ಬಡವರು, ಆರ್ಥಿಕ ಅಶಕ್ತರು, ಸಾಮಾಜಿಕ ಶೋಷಿತರಿಗಾಗಿ ಸ್ವಾತಂತ್ರ್ಯ ಬಂದ ಸಂದರ್ಭದಿಂದಲೂ ಕಾಂಗ್ರೆಸ್ ಪಕ್ಷ ನೂರಾರು ಉಚಿತ ಯೋಜನೆ ಗಳಾದ ಆಹಾರ, ಜಮೀನು, ನಿವೇಶನ ಹಂಚಿಕೆ, ಆರ್ಥಿಕ ಸಹಾಯ ಧನ ಕೊಡುತ್ತ ಬಂದಿರುವುದನ್ನು ಟೀಕಿಸುತ್ತಿದ್ದ ಭಾರತೀಯ
ಜನತಾ ಪಕ್ಷದ ಘಟಾನುಘಟಿ ನಾಯಕರು ಚುನಾವಣೆಯಲ್ಲಿ ಸೋಲುತ್ತೇವೆಂಬ ಭಯಕ್ಕೆ ಬಿದ್ದು ಉಚಿತ ಅಗ್ಗದ ಯೋಜನೆಗಳನ್ನು ಘೋಷಿಸಿ ತಮ್ಮ ಜನವಿರೋಧಿ ಸಿದ್ದಾಂತ ಮತ್ತು ಮಾನಸಿಕ ದಿವಾಳಿತನವನ್ನು ಪ್ರದರ್ಶಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ವೈ.ಬಿ.ಚಂದ್ರಕಾಂತ್ ಟೀಕಿಸಿದ್ದಾರೆ.
click
ಭಾರತೀಯ ಜನತಾ ಪಕ್ಷದ ಮೊದಲ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಜನರಿಗೆ ಉಚಿತವಾಗಿ ಶಿಕ್ಷಣ, ಆರೋಗ್ಯ ಮತ್ತು ವಸತಿಯನ್ನು ಮಾತ್ರವೇ ಕೊಡಬೇಕು,
ಇವುಗಳನ್ನು ಹೊರತುಪಡಿಸಿ ಯಾವುದೆ ಸೌಲಭ್ಯಗಳನ್ನು ಜನರಿಗೆ ಕೊಟ್ಟರೆದೇಶದ ಜನಗಳು ಸೋಂಬೇರಿಗಳಾಗು ತ್ತಾರೆಂದು ಹೇಳಿದ್ದನ್ನು ವೇಧವಾಕ್ಯವೆಂದು ನಂಬಿರುವ ಇಂದಿನ ಪ್ರಧಾನಮಂತ್ರಿ ನರೇಂದ್ರಮೋದಿ, ಗೃಹ ಸಚಿವ ಅಮಿತ್ ಷಾ, ಬಿ.ಜೆ.ಪಿ. ಪಕ್ಷದ ಹಿರಿಯ, ಕಿರಿಯ ರಾಜಕಾರಣಿಗಳು, ಕಾಂಗ್ರೇಸ್ ಪಕ್ಷಜನರಿಗೆ ಉಚಿತ ಸೌಲಭ್ಯಗಳನ್ನು ಕೊಡುತ್ತಿದ್ದುದನ್ನು ರಾಜಕೀಯ ಸಭೆ-ಸಮಾರಂಭಗಳಲ್ಲಿ ಟೀಕಿಸುತ್ತಿದ್ದರು.
ಆದರೆ, ಈಗ ಬಿ.ಜೆ.ಪಿ. ವಿಘ್ನ ಸಂತುಷ್ಟಿಗಳಿಗೆ ಅದ್ಯಾವ ಜ್ಞಾನೋದಯ ಆಯಿತೋ, ರಾಜ್ಯದ ಜನರಿಗೆ ಉಪಯೋಗಕ್ಕೆ ಬಾರದ ಹಲವು ಉಚಿತ ಅಗ್ಗದ ಯೋಜನೆಗಳನ್ನು ಘೊಷಿಸಿರುವುದು ನೋಡಿದರೆ ಭಾರತೀಯ ಜನತಾಪಕ್ಷದ ನಾಯಕರಿಗೆ ಇದುವರೆಗೆ ರಾಜಕೀಯ ಪ್ರಬುಧ್ದತೆ ಏನಾದರೂ ಇತ್ತೇ ಎನ್ನುವ ಅನುಮಾನ ಉದ್ಬವಿಸಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.