾ ಸಂಘದ ಸಂಸ್ಥಾಪನಾ ದಿನಚರಣೆಯನ್ನು ಜೂ. ೪ರಂದು ಬೆಳಿಗ್ಗೆ ೧೦-೧೫ಕ್ಕೆ ಸಂಘದ ಶಾಂತಲಾ ಸ್ಪೆರೋಕಾಸ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಂiiಲ್ಲಿ ಮಾತನಾಡಿ, ದಿ. ಬಿ.ಎಂ. ನಂಜಪ್ಪ ಹಾಗೂ ದಿ. ಹೆಚ್.ಎಸ್. ಚನ್ನಬಸಪ್ಪನ ವರ ಕಲ್ಪನೆಯ ಕೂಸು ಇದಾಗಿದೆ. ದಿ. ಆರ್. ಎಸ್. ಅಶ್ವತ್ಥನಾರಾಯಣ ಅವರು ಸ್ಥಾಪಕ ಅಧ್ಯಕ್ಷರಾಗಿದ್ದರು. ನಂತರ ಹಲವಾರು ಪ್ರತಿಭಾವಂತರು ಈ ಸಂಘದ ಅಧ್ಯಕ್ಷರಾಗಿ ಕೈಗಾರಿಕಾ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.


ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿ ಕರ್ನಾಟಕ ವಾಣಿಜ್ಯ ಮತ್ತುಕೈಗಾರಿಕಾ ಮಹಾ ಸಂಸ್ಥೆಯ ಅಧ್ಯಕ್ಷ ಬಿ.ವಿ. ಗೋಪಾಲರೆಡ್ಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ೨೦೨೩ನೇ ಸಾಲಿನ ವಾಣಿಜ್ಯ ಪ್ರಶಸ್ತಿಯನ್ನು ಸುಧಾ ಟ್ರೇಡರ್ಸ್‌ನ ರಾಘವೇಂದ್ರ ರಾವ್ ಮತ್ತು ಪಾಲುದಾರರಿಗೆ ಎಪಿಎಂಸಿ ಆವರ ಣದಲ್ಲಿರುವ ಶಿವಲಿಂಗೇಶ್ವರ ಅರೆಕಾನಟ್ ಟ್ರೇಡರ್ಸ್‌ನ ಬಿ.ಎಂ. ಶಂಕರಪ್ಪ ಮತ್ತು ಪಾಲುದಾರರಿಗೆ, ಆಟೋ ಕಾಂಪ್ಲೆಕ್ಸ್‌ನ ಶ್ರೀ ಮಲ್ಲಿಕಾರ್ಜುನ ಆಗ್ರೋ ಸ್ಪೇರ‍್ಸ್‌ನ ಎಂ.ಎಂ. ಸುರೇಶ್ ಮತ್ತು ಪಾಲುದಾರರಿಗೆ ನೀಡಲಾಗಿದ್ದು, ಅವರನ್ನು ಸನ್ಮಾನಿಸಲಾಗು ವುದು ಎಂದರು.


ಹಾಗೆಯೇ ಬಸ್ ಮಾಲೀಕ ಆರ್. ರಂಗಪ್ಪ, ಅಂತರರಾಷ್ಟ್ರೀಯ ಯೋಗಪಟು ಸವಿತಾ ಮಾಧವ್, ರಾಜ್ಯ ಜ್ಯುವೆಲ್ಲರಿ ಫೆಡರೇಷನ್ನಿನ ಉಪಾಧ್ಯಕ್ಷ ವಿನೋದ್ ಕುಮಾರ್ ಜೈನ್ ಅವರಿಗೆ ವಿಶೇಷ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು ಎಂದರು.


ಹಾಗೆಯೇ ಸಂಸ್ಥಾಪಕರ ದಿನಾಚರ ಣೆಯ ಅಂಗವಾಗಿ ಹತ್ತು ಸ್ಟಾಲ್‌ಗಳನ್ನು ನಿರ್ಮಿಸಿ ಉತ್ಪನ್ನಗಳನ್ನು ಮಾರಾಟ ಮಾಡಲು ಉದ್ಯಮಿಗಳಿಗೆ ಅವಕಾಶ ಕಲ್ಪಿ ಸಲಾಗುವುದು. ಹಾಗೆಯೇ ಕೌಶಲ್ಯಾಭಿ ವೃದ್ಧಿಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾ ಗುವುದು ಎಂದರು.


ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿ. ಗೋಪಿನಾಥ್ ಜಂಟಿ ಕಾರ್ಯದರ್ಶಿ ಜಿ. ವಿಜಯಕುಮಾರ್, ನಿರ್ದೇಶಕರುಗಳಾದ ಬಿ.ಆರ್. ಸಂತೋಷ್, ಇ. ಪರಮೇಶ್ವರ, ಮರಿಸ್ವಾಮಿ, ಗಣೇಶ್ ಎಂ. ಅಂಗಡಿ, ವಿಶೇಷ ಆಹ್ವಾನಿತ ಎಂ.ಎ. ರಮೇಶ್ ಹೆಗಡೆ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!